ಸುಳ್ಯ: ಪಾದಾಚಾರಿಗೆ ಡಿಕ್ಕಿ ಹೊಡೆದ ಪಿಕಪ್, ವ್ಯಕ್ತಿ ಸಾವು

Ad Widget ... ..

ಸುಳ್ಯ: ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಪಿಕಪ್ ಡಿಕ್ಕಿಯಾದ ಪರಿಣಾಮ ಗಂಭಿರ ಗಾಯಗೊಂಡು ವ್ಯಕ್ತಿ ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತಪಟ್ಟವರನ್ನು ಪೈಚಾರಿನ ನವೀನ್ ಕುಮಾರ್ (60) ಎಂದು ಗುರುತಿಸಲಾಗಿದೆ.

Ad Widget

ಇವರು ಅಡ್ಕಾರಿನಲ್ಲಿ ರೇಷನ್ ಪಡೆಯಲು ತೆರಳಿದ್ದು ಬಸ್ ನಿಂದ ಇಳಿದು ರಸ್ತೆ ದಾಟುತ್ತಿದ್ದ ವೇಳೆ ರಸ್ತೆಯಲ್ಲಿ ಬಂದ ಪಿಕಪ್ ಢಿಕ್ಕಿಯಾಯಿತು. ಪರಿಣಾಮ ನವೀನರು ರಸ್ತೆಗೆ ಎಸೆಯಲ್ಪಟ್ಟು ಗಂಭಿರ ಗಾಯಗೊಂಡರು. ಪಿಕಪ್ ನವರೇ ತಕ್ಷಣ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರಾದರೂ ಅದಾಗಲೇ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *