January 2022

ಅರ್ಚಕ ಸ್ಥಾನಕ್ಕಾಗಿ ಗರ್ಭಗುಡಿಯೊಳಗೆ ಬಡಿದಾಡಿಕೊಂಡ ಅರ್ಚಕರು

ಹಾವೇರಿ: ಪ್ರಧಾನ ಅರ್ಚಕ ಸ್ಥಾನಕ್ಕಾಗಿ ಅರ್ಚಕರು ಗರ್ಭಗುಡಿಯಲ್ಲಿ ಬಡಿದಾಡಿಕೊಂಡ ಘಟನೆ ರಾಣೆಬೇನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ನಡೆದಿದೆ. ಪೂಜೆ ಮಾಡುವ ಸಂಬಂಧ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್, ದೇವಸ್ಥಾನದ ಪರಿಚಾರಕ ಶಿವಪ್ಪ ಉಪ್ಪಾರ ಹಾಗೂ ಮೃತ್ಯುಂಜಯ ಎಂಬುವವರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಬೆಳಗಿನ ಜಾವ ದೇವರ ಮೊದಲ ಪೂಜೆಗಾಗಿ ಪ್ರಧಾನ ಅರ್ಚಕ ಸಂತೋಷ ಭಟ್ ಗಂಟೆ ಕೇಳಿದ್ದಾರೆ. ಈ ವೇಳೆ ಗಂಟೆ ಕೊಡದೆ ಮೃತ್ಯುಂಜಯ ಎಂಬುವವರು ದೇವರ ತ್ರಿಶೂಲದಿಂದ ಹಲ್ಲೆ […]

ಅರ್ಚಕ ಸ್ಥಾನಕ್ಕಾಗಿ ಗರ್ಭಗುಡಿಯೊಳಗೆ ಬಡಿದಾಡಿಕೊಂಡ ಅರ್ಚಕರು Read More »

ಐದನೇ ದಿನದಲ್ಲಿ ಮೊಟಕುಗೊಂಡ ಮೇಕೆದಾಟು ಪಾದಯಾತ್ರೆ

ರಾಮನಗರ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾದಯಾತ್ರೆಗೆ ಬ್ರೇಕ್ ಹಾಕಲು ಹೈಕಮಾಂಡ್ ಸೂಚಿಸಿದ ಬೆನ್ನಲ್ಲೇ ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸಲು ರಾಜ್ಯ ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಹೈಕೋರ್ಟ್ ನೋಟೀಸ್, ರಾಜ್ಯ ಸರ್ಕಾರದ ಎಚ್ಚರಿಕೆ, ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ಸಭೆಯಲ್ಲಿ, ಕೊರೊನಾ ಸೋಂಕು ಕಡಿಮೆಯಾದ ಬಳಿಕ ಪಾದಯಾತ್ರೆಯನ್ನು ಮತ್ತೆ ಮುಂದುವರಿಸೋದು, ಸಧ್ಯಕ್ಕೆ ಪಾದಯಾತ್ರೆ ಮೊಟಕುಗೊಳಿಸುವ ಬಗ್ಗೆ

ಐದನೇ ದಿನದಲ್ಲಿ ಮೊಟಕುಗೊಂಡ ಮೇಕೆದಾಟು ಪಾದಯಾತ್ರೆ Read More »

ನೆಲ್ಯಾಡಿ: ಎಲ್ಐಸಿ ಪ್ರತಿನಿಧಿಯನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ನೆಲ್ಯಾಡಿ: ವ್ಯಕ್ತಿಯೊರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಉದನೆ ಸಮೀಪದ ನೇಲ್ಯಡ್ಕದ ದೇವಸ್ಯ ಎಂಬಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಎಲ್‌ಐಸಿ ಪ್ರತಿನಿಧಿ ಶಾಂತಪ್ಪ ಗೌಡ ಎಂದು ತಿಳಿದು ಬಂದಿದೆ. ವೈಯಕ್ತಿಕ ದ್ವೇಷ ಹಾಗೂ ಆಸ್ತಿ ವಿವಾದ ಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ನೆಲ್ಯಾಡಿ: ಎಲ್ಐಸಿ ಪ್ರತಿನಿಧಿಯನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು Read More »

ಮಂಗಳೂರು: ಕಳ್ಳನನ್ನು ರಸ್ತೆಯಲ್ಲಿ ಅಟ್ಟಿಸಿಕೊಂಡು ಹೋಗಿ ಹಿಡಿದ ಪೊಲೀಸ್ ಕಾರ್ಯಕ್ಕೆ ಶ್ಲಾಘನೆ|ಪೊಲೀಸ್ ಆಡಿದ ಮಾತಿಗೆ ಜಾಲತಾಣಗಳಲ್ಲಿ ಪರ ವಿರೋಧ ಕಮೆಂಟ್|

ಮಂಗಳೂರು : ನಗರದಲ್ಲಿ ಕಳ್ಳತನ ನಡೆದ 10 ನಿಮಿಷದಲ್ಲಿ ಪ್ರಕರಣದ ಆರೋಪಿಯನ್ನು ಮಂಗಳೂರಿನ ಪೊಲೀಸ್ ಓರ್ವರು ಬೆನ್ನಟ್ಟಿ ಹಿಡಿದ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಯನ್ನು ವರುಣ್ ಎಂದು ಗುರುತಿಸಲಾಗಿದೆ. ಇವರು ಮೊಬೈಲ್ ಕಳ್ಳತನ ಮಾಡಿ ಓಡಿ ಹೋಗುತ್ತಿದ್ದ ಕಳ್ಳನನ್ನು ರಸ್ತೆಯಲ್ಲಿ ವಾಹನಗಳ ಮಧ್ಯೆಯೇ ಅಟ್ಟಿಸಿಕೊಂಡು ಹೋಗಿ ಹಿಡಿದಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ಪೊಲೀಸ್ ಕಾರ್ಯಕ್ಕೆ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ. ಈ ನಡುವೆ ಪೊಲೀಸ್ ಅಧಿಕಾರಿ ಆರೋಪಿಯನ್ನು ವಿಚಾರಿಸಿದ ಭಾಷೆ ಬಗ್ಗೆ ಜನರಲ್ಲಿ ಪರ

ಮಂಗಳೂರು: ಕಳ್ಳನನ್ನು ರಸ್ತೆಯಲ್ಲಿ ಅಟ್ಟಿಸಿಕೊಂಡು ಹೋಗಿ ಹಿಡಿದ ಪೊಲೀಸ್ ಕಾರ್ಯಕ್ಕೆ ಶ್ಲಾಘನೆ|ಪೊಲೀಸ್ ಆಡಿದ ಮಾತಿಗೆ ಜಾಲತಾಣಗಳಲ್ಲಿ ಪರ ವಿರೋಧ ಕಮೆಂಟ್| Read More »

ಯುವತಿಯೊಂದಿಗೆ ಅಸಭ್ಯ ವರ್ತನೆ| ಯುವಕನ ಬೆತ್ತಲೆಗೊಳಿಸಿ ಹಲ್ಲೆಗೈದ ತಂಡ|

ಹಾಸನ: ಯುವತಿ ಜೊತೆ ಅಸಭ್ಯ ವರ್ತನೆ ತೋರಿದ ಕಾರಣಕ್ಕೆ ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಘಟನೆ ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿ ನಡೆದಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಯುವಕ ಕೈ ಮುಗಿದು ಬೇಡಿಕೊಂಡರೂ ಬಿಡದ ಯುವಕರ ಗುಂಪು ಆತನ ಮೇಲೆ ಹಲ್ಲೆ ನಡೆಸಿದೆ. ಬಿಜಾಪುರ ಮೂಲದ ಮೇಘರಾಜ್ ಹಲ್ಲೆಗೊಳಗಾಗಿದ್ದು, ಈತ ಹಾಸನದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ. ಮೇಘರಾಜ್ ಯುವತಿ ಜೊತೆ ಅಸಭ್ಯ ವರ್ತನೆ ತೋರಿದ ಕಾರಣಕ್ಕೆ ಜನನಿಬಿಡ ಪ್ರದೇಶದಲ್ಲೇ ಬೆತ್ತಲೆಗೊಳಿಸಿ ಎಳೆದಾಡುವ ವಿಡಿಯೋ

ಯುವತಿಯೊಂದಿಗೆ ಅಸಭ್ಯ ವರ್ತನೆ| ಯುವಕನ ಬೆತ್ತಲೆಗೊಳಿಸಿ ಹಲ್ಲೆಗೈದ ತಂಡ| Read More »

ಇಸ್ರೋ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ಎಸ್. ಸೋಮನಾಥ್ ನೇಮಕ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ಎಸ್.ಸೋಮನಾಥ್ ನೇಮಕಗೊಂಡಿದ್ದಾರೆ. ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರ ಅಧಿಕಾರಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ಎಸ್.ಸೋಮನಾಥ್ ನೇಮಕಗೊಂಡಿದ್ದಾರೆ. ಇಸ್ರೋ ಅಧ್ಯಕ್ಷರಾಗಿರುವುದರ ಜೊತೆಗೆ, ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದ್ದಾರೆ. 2018ರಿಂದಲೂ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಸೋಮನಾಥ್, ಈಗಾಗಲೇ Liquid Propulsion Systems ಸೆಂಟರ್ ನ ನಿರ್ದೇಶಕರಾಗಿ

ಇಸ್ರೋ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ಎಸ್. ಸೋಮನಾಥ್ ನೇಮಕ Read More »

ಬೆಂಗಳೂರು: ಶಾಲೆಗಳಿಗೆ ಮತ್ತೆ ರಜೆ ವಿಸ್ತರಣೆ| ಜ.31ರವರೆಗೂ ತರಗತಿ ತೆರೆಯಲು ನಿರ್ಬಂಧ

ಬೆಂಗಳೂರು: ಈಗಾಗಲೇ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದಿಂದ 1 ರಿಂದ 9ನೇ ತರಗತಿವರೆಗೆ ಬೆಂಗಳೂರಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಆದೇಶವನ್ನು ಈಗ ಜನವರಿ 31ರವರೆಗೆ ವಿಸ್ತರಿಸಿರುವುದಾಗಿ ಶಿಕ್ಷಣ ಸಚಿವರು ಘೋಷಿಸಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು, ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜನವರಿ 31 ರವರೆಗೆ 1 ರಿಂದ 9ನೇ ತರಗತಿಗಳಿಗೆ ರಜೆ ವಿಸ್ತರಿಸಿರುವುದಾಗಿ ತಿಳಿಸಿದರು. ಕೋವಿಡ್ ನಿಯಂತ್ರಣ ಕ್ರಮಗಳೊಂದಿಗೆ 10, 11

ಬೆಂಗಳೂರು: ಶಾಲೆಗಳಿಗೆ ಮತ್ತೆ ರಜೆ ವಿಸ್ತರಣೆ| ಜ.31ರವರೆಗೂ ತರಗತಿ ತೆರೆಯಲು ನಿರ್ಬಂಧ Read More »

ರಾಜ್ಯದಲ್ಲಿ ಕೊರೊನಾ ಹೊಸ ನಿಯಮ ಜಾರಿ| ಜ.31ರವರೆಗೂ‌ ನಿರ್ಬಂಧ ಮುಂದುವರಿಕೆ|

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆ ಸರಕಾರವು ಕಠಿಣ ನಿರ್ಬಂಧಗಳನ್ನು ಜಾರಿ ಮಾಡಲಾಗಿತ್ತು. ಇಗ ಇದರಲ್ಲಿ ರಾಜ್ಯಾದ್ಯಂತ ಎಲ್ಲಾ ರೀತಿಯ ರ್‍ಯಾಲಿಗಳು, ಧರಣಿಗಳು ಮತ್ತು ಪ್ರತಿಭಟನೆಗಳನ್ನು ನಿಷೇಧಿಸಿದೆ.ಸರಕಾರವು ನಿರ್ಬಂಧಗಳನ್ನು ಜನವರಿ 31ರ ವರೆಗೆ ಮುಂದುವರಿಕೆ ಮಾಡಿದೆ. ಈಗ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಈ ಮಾರ್ಗಸೂಚಿಯಲ್ಲಿ ರಾಜ್ಯ ಸರ್ಕಾರ, ಕೊರೊನ ಪಾಸಿಟಿವ್ ಬಂದ ಮಕ್ಕಳಿಗೆ ಚಿಕಿತ್ಸೆ ನೀಡಲು ತಾಲ್ಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳ ವಾರ್ಡ್, ಐಸಿಯುಗಳನ್ನು ಮೀಸಲಿರಿಸಬೇಕು, ಮಕ್ಕಳಿಗೆ ಅಗತ್ಯವಿರುವ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಸ್ತಾನು

ರಾಜ್ಯದಲ್ಲಿ ಕೊರೊನಾ ಹೊಸ ನಿಯಮ ಜಾರಿ| ಜ.31ರವರೆಗೂ‌ ನಿರ್ಬಂಧ ಮುಂದುವರಿಕೆ| Read More »

ಸಮಗ್ರ ಸಮಾಚಾರ ದಿನದ ಪ್ರಮುಖ ಸುದ್ದಿಗಳು

ಜ.13ರಿಂದ ‘ಚಂದನ’ ದಲ್ಲಿ ಮತ್ತೆ ಪಾಠ ಪ್ರಸಾರ ಬೆಂಗಳೂರು: ಕೊರೋನಾ ಕಾರಣದಿಂದಾಗಿ 1 ರಿಂದ 9ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಕೆಲವು ಜಿಲ್ಲೆಗಳಲ್ಲಿ ಬಂದ್ ಆಗಿದ್ದು, ಮಕ್ಕಳಿಗೆ ಪರ್ಯಾಯ ಕಲಿಕೆ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಸೋಮವಾರದಿಂದ ಶುಕ್ರವಾರದವರೆಗೆ ಚಂದನ ವಾಹಿನಿಯಲ್ಲಿ ವಿಡಿಯೋ ಪಾಠ ಪ್ರಸಾರ ಮಾಡಲು ನಿರ್ಧರಿಸಿದೆ. ಜನವರಿ 13ರಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ವಿಡಿಯೋ ಮೂಲಕ ಪಾಠಗಳನ್ನು ಪ್ರಸಾರಿಸಲಾಗುತ್ತದೆ. ಕಾಲುವೆಯಲ್ಲಿ ಸಿಕ್ಕಿ‌ ಒದ್ದಾಡಿದ ಗಜಪಡೆ| ಅರಣ್ಯ

ಸಮಗ್ರ ಸಮಾಚಾರ ದಿನದ ಪ್ರಮುಖ ಸುದ್ದಿಗಳು Read More »

ಮದುವೆಗೆ ಸಿಂಗರಿಸಿದಂತಿದ್ದ ಕಾರಿನೊಳಗೆ ಗೋವುಗಳ ಗುದ್ದಾಟ| ಅಕ್ರಮ ಗೋಸಾಗಾಟಕ್ಕೆ ಹೊಸ ಮಾರ್ಗ ಕಂಡುಕೊಂಡ ಗೋಕಳ್ಳರು|

ಉಡುಪಿ: ಮದುವೆ ಮನೆಗೆ ಹೊರಟಿರುವಂತೆ ಕಾರಿನ ಹೊರಗಡೆ ಸಿಂಗಾರ ಮಾಡಿ, ಒಳಗಡೆ ಹಸುಗಳ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಭಯಾನಕ ಕೃತ್ಯವೊಂದು ಉಡುಪಿಯಲ್ಲಿ ನಡೆದಿದ್ದು, ಖದೀಮರು ಸಿಕ್ಕಿಬಿದ್ದಿದ್ದಾರೆ. ಗೋವುಗಳನ್ನು ಸಾಗಾಟ ಮಾಡಲು ಖದೀಮರು ಕಂಡುಕೊಂಡಿರುವ ಹೊಸ ಮಾರ್ಗ ಎಲ್ಲರನ್ನೂ ದಂಗುಬಡಿಸಿದೆ. ಉಡುಪಿ ಜಿಲ್ಲೆ ಕಾಪು ತಾಲೂಕಿನ ಶಿರ್ವದಲ್ಲಿ ಈ ಘಟನೆ ನಡೆದಿದ್ದು, ಇನ್ನೋವಾ ಕಾರನ್ನು ಮದುವೆ ಕಾರಿನಂತೆ ಸಿಂಗರಿಸಿಕೊಂಡು ಯಾರಿಗೂ ಅನುಮಾನ ಬಾರದಂತೆ ಮಾಡಲಾಗಿದೆ. ಅದರಲ್ಲಿ ಕದ್ದ ಹಸುಗಳನ್ನು ತುಂಬಿಕೊಂಡು ಸಾಗಿಸಲಾಗುತ್ತಿತ್ತು. ವಿಷಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಗೆ

ಮದುವೆಗೆ ಸಿಂಗರಿಸಿದಂತಿದ್ದ ಕಾರಿನೊಳಗೆ ಗೋವುಗಳ ಗುದ್ದಾಟ| ಅಕ್ರಮ ಗೋಸಾಗಾಟಕ್ಕೆ ಹೊಸ ಮಾರ್ಗ ಕಂಡುಕೊಂಡ ಗೋಕಳ್ಳರು| Read More »