January 2022

ಮತ್ತೊಂದು ಯಶಸ್ವಿ ಪ್ರಯೋಗ| ಮನುಷ್ಯನಿಗೆ ಹಂದಿ ಮೂತ್ರ ಪಿಂಡಗಳ ಕಸಿ ಮಾಡಿದ ವೈದ್ಯರು

ವಾಶಿಂಗ್ಟನ್: ಅಮೇರಿಕನ್ ವೈದ್ಯರು ಮತ್ತೊಂದು ಅದ್ಭುತ ಸಾಧನೆಯೊಂದನ್ನು ಮಾಡಿದ್ದಾರೆ. ಇತಿಹಾಸ ಸೃಷ್ಟಿಸಿರುವ ಅಲ್ಲಿನ ವೈದ್ಯರು ಈ ಬಾರಿ ಆನುವಂಶಿಕವಾಗಿ ಮಾರ್ಪಡಿಸಿದ ಹಂದಿಯ ಎರಡೂ ಮೂತ್ರಪಿಂಡಗಳನ್ನು ಮೆದುಳು ಸತ್ತ ವ್ಯಕ್ತಿಯ ದೇಹಕ್ಕೆ ಕಸಿ ಮಾಡಿದ್ದಾರೆ. ಮಾಹಿತಿಯ ಪ್ರಕಾರ, 57 ವರ್ಷದ ಜಿಮ್ ಪಾರ್ಸನ್ಸ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಸ್ತೆ ಅಪಘಾತದಲ್ಲಿ ಗಾಯಾಳುವಾಗಿದ್ದು, ಅವರ ಮೆದುಳು ಡೆಡ್ ಆಗಿದೆ ಎಂದು ಘೋಷಿಸಲಾಗಿತ್ತು. ಇದರ ನಂತರ, ಪಾರ್ಸನ್ಸ್ ಕುಟುಂಬದ ಒಪ್ಪಿಗೆಯೊಂದಿಗೆ ರೋಗಿಗೆ ತಳೀಯವಾಗಿ ಮಾರ್ಪಡಿಸಿದ ಹಂದಿಯ ಎರಡೂ ಮೂತ್ರಪಿಂಡಗಳನ್ನು ಕಸಿ ಮಾಡಲಾಗಿದೆ. […]

ಮತ್ತೊಂದು ಯಶಸ್ವಿ ಪ್ರಯೋಗ| ಮನುಷ್ಯನಿಗೆ ಹಂದಿ ಮೂತ್ರ ಪಿಂಡಗಳ ಕಸಿ ಮಾಡಿದ ವೈದ್ಯರು Read More »

ಬಿಜೆಪಿಯಿಂದ ಟಿಕೆಟ್ ನಿರಾಕರಣೆ| ಸ್ವತಂತ್ರ ಅಭ್ಯರ್ಥಿಯಾಗಿ ಉತ್ಪಲ್ ಪರಿಕ್ಕರ್ ಸ್ಪರ್ಧೆ| ಬಿಜೆಪಿ ಗೋವಾದಲ್ಲೂ ತಲೆನೋವು

ಪಣಜಿ: ಯುಪಿ ಜೊತೆಗೆ ಇದೀಗ ಗೋವಾದಲ್ಲೂ ಚುನಾವಣಾ ಪ್ರಚಾರ ಜೋರಾಗಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಬಿಜೆಪಿ ಶಾಸಕರ ರಾಜೀನಾಮೆ ಸಮಸ್ಯೆ ಮಾತ್ರವಲ್ಲ, ಹೊಸ ಆತಂಕಕ್ಕೂ ಕಾರಣವಾಗಿದೆ. ಮಾಜಿ ರಕ್ಷಣಾ ಸಚಿವ ಮತ್ತು ಮಾಜಿ ಗೋವಾ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಅವರ ಮಗ ಬಂಡಾಯ ನಡೆ ತೋರಿಸಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಾಗಿದ್ದಾರೆ. ಕಳೆದ 25 ವರ್ಷಗಳಿಂದಲೂ ಮನೋಹರ್ ಪರಿಕ್ಕರ್ ಪ್ರತಿನಿಧಿಸುತ್ತಿದ್ದ ಪಣಜಿ ವಿಧಾನಸಭಾ ಕ್ಷೇತ್ರದಿಂದ ಉತ್ಪಲ್ ಬದಲಿಗೆ ಪಟ್ನೇಕರ್ ಅವರಿಗೆ ಟಿಕೆಟ್ ನೀಡಿ

ಬಿಜೆಪಿಯಿಂದ ಟಿಕೆಟ್ ನಿರಾಕರಣೆ| ಸ್ವತಂತ್ರ ಅಭ್ಯರ್ಥಿಯಾಗಿ ಉತ್ಪಲ್ ಪರಿಕ್ಕರ್ ಸ್ಪರ್ಧೆ| ಬಿಜೆಪಿ ಗೋವಾದಲ್ಲೂ ತಲೆನೋವು Read More »

ಸುಳ್ಯ: ಬೆಳ್ಳಾರೆ ಮೂಲದ ಮಹಿಳೆ ಮಂಗಳೂರಿನಲ್ಲಿ ನಾಪತ್ತೆ

ಸುಳ್ಯ: ಮಂಗಳೂರಿನಲ್ಲಿ ಬ್ಯಾಂಕ್ ವ್ಯವಹಾರಕ್ಕೆಂದು ತೆರಳಿದ್ದ ಬೆಳ್ಳಾರೆಯ ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ಇಂದು ವರದಿಯಾಗಿದೆ. ನಾಪತ್ತೆಯಾದ ಮಹಿಳೆ ದಿವ್ಯ (29) ಎಂದು ತಿಳಿದು ಬಂದಿದೆ. ಶುಕ್ರವಾರ ಮಧ್ಯಾಹ್ನ ಮಂಗಳೂರಿನ ಉರ್ವಸ್ಟೋರ್ ನಲ್ಲಿ ಬ್ಯಾಂಕಿಗೆ ಹೋಗಿಬರುವುದಾಗಿ ತೆರಳಿರುವ ಅವರು ನಂತರ ಫೋನ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆಯನ್ನು ಎಲ್ಲಾದರೂ ಕಂಡಲ್ಲಿ ತಿಳಿಸುವಂತೆ ಮಹಿಳೆಯ ಪತಿ ಸಾಮಾಜಿಕ ಜಾಲತಾಣದಲ್ಲಿ ವಿನಂತಿಸಿಕೊಂಡಿದ್ದಾರೆ. ಬೆಳ್ಳಾರೆ ಕಲ್ಮಡ್ಕದ ಮನೆಯಿಂದ ಬೆಳಗ್ಗೆ ಮಂಗಳೂರಿಗೆ ಬಂದಿದ್ದೆವು. ನಂತರ ಬ್ಯಾಂಕಿಗೆ ಹೋಗಿ ಬರುವುದಾಗಿ

ಸುಳ್ಯ: ಬೆಳ್ಳಾರೆ ಮೂಲದ ಮಹಿಳೆ ಮಂಗಳೂರಿನಲ್ಲಿ ನಾಪತ್ತೆ Read More »

ಕ್ಲಬ್ ಹೌಸ್ ನಲ್ಲಿ ಮುಸ್ಲಿಂ ಮಹಿಳೆಯರ ಕುರಿತು ಅಶ್ಲೀಲ ಮಾತು | ಮೂವರನ್ನು ಬಂಧಿಸಿದ ಪೊಲೀಸರು

ಹರಿಯಾಣ : ಕ್ಲಬ್ ಹೌಸ್ ನಲ್ಲಿ ಮುಸ್ಲಿಂ ಮಹಿಳೆಯ ಕುರಿತು ಅಶ್ಲೀಲ, ದ್ವೇಷದ ಮಾತುಗಳನ್ನಾಡಿದ ಆರೋಪದ ಮೇಲೆ ಹರಿಯಾಣ ಮೂಲದ ಮೂವರನ್ನು ಮುಂಬೈ ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಆಕಾಶ್, ಜೇಶ್ಣವ್ ಮತ್ತು ಯಶ್ ಪರಶಾರ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಒಪ್ಪಿಸುವುದ್ದಾಗಿ ತಿಳಿಸಿದ್ದಾರೆ. ಕ್ಲಬ್ ಹೌಸ್ ಚರ್ಚೆ ಬೇಧಿಸಿ ದ್ವೇ‍ಷ ಹರಡುತ್ತಿದ್ದವರನ್ನು ಬಂಧಿಸಿದ್ದಕ್ಕಾಗಿ ಮುಂಬೈ ಪೊಲೀಸರನ್ನು ಹಲವರು ಶ್ಲಾಘಿಸಿದ್ದಾರೆ. ಈ ಕುರಿತು ಇಂದು ಮುಂಜಾನೆ ಶಿವಸೇನೆಯ ರಾಜಸಭಾ ಸದ್ಯಸರಾದ ಪ್ರಿಯಾಂಕ ಚತುರ್ವೆದಿ ಅವರು

ಕ್ಲಬ್ ಹೌಸ್ ನಲ್ಲಿ ಮುಸ್ಲಿಂ ಮಹಿಳೆಯರ ಕುರಿತು ಅಶ್ಲೀಲ ಮಾತು | ಮೂವರನ್ನು ಬಂಧಿಸಿದ ಪೊಲೀಸರು Read More »

ರಾಜ್ಯದ ಜನತೆಗೆ ಮತ್ತೆ ಶಾಕ್ ಟ್ರೀಟ್ ಮೆಂಟ್ ನೀಡಲು ರೆಡಿಯಾದ ಸರ್ಕಾರ| ಬೆಲೆ ಏರಿಕೆ ಅನಿವಾರ್ಯ ಎಂದ ಸಚಿವ ಸುನಿಲ್‌ಕುಮಾರ್

ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಇಂಧನ ಸಚಿವ ಸುನಿಲ್ ಕುಮಾರ್ ಬಿಗ್ ಶಾಕ್ ನೀಡಿದ್ದು, ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಅನಿವಾರ್ಯ, ನಾವು ಕೆಲವೊಂದು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. ಬೇರೆ ಬೇರೆ ಇಲಾಖೆಗಳಿಂದ 12 ಸಾವಿರ ಕೋಟಿ ರೂ. ಬರಬೇಕು. ಗ್ರಾಮೀಣಾಭಿವೃದ್ಧಿ ಇಲಾಖೆ, ನೀರಾವರಿ ಇಲಾಖೆ ಸೇರಿ ಹಲವು ಇಲಾಖೆಗಳಿಂದ ಹಣ ಬಾಕಿ ಇದೆ. ಹೀಗಾಗಿ ವಿದ್ಯುತ್ ದರ ಏರಿಕೆ ಮಾಡಲಾಗುವುದು

ರಾಜ್ಯದ ಜನತೆಗೆ ಮತ್ತೆ ಶಾಕ್ ಟ್ರೀಟ್ ಮೆಂಟ್ ನೀಡಲು ರೆಡಿಯಾದ ಸರ್ಕಾರ| ಬೆಲೆ ಏರಿಕೆ ಅನಿವಾರ್ಯ ಎಂದ ಸಚಿವ ಸುನಿಲ್‌ಕುಮಾರ್ Read More »

ಸುಳ್ಯ: ಪಾದಾಚಾರಿಗೆ ಡಿಕ್ಕಿ ಹೊಡೆದ ಪಿಕಪ್, ವ್ಯಕ್ತಿ ಸಾವು

ಸುಳ್ಯ: ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಪಿಕಪ್ ಡಿಕ್ಕಿಯಾದ ಪರಿಣಾಮ ಗಂಭಿರ ಗಾಯಗೊಂಡು ವ್ಯಕ್ತಿ ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತಪಟ್ಟವರನ್ನು ಪೈಚಾರಿನ ನವೀನ್ ಕುಮಾರ್ (60) ಎಂದು ಗುರುತಿಸಲಾಗಿದೆ. ಇವರು ಅಡ್ಕಾರಿನಲ್ಲಿ ರೇಷನ್ ಪಡೆಯಲು ತೆರಳಿದ್ದು ಬಸ್ ನಿಂದ ಇಳಿದು ರಸ್ತೆ ದಾಟುತ್ತಿದ್ದ ವೇಳೆ ರಸ್ತೆಯಲ್ಲಿ ಬಂದ ಪಿಕಪ್ ಢಿಕ್ಕಿಯಾಯಿತು. ಪರಿಣಾಮ ನವೀನರು ರಸ್ತೆಗೆ ಎಸೆಯಲ್ಪಟ್ಟು ಗಂಭಿರ ಗಾಯಗೊಂಡರು. ಪಿಕಪ್ ನವರೇ ತಕ್ಷಣ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರಾದರೂ ಅದಾಗಲೇ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

ಸುಳ್ಯ: ಪಾದಾಚಾರಿಗೆ ಡಿಕ್ಕಿ ಹೊಡೆದ ಪಿಕಪ್, ವ್ಯಕ್ತಿ ಸಾವು Read More »

ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ರದ್ದು

ಬೆಂಗಳೂರು: ವಿಕೆಂಡ್ ಕರ್ಫ್ಯೂಗೆ ವ್ಯಕ್ತವಾಗಿರುವ ಜನಾಕ್ರೋಶ ಮತ್ತು ಅಪಸ್ವರದ ಕಾರಣದಿಂದಾಗಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡಲಾಗಿದೆ. ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಉನ್ನತಮಟ್ಟದ ಸಭೆಯಲ್ಲಿ, ವೀಕೆಂಡ್ ಕರ್ಫ್ಯೂ ರದ್ದತಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದೇ ವೇಳೆ, ನೈಟ್ ಕರ್ಫ್ಯೂ ಅವಧಿಯನ್ನು ಕಡಿತ ಮಾಡಲಾಗಿದೆ. ರಾತ್ರಿ 11ರಿಂದ ರಾತ್ರಿ ನೈಟ್ ಕರ್ಫ್ಯೂ ಶುರುವಾಗಿ ಬೆಳಗಿನ ಜಾವ ಐದಕ್ಕೆ ಅಂತ್ಯವಾಗಲಿದೆ. ಆದರೆ ಹೋಟೆಲ್ ರೆಸ್ಟೋರೆಂಟ್ಗಳಲ್ಲಿ ಈಗಿರುವ 50-50 ನಿಯಮಗಳನ್ನು ಮಾತ್ರ ಮುಂದುವರೆಸುವ ಸಾಧ್ಯತೆ ಇದೆ.

ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ರದ್ದು Read More »

ಜಗತ್ತಿನ ‌ಪ್ರಭಾವಿ‌ ನಾಯಕರ ಪಟ್ಟಿಯಲ್ಲಿ ಮೋದಿ‌ ಟಾಪರ್

ಡಿಜಿಟಲ್ ಡೆಸ್ಕ್: ಜಗತ್ತಿನ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ ಅಗ್ರಸ್ಥಾನ ದೊರಕಿದೆ. ಜಾಗತಿಕ ನಾಯಕರಿಗೆ ಸಂಬಂಧಿಸಿದ ‘ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್’ ಬಿಡುಗಡೆ ಮಾಡಿರುವ ರೇಟಿಂಗ್‌ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಕೆನಡಾದ ಕೌಂಟರ್‌ಪಾರ್ಟ್ ಜಸ್ಟಿನ್ ಟ್ರೂಡೋ ಅವರನ್ನು ಹಿಂದಿಕ್ಕಿ ಪ್ರಧಾನಿ ಮೋದಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಶೇ.71ರಷ್ಟು ಅನುಮೋದಿತ ಅಂಕಗಳನ್ನು ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಶೇ.66 ರಷ್ಟು ಅಂಕ ಗಳಿಸಿದ ಮೆಕ್ಸಿಕೋದ ಆಂಟ್ರೆಸ್ ಮ್ಯಾನುಯೆಲ್ ಲೊಪೆಜ್ ಒಬ್ರಡಾರ್ ಇದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಪ್ರತಿ

ಜಗತ್ತಿನ ‌ಪ್ರಭಾವಿ‌ ನಾಯಕರ ಪಟ್ಟಿಯಲ್ಲಿ ಮೋದಿ‌ ಟಾಪರ್ Read More »

ಕಡಬ:ಗ್ರಾಮೀಣ ಯುವತಿಯ ಸಾಧನೆ| ಪಿಎಸ್ಸೈ ಪರೀಕ್ಷೆಯಲ್ಲಿ 39ನೇ ರ್ಯಾಂಕ್ ಪಡೆದ ಬದ್ರುನ್ನಿಶಾ

ಕಡಬ: ಗ್ರಾಮೀಣ ಭಾಗದ ಯುವತಿಯೋರ್ವಳು ರಾಜ್ಯ ಪೊಲೀಸ್ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆದು 39ನೇ ರ‍್ಯಾಂಕ್ ನಲ್ಲಿ ಆಯ್ಕೆಯಾಗಿದ್ದಾರೆ. ಕುಂತೂರು ಸಮೀಪದ ಕೋಚಕಟ್ಟೆ ನಿವಾಸಿ ಎ.ಕೆ. ಇಸ್ಮಾಯಿಲ್ ಹಾಗೂ ಝುಬೈದಾ ಹೆಂತಾರು ದಂಪತಿಯ ನಾಲ್ವರು ಪುತ್ರಿಯರ ಪೈಕಿ ಕೊನೆಯವಳಾದ ಬದ್ರುನ್ನಿಶಾ ಇದೀಗ ಪಿಎಸ್‌ಐ ಆಗಿ ಆಯ್ಕೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಕಲಿತು ಯಶಸ್ವಿಯಾಗಿದ್ದಾರೆ. ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುಂತೂರಿನಲ್ಲಿ ಪಡೆದಿರುವ ಅವರು, ಪ್ರೌಢಶಾಲಾ ಶಿಕ್ಷಣವನ್ನು ಸಂತ ಜಾರ್ಜ್ ಪ್ರೌಢಶಾಲೆ

ಕಡಬ:ಗ್ರಾಮೀಣ ಯುವತಿಯ ಸಾಧನೆ| ಪಿಎಸ್ಸೈ ಪರೀಕ್ಷೆಯಲ್ಲಿ 39ನೇ ರ್ಯಾಂಕ್ ಪಡೆದ ಬದ್ರುನ್ನಿಶಾ Read More »

ಉಡುಪಿ: ವಾರಾಂತ್ಯ ಕರ್ಪ್ಯೂ ಗೆ ಸೆಡ್ಡು ಹೊಡೆಯಲು ನಿರ್ಧರಿಸಿದ ಉದ್ಯಮಿಗಳು

ಉಡುಪಿ: ವಾರಾಂತ್ಯ ಕರ್ಫ್ಯೂ ರದ್ದು ಮಾಡಬೇಕು ಅಥವಾ ಎಲ್ಲ ಉದ್ಯಮಗಳಿಗೂ ವಾರಾಂತ್ಯದಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬೇಕು. ಇಲ್ಲವಾದರೆ ಸರಕಾರದ ನಿಯಮ ಉಲ್ಲಂಘಿಸಿ ವಾರಾಂತ್ಯದಲ್ಲಿ ವ್ಯಾಪಾರ ವಹಿವಾಟು ನಡೆಸಲು ಕೆನರಾ ಉದ್ಯಮಿಗಳ ಒಕ್ಕೂಟ ನಿರ್ಧರಿಸಿದೆ. ಉಡುಪಿ ಮತ್ತು ದಕ್ಷಿಣ ಜಿಲ್ಲೆಗಳ ಒಟ್ಟು 40 ವರ್ತಕರ ಸಂಘಟನೆಗಳನ್ನೊಳಗೊಂಡ ಕೆನರಾ ಉದ್ಯಮಿಗಳ ಒಕ್ಕೂಟದ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಸಭೆ ನಡೆಸಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಒಕ್ಕೂಟದ ಅಧ್ಯಕ್ಷ ಸಂತೋಷ್‌ ಕಾಮತ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ವ್ಯಾಪಾರಿ ವರ್ಗ ಲಾಕ್‌ಡೌನ್‌ನಿಂದ

ಉಡುಪಿ: ವಾರಾಂತ್ಯ ಕರ್ಪ್ಯೂ ಗೆ ಸೆಡ್ಡು ಹೊಡೆಯಲು ನಿರ್ಧರಿಸಿದ ಉದ್ಯಮಿಗಳು Read More »