Ad Widget .

ಬಿಹಾರದಲ್ಲಿ ಗಂಡು ಮಕ್ಕಳಿಗೂ ನ್ಯಾಪ್ ಕಿನ್ ಭತ್ಯೆ!

ಪಾಟ್ನಾ: ವಿದ್ಯಾರ್ಥಿನಿಯರು ಋತುಚಕ್ರದ ಸಮಯದಲ್ಲಿ ಬಳಸಲೆಂದು ನೀಡಲಾಗುವ ಸ್ಯಾನಿಟರಿ ನ್ಯಾಪ್‌ಕೀನ್‌ ಭತ್ಯೆಯನ್ನು ಬಿಹಾರದ ಶಾಲೆಯೊಂದರಲ್ಲಿ ಗಂಡು ಮಕ್ಕಳಿಗೂ ನೀಡಿದ್ದ ವಿಷಯ ಬೆಳಕಿಗೆ ಬಂದಿದೆ.

Ad Widget . Ad Widget .

ಸರನ್‌ ಜಿಲ್ಲೆಯ ಹಲ್ಕೋರಿ ಸಾಹ್‌ ಪ್ರೌಢಶಾಲೆಯ 7 ವಿದ್ಯಾರ್ಥಿಗಳಿಗೆ ನ್ಯಾಪ್‌ಕೀನ್‌ ಖರೀದಿಗೆಂದು 2016-17ನೇ ಸಾಲಿನಲ್ಲಿ ವಾರ್ಷಿಕ 150 ರೂ.ವಿತರಣೆ ಮಾಡಿದ್ದ ವಿಷಯವನ್ನು ಶಾಲೆಯ ಹೊಸ ಮುಖ್ಯೋಪಾಧ್ಯಾಯರು ಪತ್ತೆ ಮಾಡಿದ್ದು, ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ. ವಿದ್ಯಾರ್ಥಿಗಳ ಹೆಸರಲ್ಲಿ ಶಾಲಾ ಸಿಬ್ಬಂದಿಯೇ ವಂಚನೆ ಮಾಡಿದ್ದಾರಾ? ಅಥವಾ ಲೆಕ್ಕದಲ್ಲಿ ಗೋಲ್‌ಮಾಲ್‌ ಮಾಡಲಾಗಿತ್ತೇ ಎಂಬ ವಿಷಯಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

Ad Widget . Ad Widget .

ಶಾಲೆಯಲ್ಲಿರುವ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಿಸುವ ಯೋಜನೆಯನ್ನು ಬಿಹಾರ ಸರ್ಕಾರ 2015ರಲ್ಲಿ ಜಾರಿಗೊಳಿಸಿತ್ತು. ಈ ಯೋಜನೆಯಡಿ 8ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರು ವಾರ್ಷಿಕ 150 ರೂ.ಗಳನ್ನು ಪಡೆಯುತ್ತಿದ್ದರು.

Leave a Comment

Your email address will not be published. Required fields are marked *