Ad Widget .

ಕೆಂಪೇಗೌಡರಿಗೆ ಒಲಿದ ಆನಂದ್ ಮಹೀಂದ್ರಾ| ಕುಟುಂಬಕ್ಕೆ ಸ್ವಾಗತ ಕೋರಿದ ಆನಂದ್

Ad Widget . Ad Widget .

ಸಮಗ್ರ ನ್ಯೂಸ್ ಡೆಸ್ಕ್: ತುಮಕೂರಿನ ಯುವ ರೈತ ಕೆಂಪೇಗೌಡನನ್ನು ಮಹೀಂದ್ರ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರ ಮಹೀಂದ್ರ ಕುಟುಂಬಕ್ಕೆ ಸ್ವಾಗತಿಸಿದ್ದಾರೆ.

Ad Widget . Ad Widget .

ಕೆಂಪೇಗೌಡರ ಬೇಡಿಕೆಯಂತೆ ಬೋಲೆರೋ ವಾಹನ ಅವರ ಕೈ ಸೇರಿದೆ. ಸಾಮಾಜಿಕ ತಾಲತಾಣದಲ್ಲಿ ಸಕ್ರಿಯರಾಗಿರುವ ಆನಂದ್ ಮಹೀಂದ್ರ ಶುಕ್ರವಾರ ರಾತ್ರಿ ಕೆಂಪೇಗೌಡರನ್ನು ಕುಟುಂಬಕ್ಕೆ ಬರಮಾಡಿಕೊಂಡು ಟ್ವೀಟ್ ಮಾಡಿದ್ದಾರೆ. ತುಮಕೂರಿನ ಕಾರು ಶೋ ರೂಂ ಸೇಲ್ಸ್ ಏಜೆಂಟ್‌ಗಳು ರೈತ ಕೆಂಪೇಗೌಡನಿಗೆ ಮಾಡಿದ ಅವಮಾನ ಭಾರೀ ಸುದ್ದಿಯಾಗಿತ್ತು.

ರಾಮನಪಾಳ್ಯ ಶೋ ರೂಂನಲ್ಲಿ ನಡೆದ ಘಟನೆ ಬಗ್ಗೆ ಜನವರಿ 25ರಂದು ಮಹೀಂದ್ರ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದರು. ಘಟನೆ ಕುರಿತು ಈಗಾಗಲೇ ಕಂಪನಿ ತನಿಖೆ ನಡೆಸುತ್ತಿದೆ.

ಶೋ ರೂಂಗೆ ಬೋಲೆರೋ ವಾಹನ ಖರೀದಿಗೆ ಹೋಗಿದ್ದ ರೈತ ಕೆಂಪೇಗೌಡನಿಗೆ ಅವಮಾನ ಮಾಡಲಾಗಿತ್ತು. ಬಳಿಕ ಕೆಂಪೇಗೌಡ ಒಂದೇ ಗಂಟೆಯಲ್ಲಿ 10 ಲಕ್ಷ ರೂ.ಗಳನ್ನು ತಂದು ಸಿಬ್ಬಂದಿ ಮುಂದಿಟ್ಟು ವಾಹನ ನೀಡುವಂತೆ ಪಟ್ಟು ಹಿಡಿದಿದ್ದ. ಶುಕ್ರವಾರ ಅವರಿಗೆ ವಾಹನವನ್ನು ನೀಡಲಾಗಿದೆ.

Leave a Comment

Your email address will not be published. Required fields are marked *