Ad Widget .

ಹನಿಮೂನ್ ಫೋಟೋ ಶೇರ್ ಮಾಡಿಕೊಂಡ ಕತ್ರಿನಾ ಕೈಫ್

Ad Widget . Ad Widget .

ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಅದ್ದೂರಿಯಾಗಿ ಮದುವೆಯಾಗುವ ಮೂಲಕವಾಗಿ ಸಖತ್ ಸುದ್ದಿಯಲ್ಲಿದ್ದರು. ಇದೀಗ ಹನಿಮೂನ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Ad Widget . Ad Widget .

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆ ಡಿ.9ರಂದು ಅದ್ದೂರಿಯಾಗಿ ನಡೆಯಿತು. ಇದಾದ ಮರುದಿನವೇ ಅವರು ಹನಿಮೂನ್‍ಗೆ ಮಾಲ್ಡೀವ್ಸ್‌ಗೆ ಹೋಗಿದ್ದರು ಎನ್ನಲಾಗಿತ್ತು. ನಾಲ್ಕು ದಿನ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆದು ಭಾರತಕ್ಕೆ ವಾಪಸ್ ಬಂದಿತ್ತು. ಮಾಲ್ಡೀವ್ಸ್ ಡೈರಿಯ ಫೋಟೋ ಹಂಚಿಕೊಂಡಿರಲಿಲ್ಲ. ಈಗ ಕತ್ರಿನಾ ಅವರು ಹನಿಮೂನ್ ಫೋಟೋ ಹಂಚಿಕೊಂಡಿದ್ದಾರೆ

ಮಾಲ್ಡೀವ್ಸ್ ಸಮುದ್ರ ತೀರದಲ್ಲಿ ನಿಂತಿರುವ ಚಿತ್ರವನ್ನು ಕತ್ರಿನಾ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ ಮೈ ಹ್ಯಾಪಿ ಪ್ಲೇಸ್ ಎಂದು ಅವರು ಹಾಕಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.

ಕತ್ರಿನಾ ಕೈಫ್ ಲಂಡನ್ ಮೂಲದವರು. ಹಿಂದಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ನಂತರ ಅವರು ಭಾರತದಲ್ಲೇ ಸೆಟ್ಲ್ ಆಗಿದ್ದಾರೆ. ಈಗ ವಿಕ್ಕಿ ಕೌಶಲ್ ಅವರನ್ನು ಮದುವೆಯಾಗಿ ಪಂಜಾಬ್‍ನ ಸೊಸೆ ಆಗಿದ್ದಾರೆ. ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‍ನಲ್ಲಿ ಅದ್ದೂರಿಯಾಗಿ ವಿಕ್ಕಿ ಕೌಶಲ್, ಕತ್ರಿನಾ ಕೈಫ್ ಮದುವೆ ನೆರವೇರಿತ್ತು. ಇದೀಗ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

Leave a Comment

Your email address will not be published. Required fields are marked *