Ad Widget .

ಸಾಮೂಹಿಕ ದೃಷ್ಟಿಕೋನದ ಭಾರತೀಯತೆ ನಮ್ಮದಾಗಲಿ- ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿಮತ

ಹೊಸದಿಲ್ಲಿ: ಈ ಗಣರಾಜ್ಯೋತ್ಸವದಂದು ದೇಶವಾಸಿಗಳೆಲ್ಲರೂ “ಭಾರತೀಯತೆ’ಯನ್ನು ಆಚರಿಸುವಂತೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಕರೆ ನೀಡಿದ್ದಾರೆ.

Ad Widget . Ad Widget .

73ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, “ಕೊರೊನಾ ವೈರಸ್‌ ಸಾಂಕ್ರಾಮಿಕದಿಂದ ಮಾನವತೆಗೆ ಎದುರಾದ ಅತೀ ದೊಡ್ಡ ಸವಾಲನ್ನು ಅತ್ಯಂತ ದೃಢಚಿತ್ತದಿಂದ ದೇಶವು ಎದುರಿಸಿದೆ.

Ad Widget . Ad Widget .

ಭಾರತೀಯರಾದ ನಮ್ಮೆಲ್ಲರ ಸಾಮೂಹಿಕ ದೃಷ್ಟಿಕೋನದ ಪ್ರೇರಣೆಯಿಂದ ಮೈದಳೆದ ಸಂವಿಧಾನವನ್ನು ಅನುಷ್ಠಾನಗೊಳಿಸಿದ ದಿನ ಇದಾಗಿದೆ. ನಮ್ಮ ಪ್ರಜಾತಂತ್ರದ ವೈವಿಧ್ಯ ಮತ್ತು ಸ್ಪಂದನಶೀಲತೆ, ಜಗತ್ತಿನೆಲ್ಲೆಡೆ ಮನ್ನಣೆ ಪಡೆದಿದೆ. ಏಕತೆ ಮತ್ತು ಒಂದು ದೇಶ ಎಂಬ ಮನೋಭಾವನೆಯನ್ನು ಪ್ರತಿವರ್ಷ ಗಣರಾಜ್ಯ ದಿನವಾಗಿ ಆಚರಿಸಲಾಗುತ್ತಿದೆ. ಸಾಂಕ್ರಾಮಿಕದಿಂದಾಗಿ ಈ ವರ್ಷದ ಗಣರಾಜ್ಯೋತ್ಸವ ಸಂಭ್ರಮ ಕಳೆಗುಂದಿರಬಹುದು, ಆದರೆ ಆ ಹುರುಪು ಎಂದಿನಂತೆ ಚೈತನ್ಯ ಶೀಲವಾಗಿದೆ.

ಇದು ಬಲಿಷ್ಠ ಹಾಗೂ ಸೂಕ್ಷ್ಮಸಂವೇದನೆಯ ಭಾರತವು ಉದಯಿಸುತ್ತಿರುವುದನ್ನು ತೋರಿಸಿದೆ’ ಎಂದು ಹೇಳಿದ್ದಾರೆ.

ಸದ್ಯದಲ್ಲೇ ಕೋವಿಂದ್‌ ಅವರ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಇದು ರಾಷ್ಟ್ರಪತಿಯಾಗಿ ಅವರ ಕೊನೆಯ ಭಾಷಣವಾಗಿದೆ. ಪ್ರಜಾಸತ್ತೆ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಭಾರತದ ಅಡಿಪಾಯವಾಗಿದೆ. ನಮ್ಮ ಪ್ರಜಾಪ್ರಭುತ್ವದ ವೈವಿಧ್ಯತೆಯನ್ನು ಇಡೀ ಜಗತ್ತೇ ಶ್ಲಾ ಸುತ್ತದೆ. ಈ ಏಕತೆ ಮತ್ತು ಒಂದು ದೇಶ ಎಂಬ ಭಾವನೆಯನ್ನೇ ನಾವು ಪ್ರತೀ ವರ್ಷ ಗಣರಾಜ್ಯದಿನವನ್ನಾಗಿ ಆಚರಿಸುತ್ತೇವೆ. ಈ ವರ್ಷ ಕೊರೊನಾದಿಂದಾಗಿ ಸಂಭ್ರಮವು ತಗ್ಗಿರಬಹುದು. ಆದರೆ ನಮ್ಮಲ್ಲಿನ ಶಕ್ತಿ-ಸ್ಫೂರ್ತಿ ಎಂದಿನಂತೆಯೇ ಬಲಿಷ್ಠವಾಗಿದೆ ಎಂದೂ ರಾಷ್ಟ್ರಪತಿ ಹೇಳಿದ್ದಾರೆ.

Leave a Comment

Your email address will not be published. Required fields are marked *