Ad Widget .

ರಾಜ್ಯದ ಐವರಿಗೆ ಪದ್ಮ ಪ್ರಶಸ್ತಿ; ಜ. ಬಿಪಿನ್ ರಾವತ್​ಗೆ ಮರಣೋತ್ತರ ಪದ್ಮ ವಿಭೂಷಣ

Ad Widget . Ad Widget .

ನವದೆಹಲಿ: ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಅವರಿಗೆ ಈ ಗೌರವ ನೀಡಲಾಗುತ್ತದೆ. 2022ನೇ ಸಾಲಿನಲ್ಲಿ ಒಟ್ಟು 128 ಮಂದಿಯನ್ನು ಪದ್ಮಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಧಕರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

Ad Widget . Ad Widget .

10 ಮಂದಿಗೆ ಮರಣೋತ್ತರ ಪದ್ಮ ಪ್ರಶಸ್ತಿ

ಈ ಬಾರಿ 4 ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 107 ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಣೆ ಮಾಡಾಗಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 34 ಮಹಿಳೆಯರು ಮತ್ತು 10 ಮಂದಿಗೆ ಮರಣೋತ್ತರ ಪದ್ಮ ಪ್ರಶಸ್ತಿ ಘೋಷಿಸಲಾಗಿದೆ.

ಕರ್ನಾಟಕದ ಐವರಿಗೆ ಈ ಬಾರಿ ಪದ್ಮ ಪ್ರಶಸ್ತಿ ಘೋಷಿಸಲಾಗಿದೆ. ಸೈನ್ಸ್ ಅಂಡ್ ಇಂಜನಿಯರಿಂಗ್ ಕ್ಷೇತ್ರದ ಸೇವೆಗಾಗಿ ಸುಬ್ಬಣ್ಣ ಅಯ್ಯಪನ್, ಕಲಾ ಕ್ಷೇತ್ರಕ್ಕೆ ಎಚ್.ಆರ್. ಕೇಶವಮೂರ್ತಿ, ನಾವಿನ್ಯತೆ ಕ್ಷೇತ್ರಕ್ಕೆ ಅಬ್ದುಲ್ ಖಾದರ್ ನಡಕಟ್ಟಿನ್ , ಕೃಷಿ ಕ್ಷೇತ್ರದ ಸಾಧನೆಗಾಗಿ ಅಮೈ ಮಹಾಲಿಂಗ ನಾಯ್ಕ ಅವರಿಗೆ ಪದ್ಮ ಪ್ರಶಸ್ತಿ ನೀಡಲಾಗಿದ್ದು, ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರ ಪದ್ಮ ಪ್ರಶಸ್ತಿ ಘೋಷಿಸಲಾಗಿದೆ

ಬಿಪಿನ್​ ರಾವತ್​​ಗೆ ಪದ್ಮ ವಿಭೂಷಣ ಪ್ರಶಸ್ತಿ:
ಈ ಬಾರಿ ನಾಲ್ವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಪ್ರಕಟ ಮಾಡಲಾಗಿದ್ದು, ಜನರಲ್ ಬಿಪಿನ್ ರಾವತ್ ಹಾಗೂ ಯೂಪಿ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಹಾಗೂ ಉತ್ತರ ಪ್ರದೇಶದ ರಾಧೇಶ್ಯಾಮ್ ಖೇಮ್ಕಾ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಕಲಾ ಕ್ಷೇತ್ರಕ್ಕೆ ಪ್ರಶಸ್ತಿ ಮಹಾರಾಷ್ಟ್ರದ ಪ್ರಭಾ ಅತ್ರೆಗೂ ಮರಣೋತ್ತರ ಪ್ರಶಸ್ತಿ ಘೋಷಿಸಲಾಗಿದೆ.

ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಮತ್ತು ಎಸ್‌ಐಐ ಎಂಡಿ ಸೈರಸ್ ಪೂನಾವಾಲಾ, ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ಅವರಿಗೂ ಪದ್ಮಭೂಷಣ ಪ್ರಶಸ್ತಿ ಒಲಿದಿದೆ.

ಒಲಿಂಪಿಕ್​ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಪ್ರಮೋದ್ ಭಗತ್ ಮತ್ತು ವಂದನಾ ಕಟಾರಿಯಾ ಮತ್ತು ಗಾಯಕ ಸೋನು ನಿಗಮ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

Leave a Comment

Your email address will not be published. Required fields are marked *