Ad Widget .

ಬೆಂಗಳೂರು: ಪತ್ನಿಯ ಐಶಾರಾಮಿ ಜೀವನಕ್ಕೆ ಬೇಸತ್ತು ಪತಿ ಆತ್ಮಹತ್ಯೆ

ಬೆಂಗಳೂರು: ಪತ್ನಿಯ ಐಶಾರಾಮಿ ಜೀವನಕ್ಕೆ ಬೇಸತ್ತು ಪತಿ ನೇಣಿಗೆ ಶರಣಾಗಿರುವ ಘಟನೆ ಬಸವೇಶ್ವರನಗರ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ನಡೆದಿದೆ.

Ad Widget . Ad Widget .

ಮೆಕಾನಿಕ್‌ ಕೆಲಸ ಮಾಡುತ್ತಿದ್ದ ಚಾಂದ್‌ಪಾಷಾ (31) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.

Ad Widget . Ad Widget .

ಕೌಟುಂಬಿಕ ಕಲಹ ದಿಂದ ಮೊದಲ ಪತ್ನಿಯಿಂದ ದೂರವಾಗಿದ್ದರು. ಆ ಹಿನ್ನೆಲೆ ಚಾಂದ್‌ ಪಾಷಾ ಕಳೆದ 4 ತಿಂಗಳ ಹಿಂದಷ್ಟೇ ಉಸ್ಮಾ (26) ಎಂಬಾಕೆಯನ್ನು ಮದುವೆಯಾಗಿದ್ದ. ಚಾಂದ್‌ ಪಾಷಾ ಪತ್ನಿ ಉಸ್ಮಾಗೆ ಐಷಾರಾಮಿ ಜೀವನದ ಗೀಳಿತ್ತು. ಆ ಹಿನ್ನೆಲೆ ಯಲ್ಲಿಯೇ ದುಬಾರಿ ಬಟ್ಟೆ ಧರಿಸುವುದು. ಚಿನ್ನಾಭರಣ ಖರೀದಿಸುವುದು, ಪ್ರತಿನಿತ್ಯ ಹೊರಗೆ ಸುತ್ತಾಡಿ ಐಶಾರಾಮಿ ಜೀವನ ನಡೆಸುವ ಅಭಿಲಾಷೆಯನ್ನು ಪತಿಯ ಜತೆ ವ್ಯಕ್ತಪಡಿಸುತ್ತಿದ್ದಳು.

ಆದರೆ, ಮೆಕ್ಯಾನಿಕ್‌ ಕೆಲಸ ಮಾಡುತ್ತಿದ್ದ ಪತಿ ಚಾಂದ್‌ಪಾಷಾ ತಾನು ಗಳಿಸುತ್ತಿದ್ದ ಆದಾಯದಲ್ಲಿ ಪತ್ನಿಯ ಐಶಾರಾಮಿ ಆಕಾಂಕ್ಷೆಗಳನ್ನು ಈಡೇರಿಸುವುದು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಪ್ರತಿದಿನ ಪತಿ- ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು. ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Leave a Comment

Your email address will not be published. Required fields are marked *