Ad Widget .

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿ ನಿರ್ಲಕ್ಷಿಸಿ ವಿಡಿಯೋಗೇಮ್ ಆಡುತ್ತಿದ್ದ ವೈದ್ಯ ವಿದ್ಯಾರ್ಥಿ ಅಮಾನತು

Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್: ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಯನ್ನು ನಿರ್ಲಕ್ಷಿಸಿ ವಿಡಿಯೋ ಗೇಮ್ ಆಡಿದ ಕ್ಲಿನಿಕಲ್‌ಗೆ ನಿಯೋಜನೆಗೊಂಡಿದ್ದ ಖಾಸಗಿ ಕಾಲೇಜಿನ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಯನ್ನು ಶನಿವಾರ ಅಮಾನತುಗೊಳಿಸಲಾಗಿದೆ.

Ad Widget . Ad Widget .

ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಸರ್ಜನ್ ಡಾ.ಸದಾಶಿವ, ವೈದ್ಯ ವಿದ್ಯಾರ್ಥಿಯು ಜನವರಿ 24ರಂದು ವೆನ್ಲಾಕ್ ಆಸ್ಪತ್ರೆಯ ಕ್ಯಾಶುವಾಲಿಟಿ ಬ್ಲಾಕ್‌ನಲ್ಲಿ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ವಿಡಿಯೋ ಗೇಮ್ ಆಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯ ಕುರಿತು ತನಿಖೆ ನಡೆಸಿದಾಗ ಅವರು ನಿಜವಾಗಿಯೂ ವೀಡಿಯೊಗೇಮ್ ಆಡುತ್ತಿದ್ದರು ಎಂದು ಕಂಡುಬಂದಿದೆ. ನಂತರ ಅವರನ್ನು ಕಾಲೇಜ್ ನಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ…

Leave a Comment

Your email address will not be published. Required fields are marked *