Ad Widget .

ಗರಿಗೆದರಿದ ಸಂಪುಟ ವಿಸ್ತರಣೆ| ಅರ್ಹತೆಯ ಪ್ರಶ್ನೆ ಮಾಡಿದ ರೇಣುಕಾಚಾರ್ಯ

ದಾವಣಗೆರೆ: ರಾಜ್ಯದಲ್ಲಿ ಸಚಿವ ಸ್ಥಾನಕ್ಕಾಗಿ ಸಂಪುಟ ವಿಸ್ತರಣೆ ಗರಿಗೆದರಿದೆ. ಇದರ ಬೆನ್ನಲ್ಲೇ ಸಚಿವಸ್ಥಾನದ ಆಕಾಂಕ್ಷಿಗಳು ತೆರೆ ಮರೆಯಲ್ಲಿ ಕೆಲವರು ಕಸರತ್ತು ನಡೆಸುತ್ತಿದ್ದರೆ, ಮತ್ತೆ ಕೆಲವರು ನೇರವಾಗಿಯೇ ಸಿಡಿದೆದ್ದಿದ್ದಾರೆ.

Ad Widget . Ad Widget .

ನನಗೇನು ಸಚಿವನಾಗೋ ಅರ್ಹತೆ ಇಲ್ಲವೇ.? ಎಂಬುದಾಗಿ ಸಚಿವ ಸ್ಥಾನಕ್ಕಾಗಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಿಡಿದೆದ್ದಿದ್ದಾರೆ.

Ad Widget . Ad Widget .

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಸರ್ಕಾರ ಅಸ್ಥತ್ವಕ್ಕೆ ಬರಲು ನಾನು ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಪ್ರಯತ್ನಿಸಿದ್ದೇವೆ. ಮೈತ್ರಿ ಸರ್ಕಾರದ ಪತನದ ಹಿಂದೆ ನಮ್ಮ ಪ್ರಯತ್ನ ಕೂಡ ಇದೆ ಎಂದಿದ್ದಾರೆ.

ಶಾಸಕರಾಗಿ ನಾವು ಸಚಿವರಿಗೆ ಪೋನ್ ಮಾಡಿದರೆ ಪೋನ್ ರಿಸೀವ್ ಮಾಡೋದಿಲ್ಲ. ಯಾವುದಾದರೂ ಕೆಲಸ ಮಾಡಿಕೊಡಿ ಎಂದರೆ ಕ್ಯಾರೆ ಎನ್ನದಂತ ಪರಿಸ್ಥಿತಿ ಇದೆ. ಹೀಗೆ ನಡೆದುಕೊಳ್ಳುವಂತ ಸಚಿವರ ಅವಶ್ಯಕತೆ ಏನಿದೆ. ಇವರೆಲ್ಲಾ ಸಂಪುಟದಲ್ಲಿ ಇರಬೇಕಾ? ಅಂತ ಕಿಡಿಕಾರಿದರು.

Leave a Comment

Your email address will not be published. Required fields are marked *