January 2022

ದೆಹಲಿಯ ರಾಜಪಥದಲ್ಲಿ ರಾರಾಜಿಸಲಿದೆ ಕರಾವಳಿಯ ಕಂಗೀಲು ನೃತ್ಯ

‘ಉಡುಪಿ ಬೀಟ್ಸ್’ ಲಾಂಚನದಡಿಯಲ್ಲಿ ಭಾಗವಹಿಸಲಿರುವ ವಿದ್ಯಾರ್ಥಿಗಳು ಉಡುಪಿ: ಜ. 26 ರಂದು ದೇಶದ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಶೋತ್ಸವದ ಸಾಂಸ್ಕೃತಿಕ ಕಾರ್ಯಮದಲ್ಲಿ ಕರಾವಳಿಯ ಕಂಗೀಲು ನೃತ್ಯ ಪ್ರದರ್ಶನಗೊಳ್ಳಲಿದೆ. ಉಡುಪಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಎಂ ಜಿ ಎಂ ಕಾಲೇಜು ಹಾಗೂ ಪೂರ್ಣಪ್ರಜ್ಞ ಕಾಲೇಜಿನ 9 ವಿದ್ಯಾರ್ಥಿನಿಯರು ಮತ್ತು _5 ಮಂದಿ ವಿದ್ಯಾರ್ಥಿಗಳನ್ನೊಳಗೊಂಡ ತಂಡವು ಗಣರಾಜ್ಶೋತ್ಸವದ ಪಥಸಂಚಲನದ ಸಂದರ್ಭದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಂಗೀಲು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಈ ವಿದ್ಶಾರ್ಥಿಗಳು ‘ಉಡುಪಿ ಬೀಟ್ಸ್’ ಎಂಬ ಲಾಂಚನದಡಿಯಲ್ಲಿ ಭಾಗವಹಿಸುತ್ತಿದ್ದು, ತುಳುನಾಡಿನ […]

ದೆಹಲಿಯ ರಾಜಪಥದಲ್ಲಿ ರಾರಾಜಿಸಲಿದೆ ಕರಾವಳಿಯ ಕಂಗೀಲು ನೃತ್ಯ Read More »

ಪಾಣೆಮಂಗಳೂರು: ಕಲ್ಲುರ್ಟಿ ದೇವಸ್ಥಾನದ ಸಮೀಪ ಅಪರಿಚಿತ ಶವ ಪತ್ತೆ

ಬಂಟ್ವಾಳ: ಅಪರಿಚಿತ ವ್ಯಕ್ತಿಯೋರ್ವನ ಮೃತದೇಹ ಪಾಣೆಮಂಗಳೂರು ಕಲ್ಲುರ್ಟಿ ದೇವಸ್ಥಾನದ ಸಮೀಪದಲ್ಲಿ ಪತ್ತೆಯಾಗಿದೆ. ಪಾಣೆಮಂಗಳೂರು ಕಲ್ಲುರ್ಟಿ ದೇವಸ್ಥಾನದ ಸಮೀಪ ಬೊರಲಾಗಿ ಮಲಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಕಾಣಸಿಕ್ಕಿದ್ದು, ಸ್ಥಳೀಯರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸುಮಾರು 65 ರಿಂದ 70 ವರ್ಷ ಪ್ರಾಯದ ವ್ಯಕ್ತಿ ಮೃತಪಟ್ಟಿದ್ದು, ಇವರ ಗುರುತು ಪತ್ತೆಯಾಗಬೇಕಿದೆ. ಹೃದಯಾಘಾತದಿಂದ ನಿಧನರಾಗಿರಬಹುದು ಎಂಬ ಶಂಕೆಯನ್ನು ಪೋಲೀಸರು ನೀಡಿದ್ದಾರೆ. ಮಾಹಿತಿ ಲಭ್ಯ ವಾಗದ ಹಿನ್ನಲೆ ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಇನ್ನು ಮೃತಪಟ್ಟ

ಪಾಣೆಮಂಗಳೂರು: ಕಲ್ಲುರ್ಟಿ ದೇವಸ್ಥಾನದ ಸಮೀಪ ಅಪರಿಚಿತ ಶವ ಪತ್ತೆ Read More »

ದೇಶದಲ್ಲಿ 48% ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರುದ್ಯೋಗಿಗಳು: NITI

ನವದೆಹಲಿ : ದೇಶದಲ್ಲಿ ಶೇ. 45ರಷ್ಟು ಮ್ಯಾನೇಜ್‌ಮೆಂಟ್ ಮತ್ತು ಶೇ.48ರಷ್ಟು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ ಎಂದು NITI ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ. ಗುರುವಾರ, ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಆಯೋಜಿಸಿದ್ದ ‘ಉನ್ನತ ಶಿಕ್ಷಣ ಸಂವಾದ’ವನ್ನು ಉದ್ದೇಶಿಸಿ ಮಾತನಾಡಿದ ಡಾ.ಕುಮಾರ್, ಉನ್ನತ ಶಿಕ್ಷಣದಲ್ಲಿ ನಿರ್ದಿಷ್ಟವಾಗಿ ಮ್ಯಾನೇಜ್‌ಮೆಂಟ್ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಸಾಧಿಸಲು ಒತ್ತು ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ಉನ್ನತ ಶಿಕ್ಷಣದಲ್ಲಿ ಶಕ್ತಿ ಕಡಿಮೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ದೇಶದಲ್ಲಿ ಉನ್ನತ ಶಿಕ್ಷಣ

ದೇಶದಲ್ಲಿ 48% ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರುದ್ಯೋಗಿಗಳು: NITI Read More »

ಸುಳ್ಯ : ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋದ ಆರೋಪ|ಬಜರಂಗಿಗಳ ನಡುವೆ ಮಾರಾಮಾರಿ

ಸುಳ್ಯ: ಬಾಲಕಿಯೊಬ್ಬಳನ್ನು ಕಾರಿನಲ್ಲಿ ಕರೆದುಕೊಂಡು ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಬಜರಂಗದಳದ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿರುವ ಘಟನೆ ನಗರದ ಪೈಚಾರು ಬಳಿ ನಡೆದಿದೆ. ಘಟನೆಗೆ ಸಂಬಂಧಿಸಿ ರಕ್ಷಿತ್ ಎಂಬ ಯುವಕನ ಮೇಲೆ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ ಎಂದು ವರದಿಯಾಗಿದೆ. ಯುವಕನೊಬ್ಬ ಶಾಲಾ ಬಾಲಕಿಯೊಬ್ಬಳನ್ನು ಪುತ್ತೂರಿನಿಂದ ಆಕೆಯ ಮನೆಗೆ ಬಿಡಲೆಂದು ಕಾರಲ್ಲಿ ಕರೆದುಕೊಂಡು ಹೋಗಿದ್ದನು. ಇದನ್ನು ಆರೋಪಿಸಿ ಯುವಕನಿಗೆ ಹಲ್ಲೆ ನಡೆಸಿದರೆಂದೂ ಹೇಳಲಾಗಿದೆ. ಇದಾದ ಬಳಿಕ ಎರಡೂ ಕಡೆಯವರು ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದಾರೆ. ಎರಡೂ

ಸುಳ್ಯ : ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋದ ಆರೋಪ|ಬಜರಂಗಿಗಳ ನಡುವೆ ಮಾರಾಮಾರಿ Read More »

ಗರಿಗೆದರಿದ ಸಂಪುಟ ವಿಸ್ತರಣೆ| ಅರ್ಹತೆಯ ಪ್ರಶ್ನೆ ಮಾಡಿದ ರೇಣುಕಾಚಾರ್ಯ

ದಾವಣಗೆರೆ: ರಾಜ್ಯದಲ್ಲಿ ಸಚಿವ ಸ್ಥಾನಕ್ಕಾಗಿ ಸಂಪುಟ ವಿಸ್ತರಣೆ ಗರಿಗೆದರಿದೆ. ಇದರ ಬೆನ್ನಲ್ಲೇ ಸಚಿವಸ್ಥಾನದ ಆಕಾಂಕ್ಷಿಗಳು ತೆರೆ ಮರೆಯಲ್ಲಿ ಕೆಲವರು ಕಸರತ್ತು ನಡೆಸುತ್ತಿದ್ದರೆ, ಮತ್ತೆ ಕೆಲವರು ನೇರವಾಗಿಯೇ ಸಿಡಿದೆದ್ದಿದ್ದಾರೆ. ನನಗೇನು ಸಚಿವನಾಗೋ ಅರ್ಹತೆ ಇಲ್ಲವೇ.? ಎಂಬುದಾಗಿ ಸಚಿವ ಸ್ಥಾನಕ್ಕಾಗಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಿಡಿದೆದ್ದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಸರ್ಕಾರ ಅಸ್ಥತ್ವಕ್ಕೆ ಬರಲು ನಾನು ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಪ್ರಯತ್ನಿಸಿದ್ದೇವೆ. ಮೈತ್ರಿ ಸರ್ಕಾರದ ಪತನದ ಹಿಂದೆ ನಮ್ಮ ಪ್ರಯತ್ನ ಕೂಡ ಇದೆ ಎಂದಿದ್ದಾರೆ.

ಗರಿಗೆದರಿದ ಸಂಪುಟ ವಿಸ್ತರಣೆ| ಅರ್ಹತೆಯ ಪ್ರಶ್ನೆ ಮಾಡಿದ ರೇಣುಕಾಚಾರ್ಯ Read More »

ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಫ್ರಿಕಾ| ಭಾರತಕ್ಕೆ ಹೀನಾಯ ಸೋಲು

ಕೇಪ್ ಟೌನ್: ಏಕದಿನ ಪಂದ್ಯದಲ್ಲಿ ಸೋಲು ಕಂಡ ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ಅತ್ಯಂತ ನಿರಾಶಾದಾಯಕ ರೀತಿಯಲ್ಲಿ ಅಂತ್ಯಗೊಂಡಿದೆ. ಟೆಸ್ಟ್ ಸರಣಿ ಸೋತಿದ್ದ ಟೀಂ ಇಂಡಿಯಾ ಏಕದಿನ ಸರಣಿಯನ್ನೂ ಕಳೆದುಕೊಂಡಿದೆ. ಏಕದಿನ ಸರಣಿಯಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ದಕ್ಷಿಣ ಆಫ್ರಿಕಾ ಭಾರತವನ್ನು 3-0 ಯಿಂದ ಕ್ಲೀನ್ ಸ್ವೀಪ್ ಮಾಡಿತು. ಈ ಸೋಲು ಟೀಮ್ ಇಂಡಿಯಾಕ್ಕೆ ದೊಡ್ಡ ಹಿನ್ನಡೆಯಾಗಿದೆ. ಏಕೆಂದರೆ ಟೀಂ ಇಂಡಿಯಾ ಅತ್ಯಂತ ಬಲಿಷ್ಠ ಮತ್ತು ಅನುಭವಿ ಆಟಗಾರರನ್ನು ಹೊಂದಿದೆ. ಇದರ ಹೊರತಾಗಿಯೂ,

ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಫ್ರಿಕಾ| ಭಾರತಕ್ಕೆ ಹೀನಾಯ ಸೋಲು Read More »

ಶೈಕ್ಷಣಿಕ ಸಂಸ್ಥೆಗಳು ಧರ್ಮಾಚರಣೆಗಳ ಕೇಂದ್ರವಲ್ಲ| ಹಿಜಾಬ್ ಕುರಿತು ಶಿಕ್ಷಣ ಸಚಿವರ ಪ್ರತಿಕ್ರಿಯೆ|

ಬೆಂಗಳೂರು: ಉಡುಪಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜೊಂದರಲ್ಲಿ ಉದ್ಭವಿಸಿರುವ ‘ಹಿಜಾಬ್‌’ (ಶಿರವಸ್ತ್ರ) ವಿವಾದ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೂ ಸಮವಸ್ತ್ರ ಪರಿಚಯಿಸಬಹುದಾ? ಎಂಬ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾವನೆ ಇಡಲು ಇಲಾಖೆ ಮುಂದಾಗಿದೆ. ಕೆಲವು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಈ ಕುರಿತು ಬೇಡಿಕೆ ಇಟ್ಟು ಮೂರು ವಾರಗಳಿಂದ ತರಗತಿಯಿಂದ ಹೊರಗೆ ಉಳಿದಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಈ ಕುರಿತು

ಶೈಕ್ಷಣಿಕ ಸಂಸ್ಥೆಗಳು ಧರ್ಮಾಚರಣೆಗಳ ಕೇಂದ್ರವಲ್ಲ| ಹಿಜಾಬ್ ಕುರಿತು ಶಿಕ್ಷಣ ಸಚಿವರ ಪ್ರತಿಕ್ರಿಯೆ| Read More »

ಶೃಂಗೇರಿ ಮಠದಲ್ಲಿ ಬೃಹದಾಕಾರದ ಕಾಳಿಂಗ ಸರ್ಪ

ಚಿಕ್ಕಮಗಳೂರು: ಶೃಂಗೇರಿ ಮಠದ ಆವರಣದಲ್ಲಿ ಕಾಣಿಸಿಕೊಂಡ ಸುಮಾರು 10 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವೊಂದನ್ನು ಸೆರೆಹಿಡಿಯಲಾಗಿದೆ. ಶೃಂಗೇರಿಯ ಪಟ್ಟಣದಲ್ಲಿರುವ ಶಾರದಾಂಬೆ ದೇವಾಲಯದ ಆವರಣದಲ್ಲಿ ಕಾಳಿಂಗ ಸರ್ಪವನ್ನು ಕಂಡು ಭಕ್ತರು ಕಂಗಾಲಾಗಿದ್ದರು. ಈವೇಳೆ ಸ್ಥಳಕ್ಕೆ ಉರಗ ಪ್ರೇಮಿ ಸ್ನೇಕ್ ಅರ್ಜುನ ಭೇಟಿ ನೀಡಿ ಕಾಳಿಂಗ ಸರ್ಪವನ್ನು ಸೆರೆಹಿಡಿದು ಕೆರೆಕಟ್ಟೆ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ಶೃಂಗೇರಿ ಮಠದಲ್ಲಿ ಬೃಹದಾಕಾರದ ಕಾಳಿಂಗ ಸರ್ಪ Read More »

ಈ ವರ್ಷ ಕೊರೊನಾ ಪಾಸ್ ಇಲ್ಲ| ಹತ್ತನೇ ತರಗತಿ ಪರೀಕ್ಷೆ ನಡೆಯುತ್ತೆ- ಸಚಿವ ನಾಗೇಶ್

ಬೆಂಗಳೂರು : ರಾಜ್ಯದಲ್ಲಿ ಎಸ್‌ಎಸ್‌ಎಲ್ ಸಿ ಪರೀಕ್ಷೆ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಹತ್ವದ ಮಾಹಿತಿ ನೀಡಿದ್ದು, ಕಳೆದ ವರ್ಷದಂತೆ ಈ ವರ್ಷ ಕೊರೋನಾ ಪಾಸ್ ಇರುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಹಿನ್ನೆಲೆಯಲ್ಲಿ 2020-21 ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. ವಿದ್ಯಾರ್ಥಿಗಳು ಮತ್ತು ಶಾಲೆಗಳು ತೀವ್ರವಾದ ಕೋವಿಡ್-ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಕಳೆದ ವರ್ಷ ಸಮಸ್ಯೆ ವಿಭಿನ್ನವಾಗಿತ್ತು ಎಂದು ಹೇಳಿದ್ದಾರೆ.

ಈ ವರ್ಷ ಕೊರೊನಾ ಪಾಸ್ ಇಲ್ಲ| ಹತ್ತನೇ ತರಗತಿ ಪರೀಕ್ಷೆ ನಡೆಯುತ್ತೆ- ಸಚಿವ ನಾಗೇಶ್ Read More »

ಸಾಗರ: ಹೃದಯಾಘಾತದಿಂದ ಐದರ ಬಾಲೆ ಸಾವು

ಸಾಗರ: ನಗರದ ಅಣಲೆಕೊಪ್ಪದಲ್ಲಿ ಆಯತಪ್ಪಿ ಬಿದ್ದ ಮಗು, ಆಘಾತಗೊಂಡು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ಕ್ರಿಶಾ (5) ಮೃತಪಟ್ಟ ಮಗು. ಈಕೆ ಸಂಜೆ ಆಟವಾಡಿಕೊಂಡಿದ್ದಾಗ ಆಯತಪ್ಪಿ ಬಿದ್ದಿದ್ದಾಳೆ. ಕೂಡಲೇ ಮಗುವನ್ನು ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆ ವೇಳೆಗೆ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.

ಸಾಗರ: ಹೃದಯಾಘಾತದಿಂದ ಐದರ ಬಾಲೆ ಸಾವು Read More »