ಸುಳ್ಯ: ಬೆಳ್ಳಾರೆ ಮೂಲದ ಮಹಿಳೆ ಮಂಗಳೂರಿನಲ್ಲಿ ನಾಪತ್ತೆ

ಸುಳ್ಯ: ಮಂಗಳೂರಿನಲ್ಲಿ ಬ್ಯಾಂಕ್ ವ್ಯವಹಾರಕ್ಕೆಂದು ತೆರಳಿದ್ದ ಬೆಳ್ಳಾರೆಯ ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ಇಂದು ವರದಿಯಾಗಿದೆ. ನಾಪತ್ತೆಯಾದ ಮಹಿಳೆ ದಿವ್ಯ (29) ಎಂದು ತಿಳಿದು ಬಂದಿದೆ.

Ad Widget ... ..

ಶುಕ್ರವಾರ ಮಧ್ಯಾಹ್ನ ಮಂಗಳೂರಿನ ಉರ್ವಸ್ಟೋರ್ ನಲ್ಲಿ ಬ್ಯಾಂಕಿಗೆ ಹೋಗಿಬರುವುದಾಗಿ ತೆರಳಿರುವ ಅವರು ನಂತರ ಫೋನ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

Ad Widget

ಮಹಿಳೆಯನ್ನು ಎಲ್ಲಾದರೂ ಕಂಡಲ್ಲಿ ತಿಳಿಸುವಂತೆ ಮಹಿಳೆಯ ಪತಿ ಸಾಮಾಜಿಕ ಜಾಲತಾಣದಲ್ಲಿ ವಿನಂತಿಸಿಕೊಂಡಿದ್ದಾರೆ. ಬೆಳ್ಳಾರೆ ಕಲ್ಮಡ್ಕದ ಮನೆಯಿಂದ ಬೆಳಗ್ಗೆ ಮಂಗಳೂರಿಗೆ ಬಂದಿದ್ದೆವು. ನಂತರ ಬ್ಯಾಂಕಿಗೆ ಹೋಗಿ ಬರುವುದಾಗಿ ಹೇಳಿ ಹೋದಾಕೆ ನಾಪತ್ತೆಯಾಗಿದ್ದಾಳೆ ಎಂದು ಪತಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *