ಮಂಗಳೂರು: ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿ ವಿಜೇತ ರಾಜ್ಯದ ಏಕೈಕ ಬಾಲಕಿ ಮಂಗಳೂರಿನ ಭರತನಾಟ್ಯ ಕಲಾವಿದೆ ರೆಮೋನಾ ಪರೇರಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಸ್ತಿ ಪ್ರದಾನ ಮಾಡಿದರು.

ಹೊಸದಿಲ್ಲಿಯಿಂದ ಡಿಜಿಟಲ್ ಮಾದ್ಯಮದ ಮೂಲಕ ಪ್ರಶಸ್ತಿ ವಿತರಿಸಿ ಪ್ರಧಾನಿ ಬಾಲಕಿ ಜತೆ ಮಾತನಾಡಿದರು.