January 2022

ಪಂಜಾಬ್ ವಿಧಾನಸಭಾ ಚುನಾವಣೆ ಮುಂದೂಡಿಕೆ| ಫೆ.14 ರಂದು ನಡೆಯಬೇಕಿದ್ದ‌ ಮತದಾನ|

ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣಾ ದಿನಾಂಕ ಮುಂದೂಡಲಾಗಿದ್ದು, ಫೆ.20ರಂದು ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಫೆ.14ರಂದು ನಡೆಯಬೇಕಿದ್ದ ವಿಧಾನಸಭಾ ಚುನಾವಣೆ ದಿನಾಂಕವನ್ನು ಮುಂದೂಡುವಂತೆ ಪಂಜಾಬ್ ಆಡಳಿತ ಹಾಗೂ ವಿಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು. ಮನವಿಗೆ ಸ್ಪಂದಿಸಿದ ಆಯೋಗ ಇದೀಗ ಫೆ.14 ರ ಬದಲು ಫೆ.20ಕ್ಕೆ ಮುಂದೂಡಿದೆ. ಚುನಾವಣೆ ಮುಂದೂಡುವಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮುಖ್ಯಚುನಾವಣಾ ಆಯುಕ್ತರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆ ದಿನಾಂಕ ಮುಂದೂಡಲಾಗಿದ್ದು, ಪಂಜಾಬ್ […]

ಪಂಜಾಬ್ ವಿಧಾನಸಭಾ ಚುನಾವಣೆ ಮುಂದೂಡಿಕೆ| ಫೆ.14 ರಂದು ನಡೆಯಬೇಕಿದ್ದ‌ ಮತದಾನ| Read More »

ವಿದ್ಯಾರ್ಥಿನಿಯ ಫೋಟೋ ಜೊತೆಗೆ ಅನ್ಯಧರ್ಮೀಯನ ಫೋಟೋ ಎಡಿಟ್| ದೂರು ದಾಖಲು

ಮಂಗಳೂರು: ನಗರದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯು ತ್ತಿರುವ ವಿದ್ಯಾರ್ಥಿನಿಯ ಫೋಟೋವೊಂದನ್ನು ಅನ್ಯ ಧರ್ಮೀಯ ಯುವಕನ ಜತೆ ಸಂಬಂಧ ಇದೆ ಎಂದು ಆರೋಪಿಸಿ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಲಾಗಿದ್ದು, ಈ ಬಗ್ಗೆ ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಮೆಡಿಕಲ್‌ ಕಾಲೇಜಿನಲ್ಲಿ 3ನೇ ವರ್ಷದ ಎಂಬಿಬಿಎಸ್‌ ಓದುತ್ತಿರುವ ವಿದ್ಯಾರ್ಥಿನಿಯ ಫೋಟೋವನ್ನು ಆರೋಪಿ ಇನ್‌ ಸ್ಟಾಗ್ರಾಮ್‌ನಿಂದ ಡೌನ್‌ಲೊಡ್‌ ಮಾಡಿಕೊಂಡು ಬಳಿಕ ಇನ್ನೋರ್ವ ಯುವಕನ ಫೋಟೋದ ಜತೆ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾನೆ.

ವಿದ್ಯಾರ್ಥಿನಿಯ ಫೋಟೋ ಜೊತೆಗೆ ಅನ್ಯಧರ್ಮೀಯನ ಫೋಟೋ ಎಡಿಟ್| ದೂರು ದಾಖಲು Read More »

ಮೂರು ಕಣ್ಣು, 4 ಮೂಗಿನ ರಂಧ್ರ ಹೊಂದಿರುವ ಕರುವನ್ನು ಇಲ್ಲಿ ನೋಡಬಹುದು

ರಾಯ್ಪುರ: ಹಸುವೊಂದು ಮೂರು ಕಣ್ಣು ಮತ್ತು ನಾಲ್ಕು ಮೂಗಿನ ರಂಧ್ರ ಹೊಂದಿರುವ ವಿಚಿತ್ರ ಕರುವಿಗೆ ಜನ್ಮ ನೀಡಿರುವ ಘಟನೆ ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಮೂರು ಕಣ್ಣಿನ್ನು ಹೊಂದಿರುವ ಕರುವನ್ನು ನೋಡಲು ದೂರದ ಊರುಗಳಿಂದ ಜನ ಜಮಾಯಿಸುತ್ತಿದ್ದು, ಎಲ್ಲರೂ ಕರುವಿಗೆ ಹೂವಿನ ಮಾಲೆ ಹಾಕಿ, ಕಾಣಿಕೆ ರೂಪದಲ್ಲಿ ಹಣವನ್ನು ಅರ್ಪಿಸಿ ಮಹಾದೇವನ ರೂಪವೆಂದು ಪೂಜಿಸುತ್ತಿದ್ದಾರೆ. ಮತ್ತೊಂದೆಡೆ ಪಶು ವೈದ್ಯರು ಕರು ಸರಿಯಾಗಿ ಬೆಳವಣಿಗೆಯಾಗದ ಕಾರಣ ಹೀಗೆ ಜನಿಸಿದೆ ಎನ್ನುತ್ತಿದ್ದಾರೆ. ಜನವರಿ 14 ರಂದು ಸಂಜೆ 7

ಮೂರು ಕಣ್ಣು, 4 ಮೂಗಿನ ರಂಧ್ರ ಹೊಂದಿರುವ ಕರುವನ್ನು ಇಲ್ಲಿ ನೋಡಬಹುದು Read More »

ರಿಕ್ಷಾದಲ್ಲಿ‌ ಬಿಟ್ಟು ಹೋಗಿದ್ದ ಮನೆಯ ಕೀ ತೆಗೆದು ದರೋಡೆ| ಪರಿಚಿತರಿಂದಲೇ ಕಳವುಗೈದ ಶಂಕೆ| ದೂರು‌ ದಾಖಲು|

ಬೆಳ್ತಂಗಡಿ: ಆಟೋ ರಿಕ್ಷಾ ಚಾಲಕರೊಬ್ಬರು ತನ್ನ ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದ ಮನೆಯ ಬೀಗದ ಕೀಯನ್ನು ಕದ್ದೊಯ್ದ ಕಳ್ಳರು ಚಾಲಕನ ಮನೆಗೆ ನುಗ್ಗಿ 1.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ನಿನ್ನೆ ಕೊಕ್ಕಡದಲ್ಲಿ ನಡೆದಿದೆ. ಕೊಕ್ಕಡ ಬಲಿಪಗುಡ್ಡೆ ನಿವಾಸಿ ಅಶೋಕ್ ಎಂಬವರ ಮನೆಯಲ್ಲಿ ಈ ಕೃತ್ಯ‌ ನಡೆದಿದೆ. ಅಶೋಕ್ ರಿಕ್ಷಾವನ್ನು ಕೊಕ್ಕಡದಲ್ಲಿ ನಿಲ್ಲಿಸಿ ಪುತ್ತೂರಿಗೆ ತೆರಳಿದ್ದರು. ಈ ವೇಳೆ ಮನೆಯ ಬೀಗದ ಕೈಯನ್ನು ರಿಕ್ಷಾದಲ್ಲಿ ಮರೆತು ಹೋಗಿದ್ದರೆನ್ನಲಾಗಿದೆ. ಅವರು ಪುತ್ತೂರಿನಿಂದ ಹಿಂದಿರುಗಿ ಬಂದು ನೋಡಿದಾಗ

ರಿಕ್ಷಾದಲ್ಲಿ‌ ಬಿಟ್ಟು ಹೋಗಿದ್ದ ಮನೆಯ ಕೀ ತೆಗೆದು ದರೋಡೆ| ಪರಿಚಿತರಿಂದಲೇ ಕಳವುಗೈದ ಶಂಕೆ| ದೂರು‌ ದಾಖಲು| Read More »

ಧರ್ಮಸ್ಥಳ: ಇಂದು ಮೋದಿ ದೀರ್ಘಾಯುಷ್ಯಕ್ಕಾಗಿ ಮಹಾಮೃತ್ಯುಂಜಯ ಯಾಗ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಾನದಲ್ಲಿ ಬೆಳ್ತಂಗಡಿ ತಾಲೂಕಿನ ಸಮಸ್ತ ಜನತೆಯ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ದೀರ್ಘಾಯಸ್ಸು ಹಾಗೂ ಆರೋಗ್ಯ ವೃದ್ಧಿಗಾಗಿ ಪ್ರಾರ್ಥಿಸಿ ಇಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಯುತ್ತಿದೆ. ವೇದಮೂರ್ತಿ ನಾಗೇಂದ್ರ ಭಾರದ್ವಾಜ್ ಸುರತ್ಕಲ್ ಅವರ ಪ್ರಧಾನ ಪೌರೋಹಿತ್ಯದಲ್ಲಿ 108 ಮಂದಿ ಪುರೋಹಿತರಿಂದ ಧರ್ಮಸ್ಥಳ ದೇಗುಲದ ಆವರಣದಲ್ಲಿ ಏಳು ಹೋಮಕುಂಡಗಳಲ್ಲಿ ಹೋಮ ನಡೆಯುತ್ತಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ

ಧರ್ಮಸ್ಥಳ: ಇಂದು ಮೋದಿ ದೀರ್ಘಾಯುಷ್ಯಕ್ಕಾಗಿ ಮಹಾಮೃತ್ಯುಂಜಯ ಯಾಗ Read More »

ಕಾಸರಗೋಡು: ನೀಲೇಶ್ವರ ದಾಮೋದರ ತಂತ್ರಿ ಇನ್ನಿಲ್ಲ

ಕಾಸರಗೋಡು: ದ.ಕ ಜಿಲ್ಲೆಯ ಹಲವಾರು ದೇವಸ್ಥಾನಗಳ ತಂತ್ರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಸಿದ್ಧ ವೈದಿಕ ವಿದ್ವಾಂಸರಾದ ನೀಲೇಶ್ವರ ದಾಮೋದರ ತಂತ್ರಿಗಳವರು ನಿನ್ನೆ ರಾತ್ರಿ ನಿಧನರಾದರು. ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು. ಪುತ್ತೂರು ಹಾಗೂ ಸುಳ್ಯ ತಾಲೂಕಿನ ಬಹುತೇಕ ದೇವಸ್ಥಾನಗಳಲ್ಲಿ ತಂತ್ರಿಗಳಾಗಿ ಮಾರ್ಗಸೂಚಿ ನೀಡುತ್ತಿದ್ದ ಅವರು ಸುಳ್ಯ ತಾಲೂಕಿನ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನ, ಮರ್ಕಂಜದ ಕಾವೂರು, ರೆಂಜಾಳ, ಮಿನುಂಗೂರು ದೇವಸ್ಥಾನಗಳು, ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನ, ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಸ್ಥಾನ ಮೊದಲಾದ

ಕಾಸರಗೋಡು: ನೀಲೇಶ್ವರ ದಾಮೋದರ ತಂತ್ರಿ ಇನ್ನಿಲ್ಲ Read More »

ಮುಂದುವರೆದ ಕೊರೊನಾ ಹಾವಳಿ| ಇಂದು ಸಿಎಂ ನೇತೃತ್ವದಲ್ಲಿ ಸಭೆ| ಸೆಮಿ ಲಾಕ್ ಡೌನ್ ಸಾಧ್ಯತೆ|

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಶರವೇಗದಲ್ಲಿ ಹರಡುತ್ತಿರುವ ಹಿನ್ನೆಲೆ ಇಂದು(ಜ.17) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇಂದು ಸಂಜೆ 4 ಗಂಟೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಿಎಂ ಬೊಮ್ಮಾಯಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸಚಿವರಾದ ಡಾ.ಕೆ ಸುಧಾಕರ್‌ ಹಾಗೂ ಆರ್‌. ಅಶೋಕ್‌, ಕೋವಿಡ್‌ 19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ . ರಾಜ್ಯದಲ್ಲಿ ಸದ್ಯ ವಿಧಿಸಿರುವ ಕಠಿಣ ರೂಲ್ಸ್‌ ಜನವರಿ 19ಕ್ಕೆ

ಮುಂದುವರೆದ ಕೊರೊನಾ ಹಾವಳಿ| ಇಂದು ಸಿಎಂ ನೇತೃತ್ವದಲ್ಲಿ ಸಭೆ| ಸೆಮಿ ಲಾಕ್ ಡೌನ್ ಸಾಧ್ಯತೆ| Read More »

ಉಡುಪಿ: ಶಬರಿಮಲೆಗೆ ತೆರಳಿದ್ದ ವೃತಧಾರಿ ಸ್ವಾಮಿಪಾದಕ್ಕೆ..!

ಉಡುಪಿ: ಜಿಲ್ಲೆಯಿಂದ ಶಬರಿಮಲೆ ಸನ್ನಿಧಾನಕ್ಕೆ ತೆರಳಿದ್ದ ಮಾಲಾಧಾರಿಯೋರ್ವರು ಬೆಟ್ಟ ಹತ್ತುವಾಗ ಹೃದಯಾಘಾತ ಸಂಭವಿಸಿ ನಿಧನರಾಗಿದ್ದಾರೆ. ಸುರೇಶ್ ಬಂಗೇರ ( 52) ಹೃದಯಾಘಾತದಿಂದ ಸಾವಿಗೀಡಾದ ಮಾಲಾಧಾರಿ. ಜಿಲ್ಲೆಯ ಉದ್ಯಾವರದ ಈ ಮಾಲಾಧಾರಿ ಇಲ್ಲಿಯ ಅಯ್ಯಪ್ಪ ಮಂದಿರದಿಂದ 32 ಸ್ವಾಮಿಗಳ ಜೊತೆ ಇರುಮುಡಿ ಕಟ್ಟಿ ನಿನ್ನೆ‌ ರೈಲು ಮಾರ್ಗದ ಮೂಲಕ ಶಬರಿ ತಲುಪಿದ್ದರು. ಇಂದು ದೇವರ ದರ್ಶನಕ್ಕೆ ಬೆಟ್ಟ ಹತ್ತಿ ಹೊರಟ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ರಿಕ್ಷಾ ಚಾಲಕನಾಗಿ ಜೀವನ ಸಾಗಿಸುತ್ತಿದ್ದ ಮಾಲಾಧಾರಿ ಸುರೇಶ್ ಕುಟುಂಬದಲ್ಲಿ ಆಕ್ರಂದನ

ಉಡುಪಿ: ಶಬರಿಮಲೆಗೆ ತೆರಳಿದ್ದ ವೃತಧಾರಿ ಸ್ವಾಮಿಪಾದಕ್ಕೆ..! Read More »

ಬಳ್ಪ: ಆದರ್ಶ ಗ್ರಾಮದ ಬೋಗಾಯನ ಕೆರೆ ಅಭಿವೃದ್ಧಿಗೆ ಕೂಡಿ ಬಂತು ಕಾಲ !

ರೂ. 2 ಕೋಟಿ ಅನುದಾನ ಬಿಡುಗಡೆ | ಇಲ್ಲಿದೆ ಬರಪೂರ ಜಲಮೂಲ ಸುಬ್ರಹ್ಮಣ್ಯ: ಕಡಬ ತಾಲೂಕಿನ ಸಂಸದರ ಆದರ್ಶ ಗ್ರಾಮದ ಬಳ್ಪದ ಐತಿಹಾಸಿಕ ಬೋಗಾಯನ ಕೆರೆ ಅಭಿವೃದ್ಧಿಗೆ ಕೊನೆಗೂ ಅಭಿವೃದ್ಧಿ ಭಾಗ್ಯ ಒದಗಿ ಬಂದಿದೆ. 1.40 ಎಕ್ರೆಯ ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ ರೂ. 2 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಐತಿಹಾಸಿಕ ಕೆರೆ;ಬಳ್ಪದ ಬೋಗಾಯನ ಕೆರೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕದಂಬರ ತುಂಡರಸ ಬೋಗರಾಯವರ್ಮ ಕಡಬ ಪ್ರದೇಶವನ್ನು ಆಳುತ್ತಿದ್ದ ಕಾಲದಲ್ಲಿ

ಬಳ್ಪ: ಆದರ್ಶ ಗ್ರಾಮದ ಬೋಗಾಯನ ಕೆರೆ ಅಭಿವೃದ್ಧಿಗೆ ಕೂಡಿ ಬಂತು ಕಾಲ ! Read More »

ಓಮಿಕ್ರಾನ್ ಗೇ ಮುಗಿಯಲ್ಲ, ಬರಲಿದೆ ಇನ್ನಷ್ಟು ಗಂಡಾಂತರಿ ವೈರಸ್| ಬೆಚ್ಚಿಬೀಳಿಸಿದ ವೈಜ್ಞಾನಿಕ ವರದಿ|

ಸಮಗ್ರ ನ್ಯೂಸ್: ಪ್ರಪಂಚದ ಎಲ್ಲಾ ದೇಶಗಳನ್ನ ಒಮಿಕ್ರಾನ್ ರೂಪಾಂತರ ತನ್ನ ಮುಷ್ಟಿಯಲ್ಲಿ ಹಿಡಿದುಕೊಂಡಿದೆ. ಈ ಮ್ಯೂಟೇಟೆಡ್ ವೈರಸ್ ಭಾಗಶಃ ವಿಶ್ವದ ಹಲವು ದೇಶಗಳಲ್ಲಿ ಕೊರೊನಾ ವೈರಸ್ ನ ಹೊಸ ಅಲೆಗೆ ಕಾರಣವಾಗಿದೆ. ಹೀಗಾಗಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಒಮಿಕ್ರಾನ್ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿವೆ. ಆದರೆ ಈ ಮಧ್ಯೆ, ಈ ರೂಪಾಂತರವು ಕೊರೋನಾ ವೈರಸ್‌ನ ಕೊನೆಯ ರೂಪಾಂತರವಾಗುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇಂತಹ ರೂಪಾಂತರಗಳನ್ನು ಭವಿಷ್ಯದಲ್ಲಿಯೂ ಕಾಣಬಹುದು. ಆರಂಭಿಕ ಸೋಂಕಿನಿಂದಾಗಿ, ಈ ವೈರಸ್ ರೂಪಾಂತರಗೊಳ್ಳುವ ಅವಕಾಶವನ್ನು

ಓಮಿಕ್ರಾನ್ ಗೇ ಮುಗಿಯಲ್ಲ, ಬರಲಿದೆ ಇನ್ನಷ್ಟು ಗಂಡಾಂತರಿ ವೈರಸ್| ಬೆಚ್ಚಿಬೀಳಿಸಿದ ವೈಜ್ಞಾನಿಕ ವರದಿ| Read More »