ಡಿಜಿಟಲ್ ಡೆಸ್ಕ್: ಜಗತ್ತಿನ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ ಅಗ್ರಸ್ಥಾನ ದೊರಕಿದೆ. ಜಾಗತಿಕ ನಾಯಕರಿಗೆ ಸಂಬಂಧಿಸಿದ ‘ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್’ ಬಿಡುಗಡೆ ಮಾಡಿರುವ ರೇಟಿಂಗ್‌ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಕೆನಡಾದ ಕೌಂಟರ್‌ಪಾರ್ಟ್ ಜಸ್ಟಿನ್ ಟ್ರೂಡೋ ಅವರನ್ನು ಹಿಂದಿಕ್ಕಿ ಪ್ರಧಾನಿ ಮೋದಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.
ಪ್ರಧಾನಿ ಮೋದಿ ಶೇ.71ರಷ್ಟು ಅನುಮೋದಿತ ಅಂಕಗಳನ್ನು ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಶೇ.66 ರಷ್ಟು ಅಂಕ ಗಳಿಸಿದ ಮೆಕ್ಸಿಕೋದ ಆಂಟ್ರೆಸ್ ಮ್ಯಾನುಯೆಲ್ ಲೊಪೆಜ್ ಒಬ್ರಡಾರ್ ಇದ್ದಾರೆ.
ಮಾರ್ನಿಂಗ್ ಕನ್ಸಲ್ಟ್ ಪ್ರತಿ ನಾಯಕನನ್ನು ಟ್ರ್ಯಾಕ್ ಮಾಡಲು ಆರಂಭಿಸಿದ ಸಮಯದಿಂದ, 2020ರ ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಅನುಮೋದನೆ ರೇಟಿಂಗ್ ಗರಿಷ್ಠ ಮಟ್ಟದಲ್ಲಿತ್ತು. ಕಳೆದ ವರ್ಷ ಕೋವಿಡ್ ಎರಡನೇ ಅಲೆ ವೇಳೆ ರೇಟಿಂಗ್ ಕಡಿಮೆಯಾಗಿತ್ತು.
ಕಂಪನಿ ಪ್ರಸ್ತುತ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್,ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್, ಬ್ರಿಟನ್ ಮತ್ತು ಯುಎಸ್‌ನ ಸರ್ಕಾರಿ ನಾಯಕರ ಅನುಮೋದನೆ ರೇಟಿಂಗ್ ಟ್ರ್ಯಾಕ್ ಮಾಡುತ್ತಿದೆ.