Ad Widget .

ಕ್ಲಬ್ ಹೌಸ್ ನಲ್ಲಿ ಮುಸ್ಲಿಂ ಮಹಿಳೆಯರ ಕುರಿತು ಅಶ್ಲೀಲ ಮಾತು | ಮೂವರನ್ನು ಬಂಧಿಸಿದ ಪೊಲೀಸರು

Ad Widget . Ad Widget .

ಹರಿಯಾಣ : ಕ್ಲಬ್ ಹೌಸ್ ನಲ್ಲಿ ಮುಸ್ಲಿಂ ಮಹಿಳೆಯ ಕುರಿತು ಅಶ್ಲೀಲ, ದ್ವೇಷದ ಮಾತುಗಳನ್ನಾಡಿದ ಆರೋಪದ ಮೇಲೆ ಹರಿಯಾಣ ಮೂಲದ ಮೂವರನ್ನು ಮುಂಬೈ ಪೋಲಿಸರು ಬಂಧಿಸಿದ್ದಾರೆ.

Ad Widget . Ad Widget .

ಬಂಧಿತ ಆರೋಪಿಗಳನ್ನು ಆಕಾಶ್, ಜೇಶ್ಣವ್ ಮತ್ತು ಯಶ್ ಪರಶಾರ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಒಪ್ಪಿಸುವುದ್ದಾಗಿ ತಿಳಿಸಿದ್ದಾರೆ.

ಕ್ಲಬ್ ಹೌಸ್ ಚರ್ಚೆ ಬೇಧಿಸಿ ದ್ವೇ‍ಷ ಹರಡುತ್ತಿದ್ದವರನ್ನು ಬಂಧಿಸಿದ್ದಕ್ಕಾಗಿ ಮುಂಬೈ ಪೊಲೀಸರನ್ನು ಹಲವರು ಶ್ಲಾಘಿಸಿದ್ದಾರೆ. ಈ ಕುರಿತು ಇಂದು ಮುಂಜಾನೆ ಶಿವಸೇನೆಯ ರಾಜಸಭಾ ಸದ್ಯಸರಾದ ಪ್ರಿಯಾಂಕ ಚತುರ್ವೆದಿ ಅವರು “ಹಿಂಸೆಯನ್ನು ವಿರೋಧಿಸೋಣ, ಕ್ಲಬ್ ಹೌಸ್ ಚರ್ಚೆಗಳನ್ನು ಪತ್ತೆಹಚ್ಚಿ ಆರೋಪಿ೯ಗಳನ್ನು ಬಂಧಿಸಿದ ಮುಂಬೈ ಪೊಲೀಸರಿಗೆ ಧನ್ಯವಾದ” ಎಂದು ಟ್ವೀಟ್ ಮಾಡಿದ್ದಾರೆ.

ಬುಧುವಾರ ದೆಹಲಿ ಪೋಲಿಸರು ಕ್ಲಬ್ ಹೌಸ್ ಮತ್ತು ಗೂಗಲ್‌ಗೆ ಪತ್ರ ಬರೆದು ಮುಸ್ಲಿಂ ಮಹಿಳೆಯರ ಕುರಿತು ಅಶ್ಲೀಲ ಮತ್ತು ದ್ವೇ‍ಷದ ಚರ್ಚೆ ನಡೆಸಿದ್ದ ಆಯೋಜಕರ ಮತ್ತು ಭಾಗವಹಿಸಿದ್ದವರ ವಿವರಗಳನ್ನು ಕೇಳಿದ್ದರು. ಹಾಗೆ ಆಡಿಯೋ ಚಾಟ್‌ನಲ್ಲಿ ಭಾಗವಹಿಸಿದ್ದ ಹಲವು ಸದ್ಯಸರನ್ನು ಪೋಲಿಸರು ಗುರುತಿಸಿದ್ದಾರೆ, ಇದರಲ್ಲಿ ಕೆಲ ಪುರುಷ ಮತ್ತು ಮಹಿಳೆಯರು ಪಾಲ್ಗೊಂಡಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮುಂಬೈ ಮೂಲದ ಸಂಸ್ಥೆಯೊಂದು ಈ ದ್ವೇ‍ಷ ಭಾಷಣಕ್ಕೆ ಸಂಬಂಧಿಸಿದಂತೆ ಕ್ಲಬ್ ಹೌಸ್‌ ಅನ್ನು ನಿಷ್ಕ್ರಿಯಗೊಳಿಸಬೇಕು ಮತ್ತು ಆರೋಪಿಗಳನ್ನು ಬಂಧಿಸಬೇಕೆಂದು ಬುಧುವಾರ ಮುಂಬೈ ನಗರ ಪೋಲಿಸರಿಗೆ ದೂರು ನೀಡಿದ್ದರು.

Leave a Comment

Your email address will not be published. Required fields are marked *