ಗರ್ಭಿಣಿ ಹಸುವಿಗೆ ಢಿಕ್ಕಿ ಹೊಡೆದ ಸಾರಿಗೆ ಬಸ್| ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ ಗೋಮಾತೆ

ಕಾರವಾರ: ಗರ್ಭಿಣಿ ಹಸುವಿಗೆ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕುಮಟಾ ಬಸ್ ನಿಲ್ದಾಣದಲ್ಲಿ ನಡೆದಿದೆ.

Ad Widget ... ..

ಹುನಗುಂದದಿಂದ ಪುತ್ತೂರು ಮಾರ್ಗವಾಗಿ ಚಲಿಸುತ್ತಿದ್ದ ಬಸ್​ ತಡರಾತ್ರಿ ನಿಲ್ದಾಣದಲ್ಲಿ ನಿಂತ ಆಕಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹಸು ಹಾಗೂ ಅದರ ಹೊಟ್ಟೆಯಲ್ಲಿದ್ದ ಕರು ಸ್ಥಳದಲ್ಲೇ ಮೃತಪಟ್ಟಿದೆ.

Ad Widget

ಕುಮಟಾದ ನಾಗಪ್ಪ ಬಲೀಂದ್ರ ಗೌಡ ಅವರಿಗೆ ಸೇರಿದ ಹಸು ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪಶು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುಮಟಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Leave a Comment

Your email address will not be published. Required fields are marked *