Ad Widget .

‘ಪದೇ ಪದೇ ಹೇಳುವ ಅಭ್ಯಾಸ ನನಗಿಲ್ಲ, ಕಾಲಮಿತಿಯೊಳಗೆ ಕೆಲಸ ಮಾಡಿ’ – ಅಧಿಕಾರಿಗಳಿಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ತಾಕೀತು

Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್: ‘ಒಂದು ಕೆಲಸವನ್ನು ಮಾಡುವಂತೆ ಅಥವಾ ಆದೇಶವನ್ನು ಪಾಲಿಸುವಂತೆ ಒಂದು ಬಾರಿ ಮಾತ್ರ ಹೇಳುವ ಸ್ವಭಾವ ನನ್ನದು. ಅದೇ ಕೆಲಸವನ್ನು ಮಾಡುವಂತೆ ಅಥವಾ ಆದೇಶವನ್ನು ಪಾಲಿಸುವಂತೆ ಎರಡನೇ ಬಾರಿ ನೆನಪಿಸುವ ಅಭ್ಯಾಸ ನನಗಿಲ್ಲ. ಹಾಗಾಗಿ ಅಧಿಕಾರಿ, ಸಿಬ್ಬಂದಿಗಳೆಲ್ಲರೂ ಕಾಲಮಿತಿಯೊಳಗೆ ಕೆಲಸ ಮಾಡಬೇಕು’ ಎಂದು ದ.ಕ.ಜಿಲ್ಲಾ ನೂತನ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿದರು.

Ad Widget . Ad Widget .

ಅವರು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಡಳಿತದಲ್ಲಿ ಚುರುಕುತನ ಇರಬೇಕು. ನೋಡೋಣ, ಮಾಡೋಣ ಎಂದರೆ ಆಗದು. ನಿರ್ಲಕ್ಷ್ಯ ತಾಳಿದರೆ ಅಥವಾ ಪಾಲಿಸಿಗಳು ಕಡತಗಳನ್ನು ತಳ್ಳಿ ಹಾಕಿದರೆ ನಾನು ಎಂದಿಗೂ ಸಹಿಸುವುದಿಲ್ಲ. ಇಲಾಖೆಗಳು ಹಾಗೂ ಅಧಿಕಾರಿಗಳ ನಡುವೆ ಪರಸ್ಪರ ಸಮನ್ವಯತೆ ಹಾಗೂ ಹೊಂದಾಣಿಕೆ ಇರಬೇಕು. ಕಾಲಮಿತಿ ಹಾಗೂ ಸ್ಪಷ್ಟತೆಯಿಂದ ಆಯಾ ಕೆಲಸಗಳನ್ನು ಪೂರ್ಣಗೊಳಿಸಲು ಗಮನಹರಿಸಬೇಕು ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.

Leave a Comment

Your email address will not be published. Required fields are marked *