ಸಂಪಾಜೆ: ಲಾರಿಯಲ್ಲಿ ಅಕ್ರಮ ಗೋ ಸಾಗಾಟ| ತಪಾಸಣೆ ವೇಳೆ ಪಲಾಯನಗೈದ ಖದೀಮರು

ಮಡಿಕೇರಿ: ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಗೇಟಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಈಚರ್ ಲಾರಿಯೊಂದರಲ್ಲಿ 25 ಕ್ಕೂ ಹೆಚ್ಚು ದನಗಳು ಪತ್ತೆಯಾದ ಘಟನೆ ನಿನ್ನೆ ತಡರಾತ್ರಿ ವರದಿಯಾಗಿದೆ.

Ad Widget ... ..

ಮಡಿಕೇರಿ ಕಡೆಯಿಂದ ಈಚರ್ ಲಾರಿಯಲ್ಲಿ ದನಗಳನ್ನು ತುಂಬಿಕೊಂಡು ಬರಲಾಗಿದ್ದು, ಸಂಪಾಜೆ ಗೇಟಿನ ಸಿಬ್ಬಂದಿ ವಿಚಾರಣೆ ನಡೆಸಿದಾಗ ಇದು ಪಶುಆಹಾರ ಸಾಗಾಟ ಎಂದು ಚಾಲಕ ಹೇಳಿದನೆಂದೂ ಗೇಟಿನ ಸಿಬ್ಬಂದಿ ಅನುಮಾನ ಬಂದು ಲಾರಿಯನ್ನು ತಪಾಸಣೆ ನಡೆಸಿದಾಗ ಒಳಗೆ ದನದ ಫುಡ್ ನ ಜತೆಗೆ 25 ಕ್ಕೂ ಹೆಚ್ಚು ದನಗಳು ಕಂಡು ಬಂದಿವೆ. ಚಾಲಕನನ್ನು ಮತ್ತಷ್ಟು ಪ್ರಶ್ನೆ ಮಾಡಿದಾಗ ಆತ ಹಾಗೂ ಈಚರ್ ಗಾಡಿಯಲ್ಲಿದ್ದ ಮತ್ತೊಬ್ಬ ಪಲಾಯನಗೈದಿದ್ದಾರೆ.

Ad Widget

ಇದೀಗ ಲಾರಿಯನ್ನು ಸಂಪಾಜೆ ಗೇಟಿನಲ್ಲಿ‌ ತಡೆಯಲಾಗಿದ್ದು, ದನಗಳನ್ನು ‌ಸಾಗಾಟ‌ ಮಾಡುತ್ತಿದ್ದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.

Leave a Comment

Your email address will not be published. Required fields are marked *