January 2022

ವಿವಾದಾತ್ಮಕ ಹೇಳಿಕೆ| ಕಾಳಿಮಠ ಸ್ವಾಮೀಜಿ ವಿರುದ್ದ ಎಫ್ಐಆರ್|

ಶ್ರೀರಂಗಪಟ್ಟಣ: ಇಲ್ಲಿನ ಜಾಮಿಯಾ ಮಸೀದಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಹೇಳಿಕೆ ನೀಡಿ ವಿಡಿಯೋ ಹರಿಬಿಟ್ಟಿದ್ದ ಕಾಳಿ ಮಠದ ಋಷಿಕುಮಾರಸ್ವಾಮಿ ವಿರುದ್ಧ ಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾನುವಾರ ಖಾಸಗಿ ಕಾರ್ಯಕ್ರಮ ನಿಮಿತ್ತ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದ ಅರಸೀಕೆರೆಯ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ, ಮಸೀದಿ ಮುಂಭಾಗದಲ್ಲೇ ನಿಂತು ವಿವಾದಿತ ಹೇಳಿಕೆ ಉಲ್ಲೇಖಿಸಿ ವಿಡಿಯೋ ಚಿತ್ರೀಕರಣ ನಡೆಸಿ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್​ ಆಗಿದೆ. ಈ ಹಿನ್ನೆಲೆ […]

ವಿವಾದಾತ್ಮಕ ಹೇಳಿಕೆ| ಕಾಳಿಮಠ ಸ್ವಾಮೀಜಿ ವಿರುದ್ದ ಎಫ್ಐಆರ್| Read More »

ಬಸ್ಸ್ ನಲ್ಲಿ ವಿದ್ಯಾರ್ಥಿನಿಯ ಅತ್ಯಾಚಾರ ನಡಸಿದ ಡ್ರೈವರ್ ಮತ್ತು ಕಂಡಕ್ಟರ್

ಪಾಲ(ತ್ರಿಶೂರ್): ಖಾಸಗಿ ಬಸ್​​ವೊಂದರಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಡಕ್ಟರ್ ಹಾಗೂ ಡ್ರೈವರ್​​​ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರನ್ನು ಆರೋಪಿಗಳನ್ನು ಅಫ್ಜಲ್​(31) ಹಾಗೂ ಅಬಿನ್​ ಎಂದು ಗುರುತಿಸಲಾಗಿದೆ. ಇವರಿಬ್ಬರು ಕೇರಳದ ಇಡುಕ್ಕಿಯವರಾಗಿದ್ದು 8ನೇ ತರಗತಿ ವಿದ್ಯಾರ್ಥಿನಿಯನ್ನು ಅತ್ಯಾಚಾರ ನಡೆಸಿದ್ದಾರೆ. ಈಕೆ ಪ್ರತಿದಿನ ಶಾಲೆಗೆ ಇದೇ ಬಸ್​​ನಲ್ಲಿ ಹೋಗುತ್ತಿದ್ದಳು ಎಂದು ತಿಳಿದು ಬಂದಿದೆ. ಈಗಾಗಲೇ ಮದುವೆ ಮಾಡಿಕೊಂಡಿರುವ ಅಫ್ಜಲ್​​ ವಿದ್ಯಾರ್ಥಿನಿ ಜೊತೆ ಪ್ರೀತಿಯ ನಾಟಕವಾಡಿದ್ದಾನೆ. ಶನಿವಾರದಂದು ಶಾಲೆ ಬಿಟ್ಟು ಮನೆಗೆ ತೆರಳಲು

ಬಸ್ಸ್ ನಲ್ಲಿ ವಿದ್ಯಾರ್ಥಿನಿಯ ಅತ್ಯಾಚಾರ ನಡಸಿದ ಡ್ರೈವರ್ ಮತ್ತು ಕಂಡಕ್ಟರ್ Read More »

ಯುವಕನ ಜೊತೆ ಮದುವೆ| ಸಲಿಂಗಿ ಸಂಗಾತಿ ಜೊತೆಗೆ ವಧು ಪರಾರಿ

ರಾಂಚಿ: ಮನೆಯವರ ಒತ್ತಾಯಕ್ಕೆ ಯುವಕನನ್ನು ಮದುವೆ ಮಾಡಿಕೊಂಡಿರುವ ಯುವತಿ ಮರುದಿನವೇ ಸಲಿಂಗಿ ಸಂಗಾತಿ ಜೊತೆ ಓಡಿ ಹೋಗಿರುವ ಘಟನೆ ಜಾರ್ಖಂಡ್​ನ ಧನ್ಬಾದ್‍ನಲ್ಲಿ ನಡೆದಿದೆ. ಯುವತಿ ವಿವಾಹ ಮಾಡಿಕೊಳ್ಳುವುದಕ್ಕೂ ಮುಂಚಿತವಾಗಿ ಸಲಿಂಗ ಸಂಗಾತಿ ಜೊತೆ ವಾಸವಾಗಿದ್ದಳು. ಇದನ್ನರಿತ ಕುಟುಂಬಸ್ಥರು ಯುವಕನೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಈ ಬೆನ್ನಲ್ಲೇ ಆಕೆ ಮದುವೆಯಾದ ಮರುದಿನವೇ ಸಲಿಂಗ ಸಂಗಾತಿ ಜೊತೆಗೆ ಎಸ್ಕೇಪ್ ಆಗಿದ್ದಾಳೆ. ಇಬ್ಬರೂ ಕಳೆದ ಅನೇಕ ವರ್ಷಗಳಿಂದ ಪರಿಚಯವಾಗಿದ್ದು, ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದ್ದರಂತೆ. ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಪ್ರಕರಣ

ಯುವಕನ ಜೊತೆ ಮದುವೆ| ಸಲಿಂಗಿ ಸಂಗಾತಿ ಜೊತೆಗೆ ವಧು ಪರಾರಿ Read More »

ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳಿದ ನಟ ಧನುಷ್| 18 ವರ್ಷ ಜೊತೆಗಿದ್ದ ರಜನಿ ಪುತ್ರಿಗೆ ಡಿವೊರ್ಸ್|

ಚೆನ್ನೈ: ಕಾಲಿವುಡ್​ ಸೂಪರ್​ಸ್ಟಾರ್​ ಧನುಷ್​ ಅವರು 18 ವರ್ಷದ ವೈವಾಹಿಕ ಜೀವನಕ್ಕೆ ದಿಢೀರ್​ ಗುಡ್​ ಬೈ ಹೇಳಿದ್ದಾರೆ. ಸೂಪರ್​ಸ್ಟಾರ್​ ರಜಿನಿಕಾಂತ್ ಅವರ ಹಿರಿಯ​ ಪುತ್ರಿ ಐಶ್ವರ್ಯಾರನ್ನು ವರಿಸಿದ್ದ ಧನುಷ್​, ಇದೀಗ ಟ್ವಿಟರ್​ ಮೂಲಕ ವಿಚ್ಛೇದನಾ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಂತೆ ಮತ್ತು ಪರಸ್ಪರ ಹಿತೈಷಿಗಳಾಗಿ ಈ 18 ವರ್ಷಗಳು ಒಟ್ಟಿಗೆ ಕಳೆದೆವು. ಈ ಸುದೀರ್ಘ ಪ್ರಯಾಣವು ಬೆಳವಣಿಗೆ, ತಿಳುವಳಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಆದರೆ, ಇಂದು ನಾವು ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ ಎಂದು

ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳಿದ ನಟ ಧನುಷ್| 18 ವರ್ಷ ಜೊತೆಗಿದ್ದ ರಜನಿ ಪುತ್ರಿಗೆ ಡಿವೊರ್ಸ್| Read More »

ನೆಟ್ಟಿಗರ ಮನಗೆದ್ದ ಹಾರುವ ಜಿಂಕೆ! ಈ ಚಿಗರೆಯ ಓಟಕ್ಕೆ ಜನ ಫುಲ್ ಫಿದಾ

ಡಿಜಿಟಲ್ ಡೆಸ್ಕ್ : ಜಿಂಕೆ ಹಾರಬಲ್ಲ ಫ್ಯಾಂಟಸಿ ಕಥೆಯ ಕಥಾವಸ್ತುವನ್ನು ನೀವು ಎಂದಾದರೂ ಯೋಚಿಸಿದ್ದರೆ ವೈಲ್ಡ್‌ಲೆನ್ಸ್ ಇಕೋ ಫೌಂಡೇಶನ್ ಮತ್ತು ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಇತ್ತೀಚೆಗೆ ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊವನ್ನು ನೀವು ನೋಡಬಹುದು. ಜಿಂಕೆಗಳು ಹಾರಲಾರವು, ಪಕ್ಷಿಗಳು ಹಾರಬಲ್ಲವು. ಆದರೆ ಅಂತರ್ಜಾಲವು ಅತ್ಯಂತ ನಂಬಲಾಗದ ಸಂಗತಿಗಳನ್ನು ಸಾಬೀತುಪಡಿಸುತ್ತವೆ. ಪ್ರಾಣಿಗಳು ಕಾಡಿನಲ್ಲಿ ಕೆಲವು ನಂಬಲಾಗದ ಕೆಲಸಗಳನ್ನು ಮಾಡುತ್ತವೆ ಎಂದು ತಿಳಿದುಬಂದಿದೆ ಮತ್ತು ಕೆಲವು ಜನರು ಅಂತಹ ಅದ್ಭುತ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಸಾಕಷ್ಟು

ನೆಟ್ಟಿಗರ ಮನಗೆದ್ದ ಹಾರುವ ಜಿಂಕೆ! ಈ ಚಿಗರೆಯ ಓಟಕ್ಕೆ ಜನ ಫುಲ್ ಫಿದಾ Read More »

ಶಿರಾಡಿ‌ ಘಾಟ್ ರಸ್ತೆಯನ್ನು ಬಂದ್ ಮಾಡುವುದು ಸರಿಯಲ್ಲ – ಮಂಜುನಾಥ್ ಭಂಡಾರಿ

ಮಂಗಳೂರು: ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟಿಯನ್ನು 6 ತಿಂಗಳು ಬಂದ್ ಮಾಡಲು ಹೋಗಿ ಕೇಂದ್ರ ಬಿಜೆಪಿ ಸರ್ಕಾರ ವಿಶ್ವದಾಖಲೆ ನಿರ್ಮಿಸಲು ಹೊರಟಿದೆ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ವ್ಯಂಗ್ಯವಾಡಿದರು. ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್​​ಎಚ್​​​ಎಐ‌ನವರು 10 ಕಿ.ಮೀ ರಸ್ತೆ ಕಾಮಗಾರಿಗಾಗಿ ಶಿರಾಡಿ ಘಾಟಿಯನ್ನು 6 ತಿಂಗಳುಗಳ ಕಾಲ ಮುಚ್ಚುವಂತೆ ಆದೇಶ ಮಾಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವುದು ಗಮನಕ್ಕೆ ಬಂದಿದೆ. ಈ ಹಿಂದೆಯೂ ಎರಡು ಬಾರಿ ಶಿರಾಡಿಯನ್ನು ಮುಚ್ಚಲಾಗಿತ್ತು‌. ಎಂಆರ್​​ಪಿಎಲ್, ಎನ್‌ಎಂಪಿಟಿ ಬಂದರು

ಶಿರಾಡಿ‌ ಘಾಟ್ ರಸ್ತೆಯನ್ನು ಬಂದ್ ಮಾಡುವುದು ಸರಿಯಲ್ಲ – ಮಂಜುನಾಥ್ ಭಂಡಾರಿ Read More »

ಬೆಳ್ತಂಗಡಿ: ಯಮಸ್ವರೂಪಿ ಲಾರಿಗೆ ಬೈಕ್ ಢಿಕ್ಕಿ| ಇಬ್ಬರು ಯುವಕರು ದಾರುಣ ಸಾವು

ಬೆಳ್ತಂಗಡಿ: ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಯುವಕರು ಸ್ಥಳದಲ್ಲೆ ದಾರುಣವಾಗಿ ಮೃತಪಟ್ಟ ಘಟನೆ ತಾಲೂಕಿನ ಗುರುವಾಯನಕೆರೆ ಬಳಿ ಸಂಭವಿಸಿದೆ. ಮೃತ ಯುವಕರು ಬಂಟ್ವಾಳದ ಅಜಿಲಮೊಗರು ದರ್ಗಾ ಉರೂಸಿಗೆ ತೆರಳಿ ವಾಪಾಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆಯೆಂದು ತಿಳಿದು ಬಂದಿದೆ. ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಲಾರಿ ಡಿಕ್ಕಿಯಾಗಿದ್ದು ಮೃತಪಟ್ಟವರನ್ನು ಅಶ್ಪ ಮತ್ತು ನಿಶ್ಪ ಎಂದು ಗುರುತಿಸಲಾಗಿದೆ. ಈ ಇಬ್ಬರು ಯುವಕರು ಗುರುವಾಯನಕೆರೆ ಮತ್ತು ನಾವೂರಿನವರೆಂದು ತಿಳಿದು ಬಂದಿದೆ.

ಬೆಳ್ತಂಗಡಿ: ಯಮಸ್ವರೂಪಿ ಲಾರಿಗೆ ಬೈಕ್ ಢಿಕ್ಕಿ| ಇಬ್ಬರು ಯುವಕರು ದಾರುಣ ಸಾವು Read More »

ರಾಜ್ಯದಲ್ಲಿ ಲಾಕ್ ಡೌನ್‌ಮಾಡುವ ಪ್ರಶ್ನೆಯೇ ಇಲ್ಲ, ವೀಕೆಂಡ್ ಕರ್ಪ್ಯೂ ಬಗ್ಗೆ ಶುಕ್ರವಾರ ತೀರ್ಮಾನ – ಸಚಿವ ಆರ್.ಅಶೋಕ್

ಬೆಂಗಳೂರು: ಜನವರಿ 25ರ ನಂತರ ರಾಜ್ಯದಲ್ಲಿ ಕೊರೋನಾ ತೀವ್ರ ಮಟ್ಟಕ್ಕೆ ತಲುಪಲಿದೆ ಎಂದು ತಜ್ಞರು ತಿಳಿಸಿದ್ದಾರೆ. ವೀಕೆಂಡ್ ಕರ್ಪ್ಯೂ ಅಂತ್ಯ, ಮುಂದುವರಿಕೆ ಬಗ್ಗೆ ಶುಕ್ರವಾರ ಮತ್ತೆ ಸಭೆ ಕರೆಯಲಾಗಿದ್ದು ಆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೆ ರಾಜ್ಯದಲ್ಲಿ ವೀಕೆಂಡ್ ಹಾಗೂ ನೈಟ್ ಕರ್ಪ್ಯೂ ಮುಂದುವರೆಯಲಿದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟ ಪಡಿಸಿದ್ದಾರೆ. ಸಿಎಂ ನೇತೃತ್ವದ ಸಭೆಯ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,

ರಾಜ್ಯದಲ್ಲಿ ಲಾಕ್ ಡೌನ್‌ಮಾಡುವ ಪ್ರಶ್ನೆಯೇ ಇಲ್ಲ, ವೀಕೆಂಡ್ ಕರ್ಪ್ಯೂ ಬಗ್ಗೆ ಶುಕ್ರವಾರ ತೀರ್ಮಾನ – ಸಚಿವ ಆರ್.ಅಶೋಕ್ Read More »

ಕಡಬ: ಕಣ್ಣೆದುರಲ್ಲೇ ಹಿಟಾಚಿ ಅಗ್ನಿಗಾಹುತಿ| ಲಕ್ಷಾಂತರ ರೂ.‌ನಷ್ಟ|

ಕಡಬ: ಕಣ್ಣೆದುರಲ್ಲೇ ಹಿಟಾಚಿ ಇಂಜಿನ್ ಒಂದು ಬೆಂಕಿಗಾಹುತಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟಗೊಂಡ ಘಟನೆ ತಾಲೂಕಿನ ಕೊಂಬಾರು‌ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ. ಉಪ್ಪಿನಂಗಡಿ ಸಮೀಪದ ಕಾಂಚನದ ಸಂಸ್ಥೆಗೆ ಸೇರಿದ ಹಿಟಾಚಿಯನ್ನು ಕೊಂಬಾರು ದೇವಸ್ಥಾನದ ಗದ್ದೆಯಲ್ಲಿ ನಿಲ್ಲಿಸಲಾಗಿದ್ದು, ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ. ತಕ್ಷಣವೇ ಹಿಟಾಚಿಯ ಸಿಬ್ಬಂದಿ ಹಾಗೂ ಸ್ಥಳೀಯರು ನೀರು ಹಾಯಿಸಿ ಬೆಂಕಿಯನ್ನು ನಂದಿಸಲು ಯತ್ನಿಸಿದರಾದರೂ, ಬೆಂಕಿ ಅದಾಗಲೇ ವ್ಯಾಪಿಸಿದ್ದರಿಂದ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದರಿಂದಾಗಿ ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ.

ಕಡಬ: ಕಣ್ಣೆದುರಲ್ಲೇ ಹಿಟಾಚಿ ಅಗ್ನಿಗಾಹುತಿ| ಲಕ್ಷಾಂತರ ರೂ.‌ನಷ್ಟ| Read More »

ಉಪ್ಪಿನಂಗಡಿ: ಬೈಕ್ ಕದ್ದು ಪರಾರಿಯಾಗುತ್ತಿದ್ದಾಗ ಲಾರಿ ಢಿಕ್ಕಿ – ಸವಾರರರಿಬ್ಬರು ಗಂಭೀರ

ಉಪ್ಪಿನಂಗಡಿ: ಗಾಂಧಿಪಾರ್ಕ್ ಬಳಿಯ ಜೈನ ಬಸದಿ ಸಮೀಪದ ಮನೆಯೊಂದರಲ್ಲಿ ನಿಲ್ಲಿಸಿದ್ದ ಬೈಕ್ ನ್ನು ಕಳ್ಳರು ನಕಲಿ ಕೀ ಬಳಸಿ ಕಳವುಗೈದು ತೆರಳುತ್ತಿದ್ದಾಗ ಅಪಘಾತವಾದ ಘಟನೆ ನಡೆದಿದೆ. ಬೈಕನ್ನು ಹಿರೇಬಂಡಾಡಿ ಗ್ರಾಮದ ಕೊಳ್ಳೇಜಾಲ್ ‌ನಿವಾಸಿ ಮುಹಮ್ಮದ್ ಎಂಬವರದು. ಇವರು ಬೈಕ್ ಕಾಲವಾದವಾದ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ಕೂಡಾ ದಾಖಲಿಸಿದ್ದರು. ಆದರೆ ಅಪರಿಚಿತ ಕಳ್ಳರು ಬೈಕ್ ಕದ್ದೊಯ್ದು ಪರಾರಿಯಾಗುತ್ತಿದ್ದ ವೇಳೆ ಬೈಕ್ ಶಿರಾಡಿ ಸಮೀಪದ ಅಡ್ಡಹೊಳೆ ಎಂಬಲ್ಲಿ ಲಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ

ಉಪ್ಪಿನಂಗಡಿ: ಬೈಕ್ ಕದ್ದು ಪರಾರಿಯಾಗುತ್ತಿದ್ದಾಗ ಲಾರಿ ಢಿಕ್ಕಿ – ಸವಾರರರಿಬ್ಬರು ಗಂಭೀರ Read More »