Ad Widget .

ಶಿವಮೊಗ್ಗ: ಪರಿಚಯಸ್ಥರಿಂದಲೇ ಬಾಲಕಿಯ ಅತ್ಯಾಚಾರ| ವಿಡಿಯೋ ವೈರಲ್, ಇಬ್ಬರ ಬಂಧನ

Ad Widget . Ad Widget .

ಶಿವಮೊಗ್ಗ: ಹೊಸನಗರ ಬಸ್​ ನಿಲ್ದಾಣದಲ್ಲಿ ಬಸ್ಸಿಗೆ ಕಾಯುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

Ad Widget . Ad Widget .

ಸಂತೋಷ್ (24) ಹಾಗೂ ಸುನೀಲ್ (26) ಎಂಬವರು ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಬಾಲಕಿ ಬಸ್​ಗಾಗಿ ಕಾಯುತ್ತಾ ನಿಂತಿದ್ದ ವೇಳೆ ಕಾರಿನಲ್ಲಿ ಬಂದ ಈ ಇಬ್ಬರು ಯುವಕರು, ನಾವು ನಿನ್ನ ಗ್ರಾಮಕ್ಕೆ ಹೋಗುತ್ತಿದ್ದೇವೆ ಎಂದು ಪುಸಲಾಯಿಸಿ ಆಕೆಯನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರವೆಸಗಿ ವಿಡಿಯೋ ಸಹ ಮಾಡಿದ್ದರು. ಘಟನೆ ಬಗ್ಗೆ ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಹಾಕಿದ್ದರು. ಹೀಗಾಗಿ, ಬಾಲಕಿ ಈ ಬಗ್ಗೆ ಪೋಷಕರ ಬಳಿ ಬಾಯ್ಬಿಟ್ಟಿರಲಿಲ್ಲ.

ಇದಾದ ಬಳಿಕ ಯುವಕರು ಮತ್ತೆ ತಮ್ಮ ಜೊತೆ ಬರುವಂತೆ ಬಾಲಕಿಗೆ ಒತ್ತಾಯಿಸಿದ್ದಾರೆ. ಆದರೆ, ಬಾಲಕಿ ಪುನಃ ಕರೆದಾಗ ನಿರಾಕರಿಸಿದ್ದಾಳೆ. ಬಾಲಕಿ ನಿರಾಕರಿಸಿದ್ದಕ್ಕೆ ಯುವಕರು ಅತ್ಯಾಚಾರದ ವಿಡಿಯೋವನ್ನು ಲೀಕ್ ಮಾಡಿದ್ದರು.

ಘಟನೆ ಸಂಬಂಧ ಭಾನುವಾರ ಹೊಸನಗರ ಪೊಲೀಸ್ ಠಾಣೆಯಲ್ಲಿ ಬಾಲಕಿಯ ಪೋಷಕರು ದೂರು ದಾಖಲಿಸಿದ್ದಾರೆ.

ಬಂಧಿತ ಯುವಕರು ಈ ಹಿಂದೆ ಬಾಲಕಿಯ ಮನೆಗೆ ಜೆಸಿಬಿ ಕೆಲಸಕ್ಕೆಂದು ಬಂದ ವೇಳೆ ಪರಿಚಯವಾಗಿದ್ದರು ಎನ್ನಲಾಗಿದೆ.

Leave a Comment

Your email address will not be published. Required fields are marked *