Ad Widget .

ಮದುವೆ ಸಮಾರಂಭದಲ್ಲಿ ಸಹೋದರನ ಸಂಬಂಧಿಯೊಡನೆ ಭರ್ಜರಿ ಡ್ಯಾನ್ಸ್ |ಪಿತ್ತ ನೆತ್ತಿಗೇರುತ್ತಿದ್ದಂತೆ ಭಾವಿ ಪತ್ನಿಯ ಕೆಪ್ತಂಡೆಗೆ ಕೊಟ್ಟ ಪತಿ |ಕೆರಳಿದ ವಧುವಿನಿಂದ ವರನ ಬದಲಾವಣೆ

Ad Widget . Ad Widget .

ತಮಿಳುನಾಡು: ವಿವಾಹ ಸಮಾರಂಭದಲ್ಲಿ ಮದುಮಗಳು ಡ್ಯಾನ್ಸ್ ಮಾಡಿದ್ದು, ಈ ಸಂದರ್ಭದಲ್ಲಿ ಆಕ್ರೋಶಗೊಂಡ ವರ ಆಕೆಯ ಕೆನ್ನೆಗೆ ಹೊಡೆದಿದ್ದ, ಇದರ ಪರಿಣಾಮ ಮಧುಮಗಳು ತನ್ನ ಸಹೋದರ ಸಂಬಂಧಿಯನ್ನು ವಿವಾಹವಾಗಿರುವ ಪ್ರಕರಣ ಇದಾಗಿದೆ. ಒಟ್ಟಾಗಿ ಮೂವರ ಜೀವನದ ದಿಕ್ಕನ್ನೇ ಬದಲಿಸಿರುವ ಅಪರೂಪದ ಪ್ರಸಂಗವೊಂದು ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ.

Ad Widget . Ad Widget .

ಏನಿದು ಘಟನೆ:

ಇದೊಂದು ಸಿನಿಮಾ ಶೈಲಿಯಲ್ಲಿ ನಡೆದ ಘಟನೆಯಂತಿದ್ದು, ಸ್ಥಳೀಯ ಪ್ರಸಿದ್ಧ ಉದ್ಯಮಿಯೊಬ್ಬರ ಮಗಳ ವಿವಾಹ ತಮಿಳುನಾಡಿನ ಕಡಂಪುಲಿಯೂರ್ ನಲ್ಲಿ ಜನವರಿ 20ರಂದು ನಡೆಯಬೇಕಾಗಿತ್ತು. ಪನ್ರುಟಿಯ ವಧು ಹಾಗೂ ಪೆರಿಯಕುಟ್ಟುಪಾಳ್ಯಂನ ವರ 2021ರ ನವೆಂಬರ್ 21ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.

2022ರ ಜನವರಿ 19ರಂದು ಜೋಡಿಯ ವಿವಾಹಕ್ಕೆ ಒಂದು ದಿನದ ಮೊದಲು ನಡೆದ ವಿವಾಹ ಸಮಾರಂಭದಲ್ಲಿ ವರ, ವಧು ಹಾಗೂ ಸಂಬಂಧಿಕರು ಪಾಲ್ಗೊಂಡಿದ್ದರು. ವಿವಾಹ ಸಮಾರಂಭದಲ್ಲಿ ನಡೆಯುತ್ತಿದ್ದ ಡ್ಯಾನ್ಸ್ ಗೆ ವಧು ಹೆಜ್ಜೆ ಹಾಕತೊಡಗಿದ್ದಳು, ಆರಂಭದಲ್ಲಿ ಎಲ್ಲರೂ ಸಂಭ್ರಮಿಸಿದ್ದರು. ಏತನ್ಮಧ್ಯೆ ವಧುವಿನ ಸಹೋದರ ಸಂಬಂಧಿಯೊಬ್ಬ ಬಂದು ಆಕೆಯ ಕೈಹಿಡಿದು ಡ್ಯಾನ್ಸ್ ನಲ್ಲಿ ತೊಡಗಿದ್ದ.

ಇದು ವರನಿಗೆ ಸಹಿಸಿಕೊಳ್ಳಲು ಸಾಧ್ಯವಾಗದೆ ತನ್ನ ಭಾವಿ ಪತ್ನಿ ಹಾಗೂ ಸಹೋದರ ಸಂಬಂಧಿಯನ್ನು ದೂರ ತಳ್ಳಿಬಿಟ್ಟಿದ್ದ. ಇದರ ಪರಿಣಾಮ ಇಬ್ಬರ ನಡುವೆ ವಾಗ್ವಾದ ನಡೆದಾಗ, ವರ ವಧುವಿನ ಕೆನ್ನೆಗೆ ಹೊಡೆದು ಬಿಟ್ಟಿದ್ದ. ಕೂಡಲೇ ಆಕೆಯು ವರನ ಕೆನ್ನೆಗೆ ಹೊಡೆದು ಬಿಟ್ಟಿದ್ದಳು. ಈ ಘಟನೆ ನಡೆಯುತ್ತಿದ್ದಂತೆಯೇ ಎರಡು ಕುಟುಂಬಗಳ ಸದಸ್ಯರ ನಡುವೆ ಜಗಳ ಆರಂಭವಾಗಿಬಿಟ್ಟಿತ್ತು. ಇವನನ್ನು ನನ್ನ ಅಳಿಯನನ್ನಾಗಿ ಒಪ್ಪಿಕೊಳ್ಳಲಾರೆ ಎಂದು ವಧುವಿನ ತಂದೆ ಹೇಳಿದ್ದು, ವಧು ಕೂಡಾ ವರನನ್ನು ವಿವಾಹವಾಗುವುದಿಲ್ಲ ಎಂದು ಹೇಳಿಬಿಟ್ಟಿದ್ದಳು!

ಅದೇ ವಿವಾಹ ಸಮಾರಂಭದಲ್ಲಿ ವಧುವಿನ ತಂದೆ ಕೈಹಿಡಿದು ಡ್ಯಾನ್ಸ್ ಮಾಡಿದ್ದ ಸಹೋದರ ಸಂಬಂಧಿ ಹಾಗೂ ಆತನ ಕುಟುಂಬದವರ ಜೊತೆ ಮಾಡಿ ವಿವಾಹ ನಿಶ್ಚಯಿಸಿ, ಜನವರಿ 20ರಂದು ನಿಗದಿಪಡಿಸಿದ್ದ ದಿನಾಂಕದಂದೇ ಮಗಳ ವಿವಾಹ ನೆರವೇರಿಸಿರುವುದಾಗಿ ವರದಿ ವಿವರಿಸಿದೆ.

ವರದಿಯ ಪ್ರಕಾರ, ವಧುವಿನ ಕುಟುಂಬದವರು ತಮಗೆ ಬೆದರಿಕೆ ಹಾಕಿದ್ದು, ಏಳು ಲಕ್ಷ ರೂಪಾಯಿ ಪರಿಹಾರ ಕೊಡಬೇಕೆಂದು ಬೇಡಿಕೆ ಇಟ್ಟಿರುವುದಾಗಿ ವರ ಪೊಲೀಸರಿಗೆ ದೂರು ನೀಡಿದ್ದಾನೆ. ಈತನ ಮೇಲೂ ವಧುವಿಗೆ ಕಪಾಳಮೋಕ್ಷ ಮಾಡಿರುವ ಆರೋಪವೂ ಇದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿರುವುದಾಗಿ ವರದಿ ಹೇಳಿದೆ.

Leave a Comment

Your email address will not be published. Required fields are marked *