ಮಂಗಳೂರು: ನೆಹರು ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ 2022ನೇ ಸಾಲಿನ ಪದ್ಮಶ್ರೀ ಪುರಸ್ಕೃತರಾದ ಜಿಲ್ಲೆಯ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೆಸರಿಲ್ಲದ ಖಾಲಿ ಸ್ಮರಣಿಕೆ ನೀಡಿ ‘ಖುಷಿ ಆಂಡಾ’ ಎಂದು ಸನ್ಮಾನಿಸಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಮಹಾಲಿಂಗ ನಾಯ್ಕ ಅವರು ಕೊರೆದ ಸುರಂಗ ಮತ್ತು ತೋಟಗಳನ್ನು ಮೆಚ್ಚಿ ಕೇಂದ್ರ ಸರಕಾರ ಈ ವರ್ಷ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸುವುದಕ್ಕೆ ಮುಂದಾಗಿದೆ. ಈ ವಿಚಾರ ತಿಳಿದು ಇಂದು ಜಿಲ್ಲಾಡಳಿತ ಆತುರಕ್ಕೆ ಬಿದ್ದು ಹೆಸರಿಲ್ಲದ ಸ್ಮರಣಿಕೆ ನೀಡಿ ಸನ್ಮಾನಿಸಿರುವುದು ಪದ್ಮಶ್ರೀ ಪುರಸ್ಕೃತರಿಗೆ ಮಾಡಿದ ಅವಮಾನದಂತೆ ಕಂಡುಬಂದಿದೆ.
ಮಹಾಲಿಂಗ ನಾಯ್ಕ ಅವರನ್ನು ಗಣರಾಜ್ಯೋತ್ಸವದ ದಿನ ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಹೆಸರಿಲ್ಲದ ಸ್ಮರಣಿಕೆ ನೀಡಿ ಸನ್ಮಾನಿಸಿದೆ. ಶಾಲು, ಹಾರ ಫಲ ಪುಷ್ಪ ನೀಡಿ ಜಿಲ್ಲಾ ಉಸ್ತುವಾರಿ ಸಚಿವರು ಸನ್ಮಾನಿಸುವಾಗ ಹೆಸರಿಲ್ಲದ ಸ್ಮರಣಿಕೆಯನ್ನು ನೀಡಿದ್ದಾರೆ.
ಈ ರೀತಿಯಾಗಿ ಒಬ್ಬ ಸಾಧಕನಿಗೆ ಹೆಸರಿಲ್ಲದ ಸ್ಮರಣಿಕೆಯೊಂದನ್ನು ನೀಡಿ ಉಸ್ತುವಾರಿ ಸಚಿವ ಸುನಿಲ್‌ಕುಮಾರ್ ಮಹಾಲಿಂಗ ನಾಯ್ಕರಿಗೆ ‘ಖುಷಿ ಆಂಡಾ? ನನಲ ಜಾಸ್ತಿ ಕೆಲಸ ಮಲ್ಪುಲೆ’ ಎಂದು ಸನ್ಮಾನಿಸುವ ಮೂಲಕ ಜಿಲ್ಲಾಡಳಿತ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಿದ್ದಾರೆ. ಇದು ಒಬ್ಬ ಸಾಧಕನಿಗೆ ನೀಡುವ ಗೌರವವೇ? ಎಂದು ಜನ ಪ್ರಶ್ನಿಸುತ್ತಿದ್ದಾರೆ.