Ad Widget .

ಬೆಂಗಳೂರಿನಲ್ಲಿ ಕಡಬದ ಯುವಕನ ದಾರುಣ ಸಾವು| ಅಪಘಾತದಲ್ಲಿ ರಸ್ತೆಗೆಸೆದವನ ಮೇಲೆ ಹರಿಯಿತು ಯಮಸ್ವರೂಪಿ ಲಾರಿ

Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್: ಅಪಘಾತಕ್ಕೀಡಾಗಿ ರಸ್ತೆಗೆಸೆಯಲ್ಪಟ್ಟಿದ್ದ ಯುವಕನ ಮೇಲೆ ಲಾರಿ ಹರಿದು ದಾರುಣವಾಗಿ ಮೃತಪಟ್ಟ ಘಟನೆ ಇಂದು(ಜ.31) ನಡೆದಿದೆ. ಮೃತಪಟ್ಟ ಯುವಕನನ್ನು ಕಡಬ ತಾಲೂಕಿನ ಆಲಂಕಾರು ಮೂಲದ ಶರವೂರಿನ ನಂದೀಪ್(21) ಎಂದು ಗುರುತಿಸಲಾಗಿದೆ. ಈತನ ಜೊತೆಗಿದ್ದ ಸಹ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.

Ad Widget . Ad Widget .

ಇವರು ಬೆಂಗಳೂರಿನ ಜಿಗಣಿಯಲ್ಲಿ ಇಂಡಸ್ಟ್ರಿಯಲ್ ಏರಿಯದ ಕಂಪೆನಿಯೊಂದರಲ್ಲಿ ಉದ್ಯೋಗ ದಲ್ಲಿದ್ದು ಬೆಳಿಗ್ಗೆ ಕೆಲಸಕ್ಕೆಂದು ಹಳೆನೇರಂಕಿಯ ನಿವಾಸಿ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದರು ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಅಟೋ ರಿಕ್ಷಾವೊಂದು ಹಠತ್ತಾಗಿ ಬಲಕ್ಕೆ ತಿರುಗಿದಾಗ ಅದಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದು ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಲಾರಿ ಯುವಕನ ತಲೆ ಮೇಲೆಯೇ ಸಂಚರಿಸಿದ ಪರಿಣಾಮ ನಂದಿಪ್ ಸ್ಥಳದಲ್ಲಿ ಯೇ ಮೃತಪಟ್ಟಿದ್ದರು.

ಸಹ ಸವಾರ ಹಳೆನೆರಂಕಿ ನಿವಾಸಿ ಯುವಕ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತ ನಂದೀಪ್ ಅವರು ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *