Ad Widget .

ವಿಟ್ಲ: ಮೇಯಲು ಬಿಟ್ಟಿದ್ದ ದನದ ಕಾಲನ್ನು ಕತ್ತರಿಸಿದ ದುಷ್ಕರ್ಮಿಗಳು

Ad Widget . Ad Widget .

ವಿಟ್ಲ: ಮೇಯಲು ಬಿಟ್ಟಿದ್ದ ಹಸುವಿನ ಕಾಲನ್ನು ಕತ್ತರಿಸಿ ವಿಕೃತಿ ಮೆರೆದ ಘಟನೆ ವಿಟ್ಲ ತಾಲೂಕಿನ ಅಡ್ಯನಡ್ಕ ಎಂಬಲ್ಲಿ ನಡೆದಿದೆ.

Ad Widget . Ad Widget .

ಅಡ್ಯನಡ್ಕ ಕೆದುಮೂಲೆ ನಿವಾಸಿ ಕೃಷಿಕರೊಬ್ಬರಿಗೆ ಸೇರಿದ ದನವನ್ನು ನೆಗಳಗುಳಿ ಎಂಬ ಪ್ರದೇಶದಲ್ಲಿ ಎಂದಿನಂತೆ ಮೇಯಲು ಬಿಟ್ಟಿದ್ದರು. ಆದ್ರೆ ಈ ವೇಳೆ ದುಷ್ಕರ್ಮಿಗಳು ದನದ ಕಾಲನ್ನು ಕ್ರೂರವಾಗಿ ಕತ್ತರಿಸುವ ಮೂಲಕ ರಾಕ್ಷಸಿ ಕೃತ್ಯ ಮೆರೆದಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಸದ್ಯ ದನಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಮೂಕ ಪ್ರಾಣಿಯನ್ನು ಹಿಂಸಿಸುವ ರಾಕ್ಷಸರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *