ನವದೆಹಲಿ: 67 ವರ್ಷಗಳ ಬಳಿಕ ಮತ್ತೆ ಏರ್ ಇಂಡಿಯಾವನ್ನು ಟಾಟಾ ಸಂಸ್ಥೆ ಪಡೆದುಕೊಂದಿದೆ. ಇಂದು ವಿಮಾನ ಹೊರಡುವ ಮುನ್ನ ವಿಶೇಷ ಪ್ರಕಟನೆಯನ್ನು ಪೈಲಟ್ ಹೊರಡಿಸುವ ಮೂಲಕ ಪ್ರಯಾಣಿಕರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ಭಾರತ ಸರ್ಕಾರದ ಕೈಯಲ್ಲಿದ್ದ ಏರ್ ಇಂಡಿಯಾದ ನಿಯಂತ್ರಣವನ್ನು ನಿನ್ನೆ ಅಧಿಕೃತವಾಗಿ ಟಾಟಾ ಗ್ರೂಪ್ ಪಡೆದುಕೊಂಡಿತ್ತು. ಇಂದು ವಿಮಾನ ಹೊರಡುವ ಮುನ್ನ ಪ್ರಯಾಣಿಕರಲ್ಲಿ, ಆತ್ಮೀಯ ಅತಿಥಿಗಳೇ, ನಾನು ನಿಮ್ಮ ಕ್ಯಾಪ್ಟನ್…, ಎಲ್ಲರಿಗೂ ಇತಿಹಾಸ ಪ್ರಸಿದ್ಧ ವಿಮಾನಕ್ಕೆ ಆದರದ ಸ್ವಾಗತ. ಇದು ತುಂಬಾ ವಿಶೇಷವಾದ ಪ್ರಯಾಣ. ಇದೀಗ ಏರ್ ಇಂಡಿಯಾ ಟಾಟಾ ಗ್ರೂಪ್ ಗೆ 7 ದಶಕಗಳ ಬಳಿಕ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ನೀವೆಲ್ಲರೂ ಈ ಪ್ರಯಾಣವನ್ನು ಎಂಜಾಯ್ ಮಾಡುತ್ತೀರಿ ಅಂದುಕೊಂಡಿದ್ದೇವೆ ಥ್ಯಾಂಕ್ಯೂ ಎಂದು ಎಲ್ಲಾ ಏರ್ ಇಂಡಿಯಾ ವಿಮಾನ ಹೊರಡುವ ಮುನ್ನ ಪೈಲಟ್‍ಗಳು ಪ್ರಕಟಣೆ ಹೊರಡಿಸಿದ್ದಾರೆ.
1932 ರಲ್ಲಿ ಜೆಆರ್‌ಡಿ ಟಾಟಾ ಅವರು ಟಾಟಾ ಏರ್‌ಲೈನ್ಸ್ ಸಂಸ್ಥೆಯನ್ನು ಆರಂಭಿಸಿದರು. ನಂತರ ಅದಕ್ಕೆ 1946ರಲ್ಲಿ ಏರ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು. ಸರ್ಕಾರವು 1,953 ರಲ್ಲಿ ಏರ್‌ಲೈನ್ಸ್‌ನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಆದರೆ ಜೆಆರ್‌ಡಿ ಟಾಟಾ 1977ರವರೆಗೆ ಅದರ ಅಧ್ಯಕ್ಷರಾಗಿ ಮುಂದುವರಿದರು. ಸುಮಾರು 67 ವರ್ಷಗಳ ನಂತರ ಏರ್ ಇಂಡಿಯಾವನ್ನು ಟಾಟಾ ಸಂಸ್ಥೆ ಮತ್ತೆ ಪಡೆದುಕೊಂಡಿದೆ. ಸಾಲದ ಸುಳಿಯಲ್ಲಿದ್ದ ಏರ್ ಇಂಡಿಯಾವನ್ನು ಕೇಂದ್ರ ಸರ್ಕಾರವು ಟಾಟಾ ಸನ್ಸ್‌ಗೆ ಮಾರಾಟ ಮಾಡಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸರ್ಕಾರವು 18,000 ಕೋಟಿಗೆ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ಸ್‌ಗೆ ಮಾರಾಟ ಮಾಡಿತ್ತು. ಅದಾದ ನಂತರ ವಿಮಾನಯಾನ ಸಂಸ್ಥೆಯಲ್ಲಿನ ತನ್ನ ಶೇ.100 ಪಾಲನ್ನು ಮಾರಾಟ ಮಾಡಲು ಸರ್ಕಾರದ ಇಚ್ಛೆಯನ್ನು ದೃಢೀಕರಿಸಲು ಟಾಟಾ ಗ್ರೂಪ್ಸ್‌ಗೆ ಲೆಟರ್ ಆಫ್ ಇಂಟೆಂಟ್ (ಎನ್‍ಒಐ) ನೀಡಲಾಯಿತು. ನಂತರ ಕೇಂದ್ರವು ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು. ನಿನ್ನೆ ಅಧಿಕೃತವಾಗಿ ಟಾಟಾ ಗ್ರೂಪ್‍ಗೆ ಸರ್ಕಾರ ಏರ್ ಇಂಡಿಯಾವನ್ನು ಒಪ್ಪಿಸಿದೆ.