Ad Widget .

ಸಮುದ್ರ ಹಾರಿ ಸಾವನ್ನಪ್ಪಿದ ‌ಪ್ರಕರಣಕ್ಕೆ ತಿರುವು| ತ್ರಿಕೋನ ಪ್ರೇಮವೇ ಆತನ ಸಾವಿಗೆ ಕಾರಣವಾಯ್ತೇ?

Ad Widget . Ad Widget .

ಮಂಗಳೂರು: ತ್ರಿಕೋನ ಪ್ರೇಮ ಪ್ರಕರಣದಲ್ಲಿ ಕಲಹ ಉಂಟಾಗಿ ಆತ್ಮಹತ್ಯೆ ಮಾಡಲು ಮುಂದಾದ ಪ್ರೇಯಸಿಯನ್ನು ರಕ್ಷಿಸಲು ಹೋದ ಯುವಕ ತಾನೇ ಬಲಿಯಾದ ಘಟನೆ ಮಂಗಳೂರು ನಗರ ಹೊರವಲಯದ ಸೋಮೇಶ್ವರ ಬೀಚ್‍ನಲ್ಲಿ ನಡೆದಿದೆ.

Ad Widget . Ad Widget .

ಮುನ್ನೂರು ಗ್ರಾಮದ ಉಳಿಯ ನಿವಾಸಿ ಲಾಯ್ಡ್ ಡಿಸೋಜ (26) ಸಮುದ್ರಪಾಲಾದ ಯುವಕ.
ಈತ ಇಬ್ಬರು ಯುವತಿಯರನ್ನು ಪ್ರೀತಿಸುತ್ತಿದ್ದ. ಈ ಬಗ್ಗೆ ಕಲಹ ಉಂಟಾದಾಗ ಶುಕ್ರವಾರ ಸಂಜೆ ಸೋಮೇಶ್ವರ ಬೀಚ್‍ನಲ್ಲಿ ಮಾತುಕತೆ ನಡೆಸಲು ಮೂವರು ತೆರಳಿದ್ದರು. ಲಾಯ್ಡ್ ಪ್ರೇಯಸಿಯರಾದ ಅಶ್ವಿತಾ ಪೆರಾವೊ ಹಾಗೂ ಡಾಕ್ಲಿನ್ ನಡುವೆ ಮಾತುಕತೆ ವೇಳೆ ಜಗಳ ಏರ್ಪಟ್ಟಿದ್ದು, ಅಶ್ವಿತಾ ನೊಂದು ಸಮುದ್ರಕ್ಕೆ ಹಾರಿದ್ದಾರೆ.

ಆಕೆಯನ್ನು ರಕ್ಷಿಸಲು ಲಾಯ್ಡ್ ಕೂಡಾ ಸಮುದ್ರಕ್ಕೆ ಹಾರಿದ್ದ. ಈ ವೇಳೆ ಘಟನೆಯನ್ನು ಗಮನಿಸಿದ ಸ್ಥಳೀಯರು ಅವರಿಬ್ಬರನ್ನು ರಕ್ಷಿಸಲು ಮುಂದಾಗಿದ್ದಾರೆ. ಅಶ್ವಿತಾಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಲಾಯ್ಡ್ ನನ್ನು ದಡಕ್ಕೆ ತರುವಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ.

ಘಟನೆಯ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *