Ad Widget .

‘ಗಟ್ಟಿಮೇಳ’ ನಟ ರಕ್ಷಿತ್ ಮತ್ತು ಗ್ಯಾಂಗ್ ನಿಂದ ಕುಡಿದು ರಂಪಾಟ| ಪೊಲೀಸರಿಗೇ ಆವಾಜ್ ಹಾಕಿದ ಟೀಂ

ಸಮಗ್ರ ನ್ಯೂಸ್: ಕನ್ನಡ ಕಿರುತೆರೆ ಜನಪ್ರಿಯ ಗಟ್ಟಿಮೇಳ ಧಾರಾವಾಹಿ ನಟ ರಕ್ಷಿತ್ ಅಂಡ್ ಗ್ಯಾಂಗ್ ಕುಡಿದು ರಂಪಾಟ ಮಾಡಿದ್ದಾರೆ. ಮದ್ಯ ಸೇವಿಸಿ ರಕ್ಷಿತ್ ಅಂಡ್ ಗ್ಯಾಂಗ್ ಗಲಾಟೆ ಮಾಡುತ್ತಿದ್ದ ಕುರಿತು ಹೊಯ್ಸಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

ಬೆಂಗಳೂರಿನ ಹೋಟೆಲ್‌ನಲ್ಲಿ ಕುಡಿದು ಗಲಾಟೆ ಮಾಡಿದ ವಿಚಾರವಾಗಿ ‘ಗಟ್ಟಿಮೇಳ’ ಧಾರವಾಹಿ ತಂಡ‌ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೆಂಗೇರಿಯಲ್ಲಿರುವ ಜಿಂಜರ್ ಲೇಕ್‌ವ್ಯೂವ್ ಹೋಟೆಲ್​ನಲ್ಲಿ ಗಲಾಟೆ ನಡೆದಿದೆಯಂತೆ

Ad Widget . Ad Widget .

ತಡರಾತ್ರಿ 1.30 ಸುಮಾರಿಗೆ ಜಿಂಜರ್ ಲೇಕ್ ವ್ಯೂವ್ ಹೋಟೆಲ್‌ನಲ್ಲಿ ಗಲಾಟೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಸದ್ಯ ಈ ವಿಚಾರವಾಗಿ ರಕ್ಷಿತ್, ರಂಜನ್, ರವಿ ಚಂದ್ರನ್, ಅನುಷಾ, ಅಭಿಷೆಕ್, ಶರಣ್ಯ, ರಾಕೇಶ್ ಕುಮಾರ್ ಹೀಗೆ ಒಟ್ಟು ಏಳು ಮಂದಿ ವಿರುದ್ಧ ಕೇಸ್‌ ದಾಖಲಾಗಿದೆ.

ಬಳಿಕ ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರ ಜೊತೆಗೆ ರಕ್ಷಿತ್ ಊಟ ಮಾಡುವುದಕ್ಕೆ ಬಂದಿದ್ದೆವು ಲೇಟ್ ಆಯಿತು ಎಂದು ಮಾತಿನ ಚಕಮಕಿ ನಡೆಸಿದ್ದಾರೆ.

ಕುಡಿದ ಆರೋಪ ಹಿನ್ನೆಲೆ ಎಲ್ಲರಿಗೂ ಪೊಲೀಸರು ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದು, ರಕ್ಷಿತ್, ರಂಜನ್, ಸೇರಿದಂತೆ 7 ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

ನೈಟ್ ಕರ್ಫ್ಯೂ ಜಾರಿಯಲ್ಲಿದ್ದರೂ ಪಾರ್ಟಿಗೆ ಅನುಮತಿ ನೀಡಿದ್ದಕ್ಕೆ ಹೋಟೆಲ್ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇನ್ನೂ ಈ ಬಗ್ಗೆ ಪೊಲೀಸರು ಕಿರುತೆರೆ ನಟರ ವಿಚಾರಣೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *