Ad Widget .

ವಕೀಲರೊಟ್ಟಿಗೆ ಪ್ರಯಾಣಿಸುತ್ತಿದ್ದ ನ್ಯಾಯಾದೀಶೆ| ಕಾರನ್ನುಅಡ್ಡಗಟ್ಟಿದ ಸ್ಥಳೀಯ ವಕೀಲರ ಗುಂಪು

Ad Widget . Ad Widget .

ದೊಡ್ಡಬಳ್ಳಾಪುರ: ನ್ಯಾಯಾಧೀಶೆಯೊಬ್ಬರು ರಾತ್ರಿ ವೇಳೆ ವಕೀಲರೊಟ್ಟಿಗೆ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ ಸ್ಥಳೀಯ ವಕೀಲರ ಗುಂಪೊಂದು ಇಬ್ಬರನ್ನೂ ತರಾಟೆಗೆ ತೆಗೆದುಕೊಂಡ ವಿಡಿಯೊ ವೈರಲ್‌ ಆಗಿದೆ.

Ad Widget . Ad Widget .

ನಗರದ ಹೊರವಲಯದಲ್ಲಿ ಶುಕ್ರವಾರ ರಾತ್ರಿ ನ್ಯಾಯಾಧೀಶೆ ಮತ್ತು ವಕೀಲರೊಬ್ಬರ ಜೊತೆ ವಕೀಲರ ಗುಂಪು ನಡೆಸಿದ ಜಟಾಪಟಿ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ.
ಈ ವಿಡಿಯೊ ತುಣುಕು ಈಗ ಎಲ್ಲೆಡೆ ಹರಿದಾಡುತ್ತಿದೆ. ಕಾರಿನಲ್ಲಿ ಕುಳಿತಿದ್ದ ವಕೀಲನನ್ನು ಕೆಳಗಿಳಿಸಿ ತರಾಟೆಗೆ ತೆಗೆದುಕೊಂಡ ಗುಂಪು ನಂತರ ಕಾರು ಚಾಲನೆ ಮಾಡುತ್ತಿದ್ದ ನ್ಯಾಯಾಧೀಶೆಯನ್ನೂ ಕೆಳಗೆ ಇಳಿಯುವಂತೆ ‌ಒತ್ತಾಯಿಸಿರುವುದು ವಿಡಿಯೊದಲ್ಲಿದೆ.

ಈ ಘಟನೆ ನಡೆದು ಎರಡು ದಿನಗಳಾದರೂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲು ಎಲ್ಲರೂ ಹಿಂಜರಿಯುತ್ತಿದ್ದಾರೆ. ಇದರ ಬೆನ್ನಲ್ಲೇ ದೊಡ್ಡಬಳ್ಳಾಪುರದ ಜೆಎಂಎಫ್‌ಸಿ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಜ್ಯೋತಿ ಕಾಳೆ ಅವರನ್ನು ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ.

Leave a Comment

Your email address will not be published. Required fields are marked *