Ad Widget .

ಪಾಣೆಮಂಗಳೂರು: ಕಲ್ಲುರ್ಟಿ ದೇವಸ್ಥಾನದ ಸಮೀಪ ಅಪರಿಚಿತ ಶವ ಪತ್ತೆ

Ad Widget . Ad Widget .

ಬಂಟ್ವಾಳ: ಅಪರಿಚಿತ ವ್ಯಕ್ತಿಯೋರ್ವನ ಮೃತದೇಹ ಪಾಣೆಮಂಗಳೂರು ಕಲ್ಲುರ್ಟಿ ದೇವಸ್ಥಾನದ ಸಮೀಪದಲ್ಲಿ ಪತ್ತೆಯಾಗಿದೆ.

Ad Widget . Ad Widget .

ಪಾಣೆಮಂಗಳೂರು ಕಲ್ಲುರ್ಟಿ ದೇವಸ್ಥಾನದ ಸಮೀಪ ಬೊರಲಾಗಿ ಮಲಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಕಾಣಸಿಕ್ಕಿದ್ದು, ಸ್ಥಳೀಯರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸುಮಾರು 65 ರಿಂದ 70 ವರ್ಷ ಪ್ರಾಯದ ವ್ಯಕ್ತಿ ಮೃತಪಟ್ಟಿದ್ದು, ಇವರ ಗುರುತು ಪತ್ತೆಯಾಗಬೇಕಿದೆ. ಹೃದಯಾಘಾತದಿಂದ ನಿಧನರಾಗಿರಬಹುದು ಎಂಬ ಶಂಕೆಯನ್ನು ಪೋಲೀಸರು ನೀಡಿದ್ದಾರೆ.

ಮಾಹಿತಿ ಲಭ್ಯ ವಾಗದ ಹಿನ್ನಲೆ ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ.

ಇನ್ನು ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆ ಹಚ್ಚಿ ಸಂಬಂಧ ಪಟ್ಟ ಕುಟುಂಬದ ವರು ಶವ ಸಂಸ್ಕಾರ ಮಾಡುವಂತೆ ಬಂಟ್ವಾಳ ನಗರ ಠಾಣಾ ಎಸ್ ಐ ಅವಿನಾಶ್ ಮನವಿ ಮಾಡಿದ್ದಾರೆ.

Leave a Comment

Your email address will not be published. Required fields are marked *