Ad Widget .

ಅಸಹಜ ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಬಾಲಕನ ಇರಿದು ಕೊಂದ ಯುವಕ

ರಾಯ್‍ಪುರ: ಅಸಹಜ ಲೈಂಗಿಕ ಸಂಭೋಗಕ್ಕೆ ನಿರಾಕರಿಸಿದ್ದಕ್ಕೆ ಅಪ್ರಾಪ್ತ ಬಾಲಕನನ್ನು ಯುವಕನೊರ್ವ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಛತ್ತೀಸ್‍ಗಢದ ಬೆಮೆತಾರಾ ಜಿಲ್ಲೆಯಲ್ಲಿ ನಡೆದಿದೆ.

Ad Widget . Ad Widget .

ಆರೋಪಿಯನ್ನು ಪಂಕಜ್ ವಿಶ್ವಕರ್ಮ(20) ಎಂದು ಗುರುತಿಸಲಾಗಿದೆ. ಬಿಜಭಟ ಮುರುಮ್ ಗಣಿ ಸಮೀಪದ ಪ್ರತ್ಯೇಕ ಸ್ಥಳಕ್ಕೆ ಸೋಮವಾರ ಬಾಲಕನನ್ನು ಕರೆದೊಯ್ದು ಹರಿತವಾದ ಆಯುಧದಿಂದ ಕೊಂದಿದ್ದಾನೆ. ಕೃತ್ಯ ವೆಸಗಿದ ಕೂಡಲೇ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಬೆಮೆತಾರಾ ಪೊಲೀಸ್ ಠಾಣೆಯ ಅಧಿಕಾರಿ ಪ್ರೇಮ್ ಪ್ರಕಾಶ್ ಅವಧಿಯಾ ತಿಳಿಸಿದ್ದಾರೆ.

Ad Widget . Ad Widget .

ಬಾಲಕ ಕಾಣೆಯಾಗಿರುವುದಾಗಿ ಬಾಲಕನ ಪೋಷಕರು ದೂರು ದಾಖಲಿಸಿದ ಬಳಿಕ ಪೊಲೀಸರು ತನಿಖೆ ಆರಂಭಿಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಆರೋಪಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *