Ad Widget .

ಶಾಸಕ‌ ಶರಣು ಸಲಗ ವಿರುದ್ದ ಎಫ್ಐಆರ್| ಕೋವಿಡ್ ನಿಯಮ ಮೀರಿ ಪಾದಯಾತ್ರೆ ಮಾಡಿದ್ದ ಬಿಜೆಪಿ ಶಾಸಕ

Ad Widget . Ad Widget .

ಬೀದರ್: ಕೊರೋನಾ ಸೋಂಕಿನ ಈ ಸಂದರ್ಭದಲ್ಲಿ, ಹೆಚ್ಚು ಜನರು ಸೇರುವಂತ ಯಾವುದೇ ಕಾರ್ಯಕ್ರಮ ನಿಷಿದ್ಧವಾಗಿದ್ದರೂ ಮೂರು ದಿನಗಳ ಹಿಂದೆ ಈ ನಿಯಮ ಮೀರಿ ಬಸವಕಲ್ಯಾಣದಿಂದ ಗೋಕುಳ ಗ್ರಾಮದವರೆಗೆ ಪಾದಯಾತ್ರೆಯಲ್ಲಿ ಭಾಗಿಯಾದ ಶಾಸಕ ಶರಣು ಸಲಗ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Ad Widget . Ad Widget .

ಕಳೆದ ಮೂರು ದಿನಗಳ ಹಿಂದೆ ಬೀದರ್ ಜಿಲ್ಲೆಯ ಬಸವಕಲ್ಯಾಣದಿಂದ ಗೋಕುಳ ಗ್ರಾಮದವರೆಗೆ ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗ ಅವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ಪಾದಯಾತ್ರೆಯಲ್ಲಿ ಮಾಸ್ಕ್, ದೈಹಿಕ ಅಂತರ ಕೂಡ ಕಾಪಾಡಿರಲಿಲ್ಲ.

ಈ ಕಾರಣದಿಂದಾಗಿ ಕಾಂಗ್ರೆಸ್ ಕಾರ್ಯಕರ್ತರು ಕೋವಿಡ್ ನಿಯಮ ಉಲ್ಲಂಘಿಸಿ ಪಾದಯಾತ್ರೆಯಲ್ಲಿ ಭಾಗವಹಿಸಿದಂತ ಬಿಜೆಪಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಸವಕಲ್ಯಾಣ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಕೋವಿಡ್ ನಿಯಮದಡಿ ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗ ವಿರುದ್ಧ ಬಸವಕಲ್ಯಾಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Leave a Comment

Your email address will not be published. Required fields are marked *