January 2022

ಕೊರೊನಾ ಹಿನ್ನೆಲೆ| ಜ.13ರಿಂದ ‘ಚಂದನ’ ದಲ್ಲಿ ಮತ್ತೆ ಪಾಠ ಶುರು|

ಬೆಂಗಳೂರು: ಕೊರೋನಾ ಕಾರಣದಿಂದಾಗಿ 1 ರಿಂದ 9ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಕೆಲವು ಜಿಲ್ಲೆಗಳಲ್ಲಿ ಬಂದ್ ಆಗಿವೆ. ಮಕ್ಕಳಿಗೆ ಪರ್ಯಾಯ ಕಲಿಕೆ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಸೋಮವಾರದಿಂದ ಶುಕ್ರವಾರದವರೆಗೆ ಚಂದನ ವಾಹಿನಿಯಲ್ಲಿ ವಿಡಿಯೋ ಪಾಠ ಪ್ರಸಾರ ಮಾಡಲು ನಿರ್ಧರಿಸಿದೆ. ಜನವರಿ 13ರಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ವಿಡಿಯೋ ಮೂಲಕ ಪಾಠಗಳನ್ನು ಪ್ರಸಾರ ಮಾಡಲಾಗುವುದು. ಈ ಕುರಿತಾದ ವೇಳಾಪಟ್ಟಿಯನ್ನು ನೀಡಲಾಗಿದ್ದು, ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾಹಿತಿ […]

ಕೊರೊನಾ ಹಿನ್ನೆಲೆ| ಜ.13ರಿಂದ ‘ಚಂದನ’ ದಲ್ಲಿ ಮತ್ತೆ ಪಾಠ ಶುರು| Read More »

ಕೊರೊನಾ ಎಫೆಕ್ಟ್| ಮೈಸೂರಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ|

ಮೈಸೂರು: ಕೊರೊನಾ ತೀವ್ರತೆ ಪರಿಣಾಮ ಮೈಸೂರು ನಗರ ಮತ್ತು ಮೈಸೂರು ತಾಲೂಕಿನಾದ್ಯಂತ ಶಾಲೆಗಳು ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಒಂದರಿಂದ 9 ರವರೆಗೆ ಶಾಲೆಗಳನ್ನು ಬಂದ್ ಮಾಡಿ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಜನವರಿ 18 ರವರೆಗೆ 1 ರಿಂದ 9ನೇ ತರಗತಿಗಳನ್ನು ಬಂದ್ ಮಾಡಲಾಗಿದೆ. ವಸತಿ ಶಾಲೆಗಳನ್ನು ಒಳಗೊಂಡು ಬೆಳಗಾವಿ ಜಿಲ್ಲೆಯ ಎಲ್ಲ ಮಾಧ್ಯಮಗಳ 1 ರಿಂದ 9ನೇ ತರಗತಿ ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕೊರೊನಾ ಎಫೆಕ್ಟ್| ಮೈಸೂರಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ| Read More »

ಕೊರೊನಾ 3ನೇ ಅಲೆ ಅಬ್ಬರ| ರಾಜ್ಯಾದ್ಯಂತ ನಾಳೆಯಿಂದ ಕಠಿಣ ಕ್ರಮ| ನಿಯಮ ಉಲ್ಲಂಘನೆ ಕಂಡಲ್ಲಿ ದಂಡ|

ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿದ್ದು, ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದೆ. ನಾಳೆಯಿಂದಲೇ ರಾಜ್ಯದಲ್ಲಿ ಹೊಸ ಬಿಗಿ ನಿಯಮಗಳು ಜಾರಿಗೆ ಬರಲಿವೆ. ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಕೋವಿಡ್ ಕುರಿತ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ರಾಜ್ಯಾದ್ಯಂತ ಕೋವಿಡ್ ಟೆಸ್ಟ್ ಹೆಚ್ಚಿಸಲಾಗುವುದು ಪ್ರತಿದಿನ ಈಗಿರುವ 1 ಲಕ್ಷದ 10 ಸಾವಿರ ಟೆಸ್ಟಿಂಗ್ ಸಂಖ್ಯೆಯನ್ನು 1 ಲಕ್ಷದ 50 ಸಾವಿರಕ್ಕೆ ಹೆಚ್ಚಿಸಲಾಗುವುದು. ಮಾಸ್ಕ್, ದೈಹಿಕ,

ಕೊರೊನಾ 3ನೇ ಅಲೆ ಅಬ್ಬರ| ರಾಜ್ಯಾದ್ಯಂತ ನಾಳೆಯಿಂದ ಕಠಿಣ ಕ್ರಮ| ನಿಯಮ ಉಲ್ಲಂಘನೆ ಕಂಡಲ್ಲಿ ದಂಡ| Read More »

ಮಂಗಳೂರು: ಸೀ ಫುಡ್ ಪ್ಯಾಕ್ಟರಿಯಲ್ಲಿ ಅನಿಲ ಸೋರಿಕೆ| 26 ಮಂದಿ ಅಸ್ವಸ್ಥ|

ಮಂಗಳೂರು: ಇಲ್ಲಿನ ಬೈಕಂಪಾಡಿಯಲ್ಲಿರುವ ಎವರೆಸ್ಟ್ ಸೀ ಫುಡ್ಸ್ ಪ್ರೈ.ಲಿ ಘಟಕದಲ್ಲಿ ಕೆಮಿಕಲ್ ಸೋರಿಕೆಯಾಗಿದೆ. ಘಟನೆ ನಡೆದಾಗ ಒಟ್ಟು 80 ಜನ ಕಾರ್ಮಿಕರು ಫ್ಯಾಕ್ಟರಿಯಲ್ಲಿದ್ದು, ಅದರಲ್ಲಿ 26 ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಕೆಮಿಕಲ್ ನಿಂದ ಸ್ಥಳದಲ್ಲೇ ಕುಸಿದು ಬಿದ್ದ ಕಾರ್ಮಿಕರನ್ನು ಮುಕ್ಕ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಪ ಪ್ರಮಾಣದಲ್ಲಿ ಕೆಮಿಕಲ್ ಸೋರಿಕೆಯಾಗಿದ್ದರಿಂದ ಎಲ್ಲಾ ಕಾರ್ಮಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ಸಿಗುತ್ತಲೇ ಸ್ಥಳಕ್ಕೆ ಅಗ್ನಿಶಾಮಕ, ಪಣಂಬೂರು ಪೊಲೀಸರು ದೌಡಾಯಿಸಿದ್ದಾರೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಕೂಡ

ಮಂಗಳೂರು: ಸೀ ಫುಡ್ ಪ್ಯಾಕ್ಟರಿಯಲ್ಲಿ ಅನಿಲ ಸೋರಿಕೆ| 26 ಮಂದಿ ಅಸ್ವಸ್ಥ| Read More »

ಲಾರಿ ಹತ್ತಿಸಿ ಪ್ರಧಾನಿ ಮೋದಿ ಕೊಲ್ಲಲು ಕಾಂಗ್ರೆಸ್ ಸಂಚು ರೂಪಿಸಿತ್ತು…! ಈ ಸುಳ್ಳು ಸುದ್ದಿಯ ಸತ್ಯಾಂಶವೇನು? ವಾಸ್ತವ ಸತ್ಯ ನೀವೇ ಓದಿ…

ಪಂಜಾಬ್: ಇಲ್ಲಿನ ಫಿರೋಜ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲು ಉದ್ದೇಶಿಸಿದ್ದ ಸಾರ್ವಜನಿಕ ರ್ಯಾಲಿಗೆ ರೈತರು ಅಡ್ಡಿಪಡಿಸಿದ ಕಾರಣ ಸುಮಾರು 20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಕ್ಕಿಹಾಕಿಕೊಂಡಿದ್ದರು ಎಂಬ ಘಟನೆ ಇಡೀ ದೇಶದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ಕಾರಣಕ್ಕಾಗಿ ಪಂಜಾಬ್ ನ ಫಿರೋಜ್ ಪುರ್ ನಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ರ್ಯಾಲಿಯನ್ನು ಮೋದಿಯವರು ಮೊಟಕುಗೊಳಿಸಿದರು. ಜ.5 ರಂದು ನಡೆದ ಈ ಘಟನೆಯನ್ನು ಪಂಜಾಬ್ ಸರ್ಕಾರದ ಭದ್ರತಾ ವೈಫಲ್ಯ ಎಂದು ಬಿಜೆಪಿ ಆರೋಪಿಸಿದೆ. ಇನ್ನೊಂದೆಡೆ ಯಾವುದೇ ಭದ್ರತಾ ಲೋಪ

ಲಾರಿ ಹತ್ತಿಸಿ ಪ್ರಧಾನಿ ಮೋದಿ ಕೊಲ್ಲಲು ಕಾಂಗ್ರೆಸ್ ಸಂಚು ರೂಪಿಸಿತ್ತು…! ಈ ಸುಳ್ಳು ಸುದ್ದಿಯ ಸತ್ಯಾಂಶವೇನು? ವಾಸ್ತವ ಸತ್ಯ ನೀವೇ ಓದಿ… Read More »

ಕೇಸರಿ ಶಾಲು v/s ಸ್ಕಾರ್ಫ್ ಗಲಾಟೆಗೆ ತಾರ್ಕಿಂತ ಅಂತ್ಯ| ಪೋಷಕರ ಸಭೆಯಲ್ಲಿ ಬಗೆಹರಿಯಿತು ವಿವಾದ|

ಚಿಕ್ಕಮಗಳೂರು: ಕಳೆದ ಎಂಟತ್ತು ದಿನಗಳಿಂದ ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿ ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಲೆದೂರಿದ್ದ ಕೇಸರಿ ಶಲ್ಯ ಹಾಗೂ ಸ್ಕಾರ್ಫ್ ವಿವಾದಕ್ಕೆ ಶಾಂತಿಯುತ ತೆರೆಬಿದ್ದಿದೆ. ಕಾಲೇಜಿನ ಪ್ರಾಂಶುಪಾಲರು ಸೋಮವಾರ ಕಾಲೇಜಿನಲ್ಲಿ ಪೋಷಕರ ಸಭೆ ಕರೆದಿದ್ದರು. ಪೋಷಕರ ಸಭೆಯಲ್ಲಿ ಅನ್ಯ ಕೋಮಿನ ವಿದ್ಯಾರ್ಥಿನಿಯರು ತರಗತಿಯ ಒಳಗೆ ಸ್ಕಾರ್ಫ್ ಧರಿಸುವಂತಿಲ್ಲ, ತಲೆಯ ಮೇಲೆ ವೇಲ್ ಹಾಕಿಕೊಳ್ಳಲು ಅಷ್ಟೇ ಅವಕಾಶ. ವೇಲ್‌ನ್ನು ಪಿನ್‌ಗಳಿಂದ ಸುತ್ತಿ ಕಟ್ಟುವಂತಿಲ್ಲ ಎಂದು ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ. ಪೋಷಕರ ಸಭೆಯಲ್ಲಿ ಪ್ರಾಂಶುಪಾಲ

ಕೇಸರಿ ಶಾಲು v/s ಸ್ಕಾರ್ಫ್ ಗಲಾಟೆಗೆ ತಾರ್ಕಿಂತ ಅಂತ್ಯ| ಪೋಷಕರ ಸಭೆಯಲ್ಲಿ ಬಗೆಹರಿಯಿತು ವಿವಾದ| Read More »

ಉತ್ತರಕನ್ನಡ: ನಿಧನರಾಗಿ 8 ತಿಂಗಳಾದರೂ ಯಕ್ಷಗಾನ‌ ಅಕಾಡಮಿ ಅಧ್ಯಕ್ಷರು ಇವರೇ !ಕನ್ನ‌ಡ ಮತ್ತು ಸಂಸ್ಕೃತಿ ಇಲಾಖೆಯ ಬೇಜವಾಬ್ದಾರಿ|

ಶಿರಸಿ: ಮೃತರಾಗಿ ಎಂಟು ತಿಂಗಳಾದರೂ‌ ಆಧುನಿಕ‌ ನಡೆಯಲ್ಲಿ ವಿಫುಲ ಹೆಜ್ಜೆ ಇಡುತ್ತಿರುವ ಕನ್ನಡ‌ ಮತ್ತು ಸಂಸ್ಕ್ರತಿ ‌ಇಲಾಖೆಯ ವೆಬ್ ಸೈಟ್ ನಲ್ಲಿ ಮೃತರೇ ಅಧ್ಯಕ್ಷರಾಗಿ ‌ಮುಂದುವರಿದಿದ್ದಾರೆ. ಕಳೆದ ಏಪ್ರಿಲ್ 18ರಂದು ಅಕಾಲಿಕವಾಗಿ ಅಗಲಿದ ಯಕ್ಷಗಾನ‌ ಅಕಾಡಮಿ ಅಧ್ಯಕ್ಷ ಪ್ರೋ ಎಂ.ಎ.ಹೆಗಡೆ ಅವರ‌ ಜಾಗಕ್ಕೆ ಸರಕಾರ ಆಡಳಿತಾಧಿಕಾರಿ ನೇಮಕ‌ ಮಾಡಿದ್ದರ ಬಗ್ಗೆ ಆಕ್ಷೇಪ, ಅಸಮಧಾನಗಳು ಬಂದ ಬೆನ್ನಲ್ಲೇ, ವೆಬ್ ಸೈಟಿನಲ್ಲಿ ಎಂ.ಎ.ಹೆಗಡೆ ಅವರ ಹೆಸರನ್ನು ಬದಲಾಯಿಸದೇ ಇರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಕನ್ನಡ ನಾಡು‌ ನುಡಿ, ಕಲೆಯ ಸೇವೆಗಾಗಿ ಇರುವ‌

ಉತ್ತರಕನ್ನಡ: ನಿಧನರಾಗಿ 8 ತಿಂಗಳಾದರೂ ಯಕ್ಷಗಾನ‌ ಅಕಾಡಮಿ ಅಧ್ಯಕ್ಷರು ಇವರೇ !ಕನ್ನ‌ಡ ಮತ್ತು ಸಂಸ್ಕೃತಿ ಇಲಾಖೆಯ ಬೇಜವಾಬ್ದಾರಿ| Read More »

ಹೆಚ್ಚುತ್ತಿರುವ ಕೊರೊನಾ, ಒಮಿಕ್ರಾನ್ ಪ್ರಕರಣ| ಫೆ.1 ರಿಂದ 10 ದಿನ ಕರ್ನಾಟಕದಲ್ಲಿ ಲಾಕ್ ಡೌನ್ ಅಥವಾ ಬಿಗಿ‌ಕ್ರಮ ಜಾರಿ|

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿ 1 ರಿಂದ 10 ದಿನಗಳ ಕಾಲ ಲಾಕ್ ಡೌನ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ದಿನೇದಿನೇ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ನೈಟ್ ಕರ್ಫ್ಯೂ ಹಾಗೂ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಗಿದೆ. ಫೆಬ್ರವರಿ 1 ರವರೆಗೂ ಕೊರೋನಾ ಏರುಗತಿಯಲ್ಲಿ ಸಾಗಿದರೆ, ಫೆ. 1 ರಿಂದ 10 ದಿನಗಳ ಕಾಲ ಮೊದಲ ಹಂತದಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡುವ ಸಾಧ್ಯತೆ ಇದೆ. ನಿನ್ನೆ ಸುದ್ದಿಗಾರರೊಂದಿಗೆ

ಹೆಚ್ಚುತ್ತಿರುವ ಕೊರೊನಾ, ಒಮಿಕ್ರಾನ್ ಪ್ರಕರಣ| ಫೆ.1 ರಿಂದ 10 ದಿನ ಕರ್ನಾಟಕದಲ್ಲಿ ಲಾಕ್ ಡೌನ್ ಅಥವಾ ಬಿಗಿ‌ಕ್ರಮ ಜಾರಿ| Read More »

ಲಾಠಿ ಹಿಡಿದು ಪೊಲೀಸ್ ಲುಕ್ ನಲ್ಲಿ ದರ್ಶನ ನೀಡುತ್ತಿರುವ ಕಾಲಭೈರವೇಶ್ವರ| ಜಾಲತಾಣಗಳಲ್ಲಿ ಫೋಟೋ ವೈರಲ್|

ಲಕ್ನೋ: ಕಾಲಭೈರವನಿಗೆ ಪೊಲೀಸ್ ಸಮವಸ್ತ್ರ ತೊಡಿಸಿದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ದೇವರನ್ನು ಕಣ್ತುಂಬಿಕೊಳ್ಳಲು ಭಕ್ತರು ದೇವಸ್ಥಾನದತ್ತ ಆಗಮಿಸುತ್ತಿರುವ ದೃಶ್ಯ ವಾರಣಾಸಿಯಲ್ಲಿ ನಡೆದಿದೆ. ವಾರಣಾಸಿಯ ಕಾಶಿಯ ಕೊತ್ವಾಲಾ ಎಂದೂ ಕರೆಯಲಾಗುವ ಭೈರವನ ಈ ಸಮವಸ್ತ್ರದ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಇದೇ ಮೊದಲ ಬಾರಿಗೆ ಕಾಶಿಯ ಪ್ರಸಿದ್ಧ ದೇವರು ಬಾಬಾ ಕಾಲ ಭೈರವನಿಗೆ ಪೊಲೀಸ್ ಸಮವಸ್ತ್ರ ತೊಡಿಸಲಾಗಿದೆ. ದೇವರ ಮೂರ್ತಿಯ ತಲೆಯ ಮೇಲೆ ಪೊಲೀಸ್ ಕ್ಯಾಪ್ ಹಾಗೂ ಎದೆ ಮೇಲೆ ಬ್ಯಾಡ್ಜ್ ನ್ನು ಹಾಕಲಾಗಿದ್ದು,

ಲಾಠಿ ಹಿಡಿದು ಪೊಲೀಸ್ ಲುಕ್ ನಲ್ಲಿ ದರ್ಶನ ನೀಡುತ್ತಿರುವ ಕಾಲಭೈರವೇಶ್ವರ| ಜಾಲತಾಣಗಳಲ್ಲಿ ಫೋಟೋ ವೈರಲ್| Read More »

ಕೊರಗಜ್ಜನಿಗೆ ಅವಮಾನ ಪ್ರಕರಣ| ಇಬ್ಬರು ಆರೋಪಿಗಳು ಅಂದರ್| ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಮದುಮಗ|

ವಿಟ್ಲ: ಇಲ್ಲಿನ ಸಾಲೆತ್ತೂರಿನಲ್ಲಿ ಕೊರಗಜ್ಜ ದೈವಕ್ಕೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ವಿಟ್ಲ‌ ಪೊಲೀಸರು ಮಂಗಳವಾರದಂದು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಮಂಗಲ್ಪಾಡಿ ನಿವಾಸಿ, ಪುತ್ತೂರಿನ ಫಾತಿಮಾ ಮ್ಯಾಚಿಂಗ್ ಸೆಂಟರ್ ನ ಮಾಲಕ ಅಹಮ್ಮದ್ ಮುಜ್ತಾಬ್(28) ಹಾಗೂ ಮಂಜೇಶ್ವರ ತಾಲೂಕಿನ ಬಾಯಾರು ಪದವು ನಿವಾಸಿ ಮೊಯ್ದೀನ್ ಮನೀಶ್(19) ಎಂದು ಗುರುತಿಸಲಾಗಿದೆ. ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳ ಸೋಂಕಲ್ ಅಗರ್ತಿಮೂಲೆ ಸಮೀಪದ

ಕೊರಗಜ್ಜನಿಗೆ ಅವಮಾನ ಪ್ರಕರಣ| ಇಬ್ಬರು ಆರೋಪಿಗಳು ಅಂದರ್| ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಮದುಮಗ| Read More »