January 2022

ವಿದ್ಯಾರ್ಥಿನಿಯ ಅತ್ಯಾಚಾರಗೈದ ಶಿಕ್ಷಕ

ಜೈಪುರ: 11 ನೇ ತರಗತಿಯ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ಆರೋಪದಲ್ಲಿ ಶಿಕ್ಷಕರೊಬ್ಬರನ್ನು ಬಂಧಿಸಿರುವ ಘಟನೆ ರಾಜಾಸ್ಥಾನದ ಜೈಪುರ್ ನಲ್ಲಿ ನಡೆದಿದೆ. ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿನಿ ಮೇಲೆ ಈ ಶಿಕ್ಷಕ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂದು‌ ಹೇಳಲಾಗಿದೆ. ಆದರೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ ಎಂದು ತಿಳಿದುಬಂದಿದೆ. ಆದರೆ ಈ ಬಾರಿ ಶಿಕ್ಷಕನ ಮನೆಯಲ್ಲಿ ಅತ್ಯಾಚಾರ ನಡೆಯುತ್ತಿದ್ದಾಗ ನೆರೆಹೊರೆಯವರು ಬಾಲಕಿ ಕಿರುಚಾಡುವ ಶಬ್ಧ ಕೇಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಹೋಗಿ ನೋಡಿದಾಗ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ […]

ವಿದ್ಯಾರ್ಥಿನಿಯ ಅತ್ಯಾಚಾರಗೈದ ಶಿಕ್ಷಕ Read More »

ಗುರುಗಳಿಗೆ ದಾರಿ ಕಾಣದಾಗಿದೆ| ವಿವಿಧ ಬೇಡಿಕೆಗಳ ಈಡೇರಿಕೆಗೆ ದೇವರಿಗೆ ಮೊರೆಹೋದ ಉಪನ್ಯಾಸಕರು.

ಮಂಗಳೂರು: ದ.ಕ. ಜಿಲ್ಲೆಯ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವಭದ್ರತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇವರ ಮೊರೆ’ ಹೋಗುವ ವಿಭಿನ್ನ ಆಂದೋಲನ ಸೋಮವಾರ ನಡೆಯಿತು. ಕಳೆದ 30 ದಿನಗಳಿಂದ ಮುಷ್ಕರ, ಜಾಥಾ, ಪ್ರತಿಭಟನೆ, ತರಗತಿ ಬಹಿಷ್ಕಾರ ನಡೆಸಿ, ಸರ್ಕಾರವನ್ನು ಹಲವಾರು ಬಾರಿ ಒತ್ತಾಯಿಸಿದರೂ ಸ್ಪಂದನೆ ಸಿಗದ ಕಾರಣ ದ.ಕ. ಜಿಲ್ಲೆಯ ಸಮಸ್ತ ಅತಿಥಿ ಉಪನ್ಯಾಸಕರ ವತಿಯಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾರ್ಥನೆ ನಡೆಸಲಾಯಿತು.

ಗುರುಗಳಿಗೆ ದಾರಿ ಕಾಣದಾಗಿದೆ| ವಿವಿಧ ಬೇಡಿಕೆಗಳ ಈಡೇರಿಕೆಗೆ ದೇವರಿಗೆ ಮೊರೆಹೋದ ಉಪನ್ಯಾಸಕರು. Read More »

ಕಾರು ಮತ್ತು ಬೈಕ್ ಮೇಲೆ ಉರುಳಿದ ಟಿಪ್ಪರ್| 6 ಜನರು ದುರ್ಮರಣ|

ಬೆಂಗಳೂರು : 2 ಕಾರು ಹಾಗೂ ಬೈಕ್ ಮೇಲೆ ಟಿಪ್ಪರ್ ಒಂದು ಉರುಳಿ ಬಿದ್ದ ಪರಿಣಾಮ 6 ಜನರು ಮೃತಪಟ್ಟ ಘಟನೆ ಬೆಂಗಳೂರಿನ ಕುಂಬಳಗೋಡು ಬಳಿಯಲ್ಲಿ ನಡೆದಿದೆ. ಬೆಂಗಳೂರಿನ ಕುಂಬಳಗೋಡು ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 2 ಕಾರು ಹಾಗೂ ಬೈಕ್ ಮೇಲೆ ಟಿಪ್ಪರ್ ಒಂದು ಉರುಳಿ ಬಿದ್ದ ಪರಿಣಾಮ ಈ ಭೀಕರ ಘಟನೆ ನಡೆದಿದೆ. ಸಾವಿಗೀಡಾದವರ ಪೈಕಿ ನಾಲ್ವರು ಪುರುಷರು, ಇಬ್ಬರು ಮಹಿಳೆಯರು ಸೇರಿದ್ದಾರೆ. ಈ ಶವಗಳನ್ನ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

ಕಾರು ಮತ್ತು ಬೈಕ್ ಮೇಲೆ ಉರುಳಿದ ಟಿಪ್ಪರ್| 6 ಜನರು ದುರ್ಮರಣ| Read More »

ಶಿರಾಡಿ ಘಾಟ್ ನಲ್ಲಿ ರಸ್ತೆ ಸಂಚಾರಕ್ಕೆ ಮತ್ತೆ ತೊಡಕು| 6 ತಿಂಗಳು ಬಂದ್ ಆಗುವ ಸಾಧ್ಯತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75|

ಹಾಸನ: ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ಮತ್ತೆ ಬಂದ್ ಆಗುವ ಸಾಧ್ಯತೆ ಇದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪತ್ರ ಬರೆದಿದ್ದು, ಸಂಕ್ರಾಂತಿ ಬಳಿಕ ಮತ್ತೆ ಆರು ತಿಂಗಳು ಶಿರಾಡಿ ಘಾಟ್ನಲ್ಲಿ ನಾಲ್ಕು ಪಥದ ರಸ್ತೆ ನಿರ್ಮಾಣ ಕಾಮಗಾರಿಗಾಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಬಗ್ಗೆ ಮನವಿ ಮಾಡಲಾಗಿದೆ. ಹೀಗಾಗಿ ವಾಹನ ಸವಾರರಿಗೆ ಮತ್ತೆ ಸಂಕಷ್ಟ ಎದುರಾಗಲಿದೆ. ಹಾಸನದ ಮೂಲಕ ಹಾದು ಹೋಗುವ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ

ಶಿರಾಡಿ ಘಾಟ್ ನಲ್ಲಿ ರಸ್ತೆ ಸಂಚಾರಕ್ಕೆ ಮತ್ತೆ ತೊಡಕು| 6 ತಿಂಗಳು ಬಂದ್ ಆಗುವ ಸಾಧ್ಯತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75| Read More »

ಸಾವಿನ ಕೈಯಿಂದ ಪಾರಾಗಿ ಬಂದ ಸ್ಕೂಟರ್ ಸವಾರ| ಕೂದಲೆಳೆ ಅಂತರದಲ್ಲಿ ತಪ್ಪಿದ ಭೀಕರ ಅಪಘಾತ|

ಮಂಗಳೂರು: ಸ್ಕೂಟರ್ ಮತ್ತು ಬಸ್ ನಡುವೆ ಸಂಭವಿಸಬಹುದಾದ ಭೀಕರ ಅಪಘಾತವೊಂದು ಕೂದಳೆಲೆ ಅಂತರದಲ್ಲಿ ತಪ್ಪಿದ ಘಟನೆ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಘಾತದಿಂದ ಬಚಾವ್ ಆದ ಬೈಕ್ ಸವಾರನನ್ನು ಮಲಾರ್ ನಿವಾಸಿ ಎಂದು ಗುರುತಿಸಲಾಗಿದ್ದು, ಈತ ಮಂಗಳೂರಿನಿಂದ ಎಲ್ಯಾರ್ ಪದವು ಮಾರ್ಗವಾಗಿ ಮಲಾರ್ ಗೆ ತನ್ನ ಸ್ಕೂಟರ್ ನಲ್ಲಿ ಹೋಗುತ್ತಿದ್ದ.‌ ಎಲ್ಯಾರ್ ಶಾಲೆ ಬಳಿ ವೇಗವಾಗಿ ಹೋಗುತ್ತಿದ್ದಾಗ ಸಿಟಿ ಬಸ್ಸೊಂದು ಕ್ರಾಸ್ ಮಾಡೋದಕ್ಕೆ ಚಾಲಕ ಮುಂದಾಗಿದ್ದು ಬಸ್ ಮುಂದಕ್ಕೆ ಬಂದಿದೆ.‌ ಇದೇ ವೇಳೆ ವೇಗವಾಗಿ ಬಂದ ಸ್ಕೂಟರ್

ಸಾವಿನ ಕೈಯಿಂದ ಪಾರಾಗಿ ಬಂದ ಸ್ಕೂಟರ್ ಸವಾರ| ಕೂದಲೆಳೆ ಅಂತರದಲ್ಲಿ ತಪ್ಪಿದ ಭೀಕರ ಅಪಘಾತ| Read More »

ಸಿಎಂ ಬಸವರಾಜ ಬೊಮ್ಮಾಯಿಗೆ ಕೊರೊನಾ ದೃಢ

ಬೆಂಗಳೂರು: ಸಚಿವ ಆಶೋಕ್ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಕೊರೋನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಬಸವರಾಜ ಬೊಮ್ಮಾಯಿ ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ಖಚಿತಪಡಿಸಿದ್ದು, ಸಂಪರ್ಕಿತರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ನನ್ನ ಆರೋಗ್ಯ ಚೆನ್ನಾಗಿದೆ, ನಾನು ಹೋಮ್ ಕ್ವಾರಂಟೈನ್‌ನಲ್ಲಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್‌ ಆಗಿ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ.ನನ್ನ ಆರೋಗ್ಯ ಚೆನ್ನಾಗಿದೆ, ನಾನು ಹೋಮ್ ಕ್ವಾರಂಟೈನ್‌ನಲ್ಲಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್‌ ಆಗಿ ಟೆಸ್ಟ್ ಮಾಡಿಸಿಕೊಳ್ಳಿ

ಸಿಎಂ ಬಸವರಾಜ ಬೊಮ್ಮಾಯಿಗೆ ಕೊರೊನಾ ದೃಢ Read More »

ಸತತ 30 ಗಂಟೆಗಳ ಕಾಲ ಸಮುದ್ರದಲ್ಲಿ ಈಜಿ ಸಾವನ್ನು ಗೆದ್ದ ಮೀನುಗಾರ

ಕಾಸರಗೋಡು: ಸಮುದ್ರಕ್ಕೆ ಬಿದ್ದು ಸುದೀರ್ಘ 30 ಗಂಟೆಗಳ ಕಾಲ ಈಜಾಡಿ ಸಾವನ್ನು ಗೆದ್ದುಬಂದ ಮೀನುಗಾರರೋರ್ವರು ಅಚ್ಚರಿ ಸೃಷ್ಟಿಸಿದ ಘಟನೆ ವರದಿಯಾಗಿದೆ‌. ಮೀನುಗಾರನನ್ನು ತಮಿಳುನಾಡು ಮೂಲದ ಜೋಸೆಫ್ ಎಂದು ಗುರುತಿಸಲಾಗಿದೆ. ಇವರು ಡಿ. 31ರಂದು ಮಂಗಳೂರಿನಿಂದ ಮೀನುಗಾರಿಕಾ ದೋಣಿಯೊಂದರಲ್ಲಿ ಎಂಟು ಮಂದಿಯ ತಂಡದೊಂದಿಗೆ ತೆರಳಿದ್ದರು. ಜ. 6ರಂದು ಮುಂಜಾನೆ ಎರಡು ಗಂಟೆಯ ಸುಮಾರಿಗೆ ದೋಣಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ ಜೋಸೆಫ್ ನಾಪತ್ತೆಯಾಗಿದ್ದರು. ಆಗ ದೋಣಿ ಸಮುದ್ರ ದಡದಿಂದ ಸುಮಾರು 36 ನಾಟಿಕಲ್ ಮೈಲ್ ದೂರದಲ್ಲಿದ್ದು, ಬೆಳಗ್ಗೆ 11 ಗಂಟೆಯವರೆಗೆ

ಸತತ 30 ಗಂಟೆಗಳ ಕಾಲ ಸಮುದ್ರದಲ್ಲಿ ಈಜಿ ಸಾವನ್ನು ಗೆದ್ದ ಮೀನುಗಾರ Read More »

ಸೆಕ್ಸ್ ಗಾಗಿ ಪತ್ನಿಯರ ಎಕ್ಸ್ ಚೇಂಜ್| ದೇವರ ನಾಡಲ್ಲೊಂದು ಅನಾಗರಿಕ ದಂಧೆ| ಟೆಲಿಗ್ರಾಂ, ಮೆಸೇಂಜರ್ ನಲ್ಲಿ ನಡೆಯುತ್ತೆ ವ್ಯವಹಾರ|

ತಿರುವನಂತಪುರಂ: ಸೆಕ್ಸ್​ಗಾಗಿ ಪತ್ನಿಯರನ್ನೇ ವಿನಿಮಯ ಮಾಡಿಕೊಳ್ಳುವ ದಂಧೆ ನಡೆಸುತ್ತಾ ದಾಂಪತ್ಯ ಬದುಕಿಗೆ ಕೊಳ್ಳಿ ಇಡುತ್ತಿರುವ ವಿಚಿತ್ರ ದಂಧೆಯೊಂದು ಕೇರಳದಲ್ಲಿ ನಡೆಯುತ್ತಿದೆ. ಇಂತದ್ದೊಂದು ಅನಾಗರಿಕ ವ್ಯವಹಾರಕ್ಕಾಗಿ ಈ ನೀಚ ಕಾಮುಕರು ಟೆಲಿಗ್ರಾಂ, ಮೆಸೆಂಜರ್​ನಲ್ಲಿ ಗ್ರೂಪ್​ ರಚಿಸಿಕೊಂಡು ‘ಪತ್ನಿಯರ ವಿನಿಮಯ’ ದಂಧೆ ನಡೆಸುತ್ತಾ ಕೇರಳದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಕಾಚಲ್​ನಲ್ಲಿ ಹಣ ಮತ್ತು ಸೆಕ್ಸ್​ಗಾಗಿ ತಮ್ಮ ಪತ್ನಿಯರನ್ನು ವಿನಿಮಯ ಮಾಡಿಕೊಳ್ಳಲೆಂದೇ ದುಷ್ಕರ್ಮಿಗಳು ಟೆಲಿಗ್ರಾಂ, ಮೆಸೆಂಜರ್ ಗ್ರೂಪ್​ ರಚನೆ ಮಾಡಿಕೊಂಡಿದ್ದರು. ಕೇರಳದ ಮೂರು ಜಿಲ್ಲೆಯ 1 ಸಾವಿರಕ್ಕೂ

ಸೆಕ್ಸ್ ಗಾಗಿ ಪತ್ನಿಯರ ಎಕ್ಸ್ ಚೇಂಜ್| ದೇವರ ನಾಡಲ್ಲೊಂದು ಅನಾಗರಿಕ ದಂಧೆ| ಟೆಲಿಗ್ರಾಂ, ಮೆಸೇಂಜರ್ ನಲ್ಲಿ ನಡೆಯುತ್ತೆ ವ್ಯವಹಾರ| Read More »

ಹುಟ್ಟಿದ ಏಳೇ ದಿನಕ್ಕೆ 2ಲಕ್ಷಕ್ಕೆ ಮಾರಾಟವಾಯ್ತು‌ ಟಗರು ಮರಿ|

ವಿಜಯಪುರ: ಕೇವಲ 7 ದಿನದ ಟಗರು ಮರಿಯೊಂದು ಬರೋಬ್ಬರಿ 2 ಲಕ್ಷ ರೂಪಾಯಿಗೆ ಮಾರಾಟವಾಗಿ ಜನರನ್ನು ಆಶ್ಚರ್ಯಕ್ಕೀಡು ಮಾಡಿದ ಘಟನೆ ಜಿಲ್ಲೆಯ ಇಂಡಿ ಇಂಡಿ ಪಟ್ಟಣದಲ್ಲಿ ಸೋಮವಾರ ನಡೆದಿದೆ. ಪಟ್ಟಣದ ಟಗರು ಸಾಕಾಣಿಕೆದಾರ ಬಾನಪ್ಪ ಮಾಸ್ತರ್​ ಪೂಜಾರಿ ಅವರಿಗೆ ಸೇರಿದ 7 ದಿನದ ಟಗರು ಮರಿ ₹2 ಲಕ್ಷಕ್ಕೆ ಮಾರಾಟವಾಗಿದೆ.‌ ಈ ಟಗರು ಮರಿ ವಿಶೇಷ ತಳಿಯಾಗಿದ್ದಲ್ಲದೇ, ಇದು ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತಿದೆ. ಮರಿ ಟಗರು ಜನಿಸಿದ ಕೇವಲ 7 ದಿನ ಮಾತ್ರ ಕಳೆದಿವೆ. ಈ

ಹುಟ್ಟಿದ ಏಳೇ ದಿನಕ್ಕೆ 2ಲಕ್ಷಕ್ಕೆ ಮಾರಾಟವಾಯ್ತು‌ ಟಗರು ಮರಿ| Read More »

ಕರ್ನಾಟಕ ಮತ್ತೆ ಕಂಪ್ಲೀಟ್ ಲಾಕ್!? ಮುನ್ಸೂಚನೆ ನೀಡಿದ ಗೃಹ‌ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವಂತ ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂವನ್ನು ಲೆಕ್ಕಿಸದೇ ಕಾಂಗ್ರೆಸ್ ನಿಂದ ಮೇಕೆದಾಟು ಪಾದಯಾತ್ರೆಯನ್ನು ನಡೆಸಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಹೆಚ್ಚಾದರೆ ಮತ್ತೆ ಕಂಪ್ಲೀಟ್ ಲಾಕ್ ಡೌನ್ ಮಾಡಲಾಗುತ್ತದೆ. ಇದಕ್ಕೆ ಕಾಂಗ್ರೆಸ್ ಪಕ್ಷವೇ ಹೊಣೆಯಾಗಲಿದೆ ಎಂಬುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮುನ್ಸೂಚನೆ ನೀಡಿದ್ದಾರೆ. ಈ ಬಗ್ಗೆ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಸೋಂಕು ಹೆಚ್ಚಳವಾದರೆ ಮತ್ತೆ ಲಾಕ್ ಡೌನ್ ಮಾಡಬೇಕಾಗುತ್ತೆ. ತಿಂಗಳುಗಟ್ಟಲೇ ಲಾಕ್ ಡೌನ್ ಮಾಡಬೇಕಾದರೆ ಅದಕ್ಕೆ ಕಾಂಗ್ರೆಸ್ ಹೊಣೆಯಾಗಲಿದೆ.

ಕರ್ನಾಟಕ ಮತ್ತೆ ಕಂಪ್ಲೀಟ್ ಲಾಕ್!? ಮುನ್ಸೂಚನೆ ನೀಡಿದ ಗೃಹ‌ ಸಚಿವ ಅರಗ ಜ್ಞಾನೇಂದ್ರ Read More »