Ad Widget .

ಹಾಕಿ ದಂತಕಥೆ ಚರಂಜಿತ್‌ಸಿಂಗ್ ಇನ್ನಿಲ್ಲ

Ad Widget . Ad Widget .

ನವದೆಹಲಿ: ಭಾರತದ 1964 ರ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಹಾಕಿ ತಂಡದ ನಾಯಕ ಚರಂಜಿತ್ ಸಿಂಗ್ ಅವರು ಹೃದಯಾಘಾತದಿಂದ ಹಿಮಾಚಲ ಪ್ರದೇಶದ ಉನಾದಲ್ಲಿನ ತಮ್ಮ ಮನೆಯಲ್ಲಿ ಇಂದು ನಿಧನರಾದರು. ಅವರು ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.

Ad Widget . Ad Widget .

ಚರಂಜಿತ್ ಐದು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ಒಳಗಾದರು . ‘ಅಪ್ಪ ಐದು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ಒಳಗಾದ ನಂತರ ಅವರು ಕೋಲನ್ನು ಆಧರಿಸಿ ನಡೆಯುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿನಿಂದ ಅವರ ಆರೋಗ್ಯ ಹದಗೆಟ್ಟಿತು ಮತ್ತು ಇಂದು ಬೆಳಿಗ್ಗೆ ಅವರು ನಮ್ಮನ್ನು ತೊರೆದರು’ ಎಂದು ಮಗ ವಿ ಪಿ ಸಿಂಗ್ ಪಿಟಿಐಗೆ ತಿಳಿಸಿದರು.

1964 ರಲ್ಲಿ ಒಲಿಂಪಿಕ್ ಚಿನ್ನ ವಿಜೇತ ತಂಡದ ನಾಯಕತ್ವದ ಜೊತೆಗೆ, ಅವರು 1960 ರ ಕ್ರೀಡಾಕೂಟದಲ್ಲಿ ಬೆಳ್ಳಿ ವಿಜೇತ ತಂಡದ ಭಾಗವಾಗಿದ್ದರು. ಅವರು 1962 ರ ಏಷ್ಯನ್ ಗೇಮ್ಸ್ ಬೆಳ್ಳಿ ವಿಜೇತ ತಂಡದ ಭಾಗವಾಗಿದ್ದರು.’ನನ್ನ ಸಹೋದರಿ ದೆಹಲಿಯಿಂದ ಉನಾ ತಲುಪಿದ ನಂತರ ಅವರ ಅಂತ್ಯಕ್ರಿಯೆಯನ್ನು ಇಂದು ನೆರವೇರಿಸಲಾಗುವುದು’ ಎಂದು ವಿ ಪಿ ಸಿಂಗ್ ಹೇಳಿದ್ದಾರೆ.

Leave a Comment

Your email address will not be published. Required fields are marked *