Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಈ ವಾರದಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುತ್ತದೆ ಮತ್ತು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಇದರಿಂದ ನಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. ಅಂತಹ ಬದಲಾವಣೆಗಳ ಪರಿಣಾಮದಿಂದ ಈ ವಾರ ರಾಶಿಗಳ ಭವಿಷ್ಯ ಹೇಗಿರುತ್ತದೆ ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

Ad Widget . Ad Widget .

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಕೃಷಿ ಯಂತ್ರೋಪಕರಣಗಳನ್ನು ಬಳಸುವವರಿಗೆ ಬರಬೇಕಿದ್ದ ಸಹಾಯಧನ ಈಗ ಬರುತ್ತದೆ. ಎದುರಾದ ಸಮಸ್ಯೆಗಳಿಗೆ ಸ್ನೇಹಿತರಿಂದ ಸೂಕ್ತ ಪರಿಹಾರ ಒದಗಿಬರುತ್ತದೆ. ದೂರ ಪ್ರಯಾಣದಿಂದ ಹೆಚ್ಚಿನ ಖರ್ಚು ಬರುತ್ತದೆ. ವಿದೇಶಿ ಸಂಸ್ಥೆಗಳಲ್ಲಿ ಹೂಡಿದ್ದ ಬಂಡವಾಳ ಈಗ ದೊಡ್ಡಮೊತ್ತವಾಗಿ ವಾಪಸ್ಸು ಬರುತ್ತದೆ. ತಿರುಗಾಟದಿಂದ ದೇಹಾಲಸ್ಯ. ಉದ್ದಿಮೆದಾರರಿಗೆ ಸ್ವಲ್ಪಮಟ್ಟಿನ ಹಿನ್ನಡೆ. ಪುಸ್ತಕ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಚೇತರಿಕೆ. ಧಾರ್ಮಿಕ ಕೆಲಸಗಳನ್ನು ಮಾಡುವವರೆಗೆ ಯಶಸ್ಸು ಇರುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ.

Ad Widget . Ad Widget .

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಸಾಲಸೋಲಗಳಿಂದ ಮುಕ್ತರಾಗಿ ನೆಮ್ಮದಿ ದೊರಕುವುದು. ಆದಾಯವು ಸಾಮಾನ್ಯವಾಗಿರುತ್ತದೆ. ರೈತಾಪಿ ವರ್ಗದವರಿಗೆ ಅವರು ಬೆಳೆದ ವಸ್ತುಗಳಿಗೆ ತಕ್ಕ ಬೆಲೆ ದೊರೆಯುತ್ತದೆ. ಸಂಗಾತಿಯ ಸಂತೋಷಕ್ಕಾಗಿ ಧನವ್ಯಯವಾಗುತ್ತದೆ. ವಿದ್ಯುತ್ ಉಪಕರಣಗಳ ದುರಸ್ತಿಗಾಗಿ ಹಣ ಖರ್ಚಾಗಬಹುದು. ಹೆಣ್ಣು ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಬಹುದು. ಸಾಹಸ ಕಲಾವಿದರಿಗೆ ಕೈತುಂಬಾ ಕೆಲಸಗಳು ದೊರೆಯುತ್ತವೆ. ಸಾಕಷ್ಟು ತಾಳ್ಮೆಯಿಂದ ವ್ಯವಹರಿಸಿದಲ್ಲಿ ಪಾಲುದಾರಿಕೆ ವ್ಯವಹಾರದ ಹೆಚ್ಚಿನ ಲಾಭದೊರೆಯುತ್ತದೆ. ಹಿರಿಯರಿಂದ ನಿಮ್ಮ ಕುಟುಂಬ ವ್ಯವಹಾರದ ಒಳಸುಳಿಗಳನ್ನು ತಿಳಿದು ಕೊಳ್ಳಬಹುದು. ಆದಾಯದಷ್ಟೇ ಖರ್ಚು ಇರುತ್ತದೆ. ದೇಹದಲ್ಲಿ ಪಿತ್ತೋಷ್ಣಗಳು ಹೆಚ್ಚಾಗುವ ಸಾಧ್ಯತೆ ಇದೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಸಫಲತೆಯನ್ನು ಕಾಣುವ ಅವಕಾಶವಿದೆ. ಬಂಧುಗಳ ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಗಾಗಿ ಹೋಗಿ ಬರುವಿರಿ. ತಂದೆಯಿಂದ ನಿಮ್ಮ ಕೆಲಸಗಳಿಗೆ ಸ್ವಲ್ಪ ಮಟ್ಟಿನ ಧನಸಹಾಯ ದೊರೆಯುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ಸರ್ಕಾರಿ ಸಂಸ್ಥೆಗಳು ಅಥವಾ ಸಂಘ-ಸಂಸ್ಥೆಗಳಿಂದ ಬರಬೇಕಾಗಿದ್ದ ಸಹಾಯಧನ ಈಗ ಬರುತ್ತದೆ. ಯಾವುದೇ ಆಸ್ತಿಯ ದಾಖಲಾತಿಯ ಪತ್ರಗಳನ್ನು ಮಾಡುವಾಗ ಸಾಕಷ್ಟು ಎಚ್ಚರವಹಿಸಿರಿ. ಸಣ್ಣ ಸಣ್ಣ ವಿಚಾರಗಳಿಗೆ ಹಿರಿಯರೊಡನೆ ವಾಗ್ವಾದ ಬೇಡ. ನಿಮ್ಮ ನಿವೇಶನದ ಅಕ್ಕಪಕ್ಕದವರಿಂದ ಇದ್ದ ಕಿರುಕುಳ ದೂರವಾಗುತ್ತದೆ. ನಿಮ್ಮ ಭೂಮಿಯ ಬೆಲೆ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಸಣ್ಣ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಿರಿ. ಹೊಸ ಉದ್ಯೋಗದಲ್ಲಿ ನಿಮ್ಮ ಶ್ರದ್ಧೆಯಿಂದ ಹಿರಿಯ ಅಧಿಕಾರಿಗಳ ಗಮನಸೆಳೆಯುವಿರಿ. ನಿಮ್ಮ ಕೈಕೆಳಗಿನ ಕೆಲಸಗಾರರೊಡನೆ ತಾಳ್ಮೆಯಿಂದ ವರ್ತಿಸುವುದು ಬಹಳ ಅಗತ್ಯ. ಖರ್ಚು ವೆಚ್ಚದಲ್ಲಿ ನಿಯಂತ್ರಣವನ್ನು ಸಾಧಿಸಿ ಧನ ನಿರ್ವಹಣೆಯನ್ನು ಮಾಡುವಿರಿ. ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಇದ್ದ ಕೆಲ ಸಂಕಷ್ಟಗಳು ದೂರವಾಗುತ್ತವೆ. ತಾಯಿಯ ಮಾರ್ಗದರ್ಶನ ನಿಮ್ಮ ವ್ಯವಹಾರದಲ್ಲಿ ನಷ್ಟ ಅನುಭವಿಸದಂತೆ ತಡೆಯುತ್ತದೆ. ಕೆಲವು ರಾಜಕಾರಣಿಗಳಿಗೆ ಆಶಾದಾಯಕ ಸನ್ನಿವೇಶಗಳು ಒದಗಿ ಬಂದು ಯಾವುದೇ ಪರಿಸ್ಥಿತಿಯನ್ನು ತಮ್ಮತ್ತ ತಿರುಗಿಸಿಕೊಳ್ಳುವ ಕಲೆ ಸಿದ್ಧಿಸುತ್ತದೆ. ಮಿತ್ರರೊಡನೆ ಹಣಕಾಸಿನ ವಿಚಾರಗಳಲ್ಲಿ ಸಂಭವಿಸಿದ್ದ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಮಾತೃ ವರ್ಗದವರಿಂದ ಧನಸಹಾಯ ದೊರೆತು ನಿಮ್ಮ ಯೋಜಿತ ಕೆಲಸ ಕಾರ್ಯಗಳಿಗೆ ಅನುಕೂಲವಾಗುತ್ತದೆ. ವಾಹನ ಚಾಲನೆ ವೇಳೆ ಸಾಕಷ್ಟು ಎಚ್ಚರಿಕೆ ತೆಗೆದುಕೊಳ್ಳಿರಿ. ಬೆಂಕಿಯೊಂದಿಗೆ ಕೆಲಸ ಮಾಡುವವರು ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳುವುದು ಬಹಳ ಉತ್ತಮ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ನಿಗಾವಹಿಸುವುದು ಅಗತ್ಯ. ರಸ್ತೆ ನಿರ್ಮಾಣ ಮಾಡುವ ಗುತ್ತಿಗೆದಾರರಿಗೆ ಹೊಸ ಗುತ್ತಿಗೆಗಳು ಸಿಗುವ ಸಂದರ್ಭವಿದೆ. ಆಹಾರ ವಸ್ತುಗಳನ್ನು ರಫ್ತು ಮಾಡುವವರಿಗೆ ಹೆಚ್ಚಿನ ರಫ್ತಿಗಾಗಿ ಬೇಡಿಕೆ ಬರುವ ಸಾಧ್ಯತೆ ಇದೆ. ಸ್ವಂತ ಉದ್ದಿಮೆದಾರರಿಗೆ ಇದ್ದ ಕಾರ್ಮಿಕ ಸಮಸ್ಯೆಗಳು ದೂರವಾಗುತ್ತವೆ. ನೀವು ಮಾರಬೇಕೆಂದಿರುವ ಆಸ್ತಿಗಳ ಮಾರಾಟ ಸ್ವಲ್ಪ ನಿಧಾನವಾಗಬಹುದು. ಕಣ್ಣಿನ ತೊಂದರೆ ಇರುವವರು ಚಿಕಿತ್ಸೆಯನ್ನು ಪಡೆಯುವುದು ಉತ್ತಮ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ವೈಯಕ್ತಿಕ ಜೀವನದಲ್ಲಿ ಸ್ವಲ್ಪಮಟ್ಟಿನ ಅಭಿವೃದ್ಧಿಯನ್ನು ಕಾಣಬಹುದು. ಆಸ್ತಿ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣುವಿರಿ. ಹಿರಿಯ ಮಹಿಳಾಮಣಿಗಳಿಗೆ ಗೌರವಾದರಗಳು ದೊರೆಯುತ್ತವೆ. ಪ್ರತಿಭಾ ಸಂಪನ್ನರಿಗೆ ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಈ ಹಿಂದೆ ಬಂದಿದ್ದ ಆಪಾದನೆಗಳಿಂದ ಮುಕ್ತರಾಗುವ ಅವಕಾಶ ಒದಗಿ ಬರುತ್ತದೆ. ಹೊಸ ಗೃಹೋದ್ಯಮ ಆರಂಭಿಸುವ ಸಲುವಾಗಿ ಸೂಕ್ತ ವ್ಯಕ್ತಿಗಳ ಜೊತೆ ಮಾತುಕತೆಯನ್ನು ಮಾಡುವಿರಿ. ಹೈನುಗಾರಿಕೆ ಮಾಡುತ್ತಿರುವವರಿಗೆ ಯಶಸ್ಸಿನ ಹಾದಿ ತೆರೆಯುತ್ತದೆ. ಕಬ್ಬಿಣದ ಸರಳಿನಲ್ಲಿ ಅಲಂಕಾರಿಕ ವಸ್ತುಗಳನ್ನು ತಯಾರಿಸುವವರಿಗೆ ಆದಾಯ ವೃದ್ಧಿಸುತ್ತದೆ. ವಿದ್ಯುತ್ ಉಪಕರಣಗಳ ಮಾರಾಟಗಾರರಿಗೆ ವ್ಯಾಪಾರ ವೃದ್ಧಿಸುತ್ತದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಗೃಹ ನಿರ್ಮಾಣ ಕಾರ್ಯದಲ್ಲಿ ಇದ್ದ ತೊಡಕುಗಳು ನಿವಾರಣೆಯಾಗಿ ಪ್ರಗತಿಯನ್ನು ಕಾಣಬಹುದು. ಹಣದ ಹರಿವು ಕಡಿಮೆ ಇದ್ದರೂ ಆತಂಕಗೊಳ್ಳುವ ಪರಿಸ್ಥಿತಿ ಇರುವುದಿಲ್ಲ. ಮಹಿಳಾ ಕಲಾವಿದರುಗಳಿಗೆ ಉತ್ತಮ ಪ್ರೋತ್ಸಾಹ ದೊರೆತು ಆದಾಯ ಹೆಚ್ಚುತ್ತದೆ. ಪತ್ರಿಕಾರಂಗದಲ್ಲಿ ಇರುವವರಿಗೆ ಹೆಸರು ತರುವಂತಹ ಘಟನೆಗಳು ಸಂಭವಿಸುತ್ತವೆ. ವಿದ್ಯುತ್ ಉಪಕರಣಗಳನ್ನು ರಿಪೇರಿ ಮಾಡುವವರಿಗೆ ಉತ್ತಮ ಆದಾಯ ದೊರೆಯುತ್ತದೆ. ನಿಮ್ಮ ಉದ್ದಿಮೆ ವಿಚಾರದಲ್ಲಿ ಸಂತೋಷ ವಾಗುವಂತಹ ವಾರ್ತೆ ಒಂದನ್ನು ಕೇಳುವಿರಿ. ನ್ಯಾಯವಾದಿಗಳಿಗೆ ಸೂಕ್ತ ದಾವೆಗಳು ದೊರೆತು ಉತ್ತಮ ಹೆಸರು ಬರುತ್ತದೆ. ವಾಹನ ರಿಪೇರಿಗಾಗಿ ಹೆಚ್ಚು ಖರ್ಚು ಬರಬಹುದು .

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ವೃತ್ತಿ ಜೀವನದ ಸಮಸ್ಯೆಗಳಿಗೆ ಅಲ್ಪಮಟ್ಟಿನ ಪರಿಹಾರ ದೊರೆಯುತ್ತದೆ. ಹೋಟೆಲ್ ಉದ್ದಿಮೆದಾರರಿಗೆ ಸರ್ಕಾರದ ಕಡೆಯಿಂದ ಹಿತಕರ ಸಂದೇಶವೊಂದು ಬರುತ್ತದೆ. ಹೊಸ ವಾಹನ ಮಾರಾಟ ಮಾಡುವವರಿಗೆ ಮಾರಾಟದಲ್ಲಿ ಪ್ರಗತಿ ಇರುತ್ತದೆ. ಕುಟುಂಬ ಸಮೇತ ಸಂತೋಷದ ವಿಹಾರಕ್ಕಾಗಿ ಪ್ರಯಾಣ ಬೆಳೆಸುವಿರಿ. ಕೃಷಿಕರಿಗೆ ನಿರೀಕ್ಷಿತ ಆದಾಯ ಬಂದು ಸಂತೋಷವಾಗುತ್ತದೆ. ವಿದ್ಯುತ್ ಉಪಕರಣಗಳನ್ನು ತಯಾರು ಮಾಡಿ ಮಾರುವವರಿಗೆ ಉತ್ತಮ ಆದಾಯ ಇರುತ್ತದೆ. ಒಡಹುಟ್ಟಿದವರೊಡನೆ ಜೊತೆಗೂಡಿ ನಿಮ್ಮ ಶತ್ರುಗಳನ್ನು ನಿಗ್ರಹಿಸುವಿರಿ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಸ್ತ್ರೀಯರ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಉತ್ತಮ ವ್ಯಾಪಾರವಿರುತ್ತದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಮಕ್ಕಳಿಂದ ನಿಮಗೆ ಧನಸಹಾಯ ಬರುತ್ತದೆ. ಮೂಳೆ ನೋವು ಸ್ವಲ್ಪ ಹೆಚ್ಚಾಗಬಹುದು. ದೈನಂದಿನ ಚಟುವಟಿಕೆಗಳಲ್ಲಿ ಸಾಕಷ್ಟು ಉತ್ಸಾಹವನ್ನು ಕಾಣಬಹುದು. ಆಶಿಸಿದ್ದ ದೇವತಾ ದರ್ಶನವನ್ನು ಮಾಡುವ ಯೋಗವಿದೆ. ಸಮಾಲೋಚನೆ ನಡೆಸಿ ಮಾಡಿಕೊಂಡ ಒಪ್ಪಂದದ ಹಣದ ವ್ಯವಹಾರಗಳಲ್ಲಿ ಲಾಭ ಕಾಣಬಹುದು. ನಿಮ್ಮ ವೈಯಕ್ತಿಕ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ನಿಮಗೆ ಕೆಲವೊಂದು ಸಾಮಾಜಿಕ ಜವಾಬ್ದಾರಿ ಬರುವ ಸಾಧ್ಯತೆಗಳಿವೆ. ಕೆಲವರಿಗೆ ಅನಿರೀಕ್ಷಿತವಾಗಿ ಉತ್ತಮ ಹುದ್ದೆ ದೊರೆಯುವ ಸಾಧ್ಯತೆ ಇದೆ. ಸಂಗಾತಿಯಿಂದ ನಿಮಗೆ ಧನಸಹಾಯ ಒದಗಿಬರುವ ಸಾಧ್ಯತೆ ಇದೆ. ವಾರಾಂತ್ಯಕ್ಕೆ ಸಂತೋಷಕೂಟಗಳಲ್ಲಿ ಭಾಗವಹಿಸುವ ಅವಕಾಶಗಳಿವೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಈ ವಾರ ನಿಮಗೆ ಆತ್ಮಗೌರವ ಹೆಚ್ಚಾಗಿರುತ್ತದೆ. ನಿಮ್ಮ ಆದಾಯವು ತೃಪ್ತಿಪಡುವ ಸ್ಥಿತಿಯಲ್ಲಿರುತ್ತದೆ. ಎಲ್ಲರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಗುಣದಿಂದ ಎಲ್ಲರೂ ನಿಮಗೆ ಸಹಕಾರ ನೀಡುವರು. ಹೆಚ್ಚಿನ ವಿದ್ಯೆಯನ್ನು ಕಲಿಯಲು ದೂರ ಪ್ರಯಾಣ ಮಾಡಬೇಕಾಗುತ್ತದೆ. ಅಡಿಗೆ ಭಟ್ಟರಿಗೆ ಉತ್ತಮ ಕೆಲಸಗಳು ದೊರೆತು ಸಂಪಾದನೆ ಹೆಚ್ಚುತ್ತದೆ. ಸುಗಂಧ ದ್ರವ್ಯಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಣೆಯಾಗುತ್ತದೆ. ಕೆಲವರಿಗೆ ತಂದೆಯಿಂದ ಕೃಷಿ ಭೂಮಿ ದೊರೆಯುವ ಸಾಧ್ಯತೆ ಇದೆ. ನರದೌರ್ಬಲ್ಯ ಇರುವವರು ಎಚ್ಚರವಹಿಸುವುದು ಒಳ್ಳೆಯದು. ವಿವಾಹ ಆಕಾಂಕ್ಷಿಗಳಿಗೆ ಸಂಬಂಧ ಒದಗಿಬರುವ ಸಾಧ್ಯತೆ ಇದೆ. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಅಭಿವೃದ್ಧಿ ಇರುತ್ತದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 23)
ಮನೆಗೆ ಕೆಲವೊಂದು ಗೃಹೋಪಯೋಗಿ ವಸ್ತುಗಳನ್ನು ಖರೀದಿ ಮಾಡುವಿರಿ. ಗೊಂದಲದ ಸ್ಥಿತಿಯಿಂದ ಯುವಕರು ವ್ಯವಹಾರಗಳಲ್ಲಿ ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ. ಮಹಿಳೆಯರ ಸಿದ್ಧಪಡಿಸಿದ ಬಟ್ಟೆಗಳನ್ನು ಮಾರುವವರಿಗೆ ಸಾಕಷ್ಟು ಲಾಭ ದೊರೆಯುತ್ತದೆ. ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ವ್ಯಾಪಾರಸ್ಥರು ಗ್ರಾಹಕರೊಂದಿಗೆ ಸೌಮ್ಯವಾಗಿ ವರ್ತಿಸುವುದು ಅವರಿಗೆ ಉತ್ತಮ. ಕಾಲುಗಳಲ್ಲಿ ಇದ್ದ ಸಣ್ಣಪುಟ್ಟ ನೋವು ಮರೆಯಾಗುತ್ತವೆ. ಮಕ್ಕಳಿಗೆ ತಂದೆಯಿಂದ ಸೂಕ್ತ ಧನಸಹಾಯ ಸಿಗುತ್ತದೆ. ನೀರಿನ ವ್ಯಾಪಾರ ಮಾಡುವವರಿಗೆ ಸ್ವಲ್ಪ ಮಟ್ಟಿನ ಕಾರ್ಮಿಕರ ಸಮಸ್ಯೆ ಬಗೆಹರಿಯುತ್ತವೆ. ಧರ್ಮಪ್ರಚಾರಕರಿಗೆ ಮುನ್ನಡೆ ಇರುತ್ತದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಪ್ರಮುಖ ಕೆಲಸಗಳನ್ನು ಮಾಡುವಾಗ ಅತಿಯಾದ ಆತುರ ಬೇಡ. ನೆರೆಹೊರೆಯವರೊಡನೆ ಸಂಬಂಧ ವೃದ್ಧಿಸಿಕೊಳ್ಳುವುದು ಒಳ್ಳೆಯದು. ಪಾಲುದಾರಿಕೆ ವ್ಯವಹಾರದಲ್ಲಿ ಇದ್ದ ಮನಃಸ್ತಾಪ ದೂರವಾಗಿ ಪುನಃ ಒಗ್ಗೂಡಿ ವ್ಯವಹಾರ ನಡೆಸುವಿರಿ. ನಿಮ್ಮ ಆದಾಯವು ಖರ್ಚನ್ನು ಸರಿದೂಗಿಸುವಷ್ಟು ಇರುತ್ತದೆ. ಸಿದ್ಧಪಡಿಸಿದ ಆಹಾರ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ವ್ಯಾಪಾರದಲ್ಲಿ ಮುನ್ನಡೆ ಇರುತ್ತದೆ. ಕಣ್ಣಿನ ವೈದ್ಯರಿಗೆ ಬಿಡುವಿಲ್ಲದ ಕೆಲಸಗಳು ಇರುತ್ತವೆ. ತಾಯಿ-ಮಗಳ ಸಂಬಂಧ ಸಾಕಷ್ಟು ಉತ್ತಮಗೊಳ್ಳುತ್ತದೆ. ಯಂತ್ರಗಳ ಮಾರಾಟ ಮಾಡುವವರಿಗೆ ವ್ಯಾಪಾರದಲ್ಲಿ ಚೇತರಿಕೆ ಇರುತ್ತದೆ. ಒಟ್ಟು ಕುಟುಂಬದ ವ್ಯಾಪಾರದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಬಹುದು.

Leave a Comment

Your email address will not be published. Required fields are marked *