Ad Widget .

ಕಳ್ಳತನ ಮಾಡಬೇಡ ಎಂದ ತಂದೆಯನ್ನೇ ಕೊಲೆ ಮಾಡಿದ ಮಗ

Ad Widget . Ad Widget .

ಚಳ್ಳಕೆರೆ: ಕಳ್ಳತನ ಮಾಡಬೇಡ ಎಂದದ್ದಕ್ಕೆ ತಂದೆಯನ್ನೇ ಮಗ ಕೊಲೆ ಮಾಡಿದ ಘಟನೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ನಾಯಕನಹಟ್ಟಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

Ad Widget . Ad Widget .

ಮಲ್ಲೂರಹಳ್ಳಿ ಗ್ರಾಮದ ಬರಮಸಾಗರ ಕೊಪ್ಲೆಯ ಗುಡ್ಲು ಮಲ್ಲಯ್ಯ(65) ಎಂಬವರು ತನ್ನ ಪುತ್ರ ಲೋಕೇಶ್(35) ಎಂಬಾತನನ್ನು ಕೊಲೆ ಮಾಡಿರುವುದು. ಇವರು ಕಳ್ಳತನ, ಜಗಳ ಮಾಡಬೇಡ. ಬರೀ ನಿನ್ನ ಮೇಲೆ ಆರೋಪಗಳು ಬರುತ್ತಿವೆ ಎಂದು ಬುದ್ದಿ ಮಾತು ಹೇಳಿದ್ದರು. ಇದರಿಂದ ಕೋಪಗೊಂಡ ಮಗ ರಾತ್ರಿ 12 ಗಂಟೆ ವೇಳೆಗೆ ಹೊಡೆದು ತಂದೆಯನ್ನು ಕೊಲೆ ಮಾಡಿದ್ದಾನೆ.

ಲೋಕೇಶ್ ಮೇಲೆ ರೈತರ ಎತ್ತುಗಳ ಕಳವು ಪ್ರಕರಣ ಸೇರಿದಂತೆ ಹಲವು ಕಳ್ಳತನ ಪ್ರಕರಣಗಳಿದ್ದು ಗುಂತಕೋಲಮ್ಮನಹಳ್ಳಿ ಗ್ರಾಮದಲ್ಲಿ ರೈತರ ಎತ್ತುಗಳ ಕಳವು ಪ್ರಕರಣದಲ್ಲಿ ಆರೋಪಿ ಲೋಕೇಶ್ ತಪ್ಪಿಸಿಕೊಂಡು ಜಾಮೀನು ಪಡೆದು ಹೊರ ಬಂದಿದ್ದ ಎನ್ನಲಾಗಿದೆ. ಕಳ್ಳತನ ಮಾಡಬೇಡ ಎಂದು ತಂದೆ ಬುದ್ದಿ ಹೇಳಿದ್ದಕ್ಕೆ ಹೊಡೆದು ಕೊಲೆ ಮಾಡಿದ್ದಾನೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಕುಮಾರಸ್ವಾಮಿ, ಡಿವೈಎಸ್ಪಿ ಕೆ.ವಿ.ಶ್ರೀಧರ್ , ವೃತ್ತ ನಿರೀಕ್ಷಕ ರಮಕಾಂತ ಪಿ.ಎಸ್.ಐ ಮಹೇಶ ಲಕ್ಷ್ಮಣ ಹೊಸಪೇಟೆ ಭೇಟಿ ನೀಡಿ ನಾಯಕನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಲೋಕೇಶ್ ನನ್ನು ಫೋಲಿಸರು ವಶಕ್ಕೆ ಪಡೆದಿದ್ದಾರೆ.

Leave a Comment

Your email address will not be published. Required fields are marked *