January 2022

ಟೆನಿಸ್ ಅಂಗಳಕ್ಕೆ ಸಾನಿಯಾ ಮಿರ್ಜಾ ಗುಡ್ ಬೈ| ಎರಡು ದಶಕಗಳ ವೃತ್ತಿಗೆ ವಿದಾಯ ಘೋಷಿಸಿದ ಮೂಗುತಿ ಸುಂದರಿ

ಸ್ಪೋರ್ಟ್ಸ್ ಡೆಸ್ಕ್: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಗೆ ಆಗಮಿಸಿದ ಸಾನಿಯಾ ಮಿರ್ಜಾ, ಇದು ತನ್ನ ಕೊನೆಯ ಋತು ಎಂದು ಹೇಳಿದ್ದು, ಈ ಮೂಲಕ 2022ರಲ್ಲಿ ಕೊನೆಯ ಬಾರಿಗೆ ಟೆನಿಸ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬುಧವಾರವೇ ಆಸ್ಟ್ರೇಲಿಯಾ ಓಪನ್ʼನಲ್ಲಿ ಸೋತ ನಂತರ ಅವರು ಈ ಹೇಳಿಕೆಯನ್ನ ನೀಡಿದರು. ಇದು ತನ್ನ ಕೊನೆಯ ಸೀಸನ್ ಎಂದು ಸಾನಿಯಾ ಮಿರ್ಜಾ ಹೇಳಿದರು. ಪಂದ್ಯದ ನಂತರ, ‘ನಾನು ಉತ್ತಮವಾಗಿ ಆಡಬಲ್ಲೆ ಎಂದು ನಾನು […]

ಟೆನಿಸ್ ಅಂಗಳಕ್ಕೆ ಸಾನಿಯಾ ಮಿರ್ಜಾ ಗುಡ್ ಬೈ| ಎರಡು ದಶಕಗಳ ವೃತ್ತಿಗೆ ವಿದಾಯ ಘೋಷಿಸಿದ ಮೂಗುತಿ ಸುಂದರಿ Read More »

ಅಂತರಾಷ್ಟ್ರೀಯ ವಿಮಾನಯಾನಕ್ಕೆ ಫೆ.28ರವರೆಗೂ ನಿರ್ಬಂಧ ವಿಸ್ತರಣೆ

ನವದೆಹಲಿ: ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಭಾರತಕ್ಕೆ ಅಂತರಾಷ್ಟ್ರೀಯ ವಿಮಾನಗಳ ಸಂಚಾರದ ಆಗಮನವನ್ನು ನಿರ್ಬಂಧಿಸಲಾಗಿತ್ತು. ಈ ಆದೇಶವನ್ನು ಮತ್ತೆ ಫೆಬ್ರವರಿ 28ರವರೆಗೆ ವಿಸ್ತರಿಸಲಾಗಿದೆ. ಈ ಕುರಿತು ಆದೇಶ ಹೊರಡಿಸಿರುವ ಕೇಂದ್ರ ವಿಮಾನ ಸಚಿವಾಲಯ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಭಾರತಕ್ಕೆ ಅಂತರಾಷ್ಟ್ರೀಯ ವಿಮಾನಗಳ ಸಂಚಾರದ ನಿರ್ಬಂಧವನ್ನು ಫೆ. 28ರವರೆಗೆ ವಿಸ್ತರಣೆ ಮಾಡಿರೋದಾಗಿ ತಿಳಿಸಿದೆ.

ಅಂತರಾಷ್ಟ್ರೀಯ ವಿಮಾನಯಾನಕ್ಕೆ ಫೆ.28ರವರೆಗೂ ನಿರ್ಬಂಧ ವಿಸ್ತರಣೆ Read More »

ಪುತ್ತೂರು: ಹಿಂದೂ-ಮುಸ್ಲಿಂ ಯುವಕರ ನಡುವೆ ಹಲ್ಲೆ| ಪೊಲೀಸರಿಂದ ಲಾಠಿ ಪ್ರಹಾರ

ಪುತ್ತೂರು: ಅನ್ಯಕೋಮಿನ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದು ನಂತರ ಅದು ಪರಸ್ಪರ ಹಲ್ಲೆಗೆ ತಿರುಗಿ ಘಟನಾ ಸ್ಥಳಕ್ಕೆ ಪೊಲೀಸರು ಬಂದು ಲಘು ಲಾಠಿ ಪ್ರಹಾರದ ಮೂಲಕ ಗುಂಪು ಚದುರಿಸಿದ ಘಟನೆ ಪುತ್ತೂರಿನ ಕೆದಿಲ ಗ್ರಾಮದ ಗಡಿಯಾರದಲ್ಲಿ ತಡರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕೆಲ ಯುವಕರನ್ನು ಪೊಲೀಸರು ಬಂಧಿಸಿದ್ದು, ಬಂಧಿತರನ್ನು ಗಡಿಯಾರದ ಸತ್ತಿಕಲ್ಲು ನಿವಾಸಿ ರಷ್ಪಕ್, ಪೆರ್ನೆ ನಿವಾಸಿಗಳಾದ ಹರ್ಷಿತ್, ಸತೀಶ್, ಜಗದೀಶ್ ಎನ್ನಲಾಗಿದೆ. ಅನ್ಯಕೋಮಿನ ಯುವಕರ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ನಡೆದಾಗ ಪೊಲೀಸರು

ಪುತ್ತೂರು: ಹಿಂದೂ-ಮುಸ್ಲಿಂ ಯುವಕರ ನಡುವೆ ಹಲ್ಲೆ| ಪೊಲೀಸರಿಂದ ಲಾಠಿ ಪ್ರಹಾರ Read More »

ಬೆಂಗಳೂರು: ಕೂದಲಳತೆಯ ಅಂತರದಲ್ಲಿ ತಪ್ಪಿದ ವಿಮಾನ ಅಪಘಾತ| ಅದೃಷ್ಟವಶಾತ್ ನೂರಾರು ಪ್ರಯಾಣಿಕರು ಪಾರು

ಬೆಂಗಳೂರು: ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೂದಲಳತೆಯ ಅಂತರದಲ್ಲಿ ಭಾರಿ‌ ಅನಾಹುತ ತಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಟೇಕ್ ಆಫ್​ ಆಗುವ ವೇಳೆ ಒಂದೇ ದಿಕ್ಕಿನಲ್ಲಿ ಎರಡು ವಿಮಾನಗಳು ಮುಖಾಮುಖಿ ಬಂದಿದ್ದು, ಸ್ವಲ್ಪದರಲ್ಲೆ ಈ ಅನಾಹುತ ತಪ್ಪಿದೆ. ಜನವರಿ 7 ರಂದು‌ ಈ ಘಟನೆ ನಡೆದಿದ್ದು, ಒಂದೇ ಸಮಯದಲ್ಲಿ ಟೇಕ್ ಆಫ್​ ಗೆ ಬಂದ ಎರಡೂ ವಿಮಾನಗಳು ಇಂಡಿಗೋ ವಿಮಾನ ಸಂಸ್ಥೆಯದ್ದಾಗಿವೆ. ಕೊಲ್ಕತ್ತಾ ಮತ್ತು ಭುವನೇಶ್ವರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನಗಳು ಇವಾಗಿದ್ದವು. 6E455

ಬೆಂಗಳೂರು: ಕೂದಲಳತೆಯ ಅಂತರದಲ್ಲಿ ತಪ್ಪಿದ ವಿಮಾನ ಅಪಘಾತ| ಅದೃಷ್ಟವಶಾತ್ ನೂರಾರು ಪ್ರಯಾಣಿಕರು ಪಾರು Read More »

ಚಿಕನ್ ಚಿಲ್ಲಿ, ಬಿರಿಯಾನಿ ತಿನ್ನುವ ಸ್ಪರ್ಧೆ| ಸ್ಪರ್ಧಾಳುಗಳ ಮೇಲೆ ಕೇಸು ದಾಖಲು

ಧರ್ಮಪುರಿ: 1 ಕೆ.ಜಿ. ಚಿಕನ್ ಚಿಲ್ಲಿ ಹಾಗೂ ಬಿರಿಯಾನಿ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದವರ ಮೇಲೆ ಕೇಸು ದಾಖಲಿಸಿರುವ ಘಟನೆ ಧರ್ಮಪುರಿಯ ಮುಕ್ಕಲನಾಯಕನಪಟ್ಟಿ ಗ್ರಾಮದಲ್ಲಿ ನಡೆದಿದೆ. ಪೊಂಗಲ್ ಹಬ್ಬದ ಪ್ರಯುಕ್ತ ಗ್ರಾಮಸ್ಥರು ಪ್ರತಿ ವರ್ಷ ಈ ಸ್ಪರ್ಧೆಯನ್ನು ಇಲ್ಲಿ ಆಯೋಜಿಸುತ್ತಿದ್ದರು. ಸ್ಪರ್ಧೆಯಲ್ಲಿ 15 ಕೆ.ಜಿ. ಚಿಕನ್ ಫ್ರೈ ಮಾಡಿ, ಸ್ಪರ್ಧೆಯಲ್ಲಿ ಭಾಗವಹಿಸಿದ್ದ 15 ಯುವಕರಿಗೆ ಬಡಿಸಲಾಯಿತು. ಇನ್ನೂ ಬಿರಿಯಾನಿ ತಿನ್ನುವ ಸ್ಪರ್ಧೆಯಲ್ಲಿ ಒಟ್ಟು 21 ಮಂದಿ ಯುವಕರು ಭಾಗಿಯಾಗಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಭಾನುವಾರ ಲಾಕ್ ಡೌನ್ ಜಾರಿ ಮಾಡಲಾಗಿತ್ತು.

ಚಿಕನ್ ಚಿಲ್ಲಿ, ಬಿರಿಯಾನಿ ತಿನ್ನುವ ಸ್ಪರ್ಧೆ| ಸ್ಪರ್ಧಾಳುಗಳ ಮೇಲೆ ಕೇಸು ದಾಖಲು Read More »

ಮಂಗಳೂರು: ಮರುವಾಯಿ ತಿಂದು ಅಸ್ವಸ್ಥ

ಮಂಗಳೂರು: ಮರುವಾಯಿ(ಚಿಪ್ಪು ಮೀನು) ತಿಂದು ಹಲವರು ಅಸ್ವಸ್ಥಗೊಂಡು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನಗರದ ಹೊರವಲಯದ ಗುರುಪುರ ಕುಪ್ಪೆಪದವುವಿನಲ್ಲಿ ನಡೆದಿದೆ. ತುಳುವಿನಲ್ಲಿ ಮರುವಾಯಿ ಎಂದು ಕರೆಯಲ್ಪಡುವ ಚಿಪ್ಪು ಮೀನು ಖರೀದಿಸಿ ಪದಾರ್ಥ ಮಾಡಿ ತಿಂದ ಮೇಲೆ ಕೆಲವರು ಅಸ್ವಸ್ಥಗೊಂಡಿದ್ದು, ಕೋವಿಡ್ ಭೀತಿಯಿಂದ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳದೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನು ಆರೊಗ್ಯ ಕೇಂದ್ರಕ್ಕೆ ಯಾರೊಬ್ಬರೂ ಚಿಕಿತ್ಸೆಗೆ ಬಂದಿಲ್ಲ. ಫುಡ್ ಪಾಯಿಸನ್ ಆಗಿರುವ ಬಗ್ಗೆ ಕೆಲವರು ಮಾಹಿತಿ ನೀಡಿದ್ದಾರೆ. ಅನಾರೋಗ್ಯ

ಮಂಗಳೂರು: ಮರುವಾಯಿ ತಿಂದು ಅಸ್ವಸ್ಥ Read More »

ಬಂಟ್ವಾಳ: ರಾತ್ರೋರಾತ್ರಿ ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಕಾರಾಜೆ ನಿವಾಸಿ ಜಲೀಲ್ ( 55) ಎಂದು ಗುರುತಿಸಲಾಗಿದೆ.ಇವರು ರಾತ್ರಿ ಸುಮಾರು 11 ಗಂಟೆಯ ವೇಳೆಗೆ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. 11 ಗಂಟೆಯ ವೇಳೆಗೆ ನೇತ್ರಾವತಿ ಸೇತುವೆಯಲ್ಲಿ ಬೈಕ್ ಚಪ್ಪಲಿ ಹಾಗೂ ಮೊಬೈಲ್ ಇಟ್ಟು ಯಾರು ಇಲ್ಲದ ಬಗ್ಗೆ ಸಂಶಯಗೊಂಡ ಸ್ಥಳೀಯ ಈಜುಗಾರರು ನದಿಯಲ್ಲಿ ಹುಡುಕಲು ಆರಂಭಿಸಿದರು. ಸ್ಥಳದಲ್ಲಿದ್ದ ಮೊಬೈಲ್ ಬಗ್ಗೆ

ಬಂಟ್ವಾಳ: ರಾತ್ರೋರಾತ್ರಿ ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ Read More »

ನಾಪತ್ತೆಯಾಗಿದ್ದ ನಟಿಯ ಹೆಣ ಗೋಣಿಚೀಲದಲ್ಲಿ ಪತ್ತೆ

ಸಮಗ್ರ ನ್ಯೂಸ್: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ನಟಿ ರೈಮಾ ಇಸ್ಲಾಂ ಶಿಮು ಢಾಕಾದ ಹೊರವಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಶವ ಕೆರಣಿಗಂಜ್‌ನ ಹಜರತ್‌ಪುರ ಸೇತುವೆಯ ಬಳಿ ಗೋಣಿಚೀಲದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಮು ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಭಾನುವಾರ ಕಲಬಾಗನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸ್ಥಳೀಯರು ಮಾಹಿತಿ ನೀಡಿದ ನಂತರ ಕೆರಣಿಗಂಜ್ ಮಾದರಿ ಠಾಣೆಯ ಪೊಲೀಸರ ತಂಡ ಮೃತದೇಹವನ್ನು ಹೊರತೆಗೆದಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ ಸಲೀಮುಲ್ಲಾ ವೈದ್ಯಕೀಯ ಕಾಲೇಜು

ನಾಪತ್ತೆಯಾಗಿದ್ದ ನಟಿಯ ಹೆಣ ಗೋಣಿಚೀಲದಲ್ಲಿ ಪತ್ತೆ Read More »

ಬೆಂಗಳೂರು: ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: 2021-22ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ, ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಹಾಗೂ ಪೂರ್ವ ಸಿದ್ಧತಾ ಪರೀಕ್ಷೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು, 2021-22ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ಮತ್ತು ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ, ಸಿದ್ಧತಾ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ವೇಳಾಪಟ್ಟಿಗಳನ್ನು

ಬೆಂಗಳೂರು: ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ Read More »

ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜಿಗೆ ಮೈಕ್ ಸೆಟ್ ಕೊಡುಗೆ

ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜು ಹಳೆವಿದ್ಯಾರ್ಥಿ ಸಂಘದಿಂದ ಕಾಲೇಜಿಗೆ 65 ಸಾವಿರ ಮೌಲ್ಯದ ಮೈಕ್ ಸೆಟ್ ನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ ವೆಂಕಪ್ಪ ಗೌಡ ಕಾಲೇಜು ಪ್ರಾಂಶುಪಾಲರಾದ ಗೋವಿಂದ ಎಸ್ ಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಪಿ ಜಿ ಎಸ್ ಏನ್ ಪ್ರಸಾದ್ , ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ವಿಮಲಾರಂಗಯ್ಯ , ದುಗ್ಗಪ್ಪ ಗೌಡ ನಾರಾಯಣ ಅಗ್ರಹಾರ , ಶ್ರೀಲತಾ ಮತ್ತಿತರರು ಉಪಸ್ಥಿತರಿದ್ದರು

ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜಿಗೆ ಮೈಕ್ ಸೆಟ್ ಕೊಡುಗೆ Read More »