ಮೂಡುಬಿದಿರೆ: ರಸ್ತೆ ಅಪಘಾತದಲ್ಲಿ ಯಕ್ಷಗಾನ ಕಲಾವಿದ ವಾಮನ ಕುಮಾರ್ ಸಾವು

ಮೂಡುಬಿದಿರೆ: ಇಲ್ಲಿನ ಗಂಟಾಲ್ಕಟ್ಟೆಯ ಸಮೀಪ ಜ.20 ರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಮೃತಪಟ್ಟಿದ್ದಾರೆ.

Ad Widget ... ..

ವಾಮನ ಕುಮಾರ್ ವೇಣೂರು (47) ಮೃತರು. ಗಂಟಾಲ್ಕಟ್ಟೆಯ ಸಮೀಪ ಓಮ್ನಿ ಕಾರು ಬೈಕ್ ಢಿಕ್ಕಿಯಾಗಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ವಾಮನ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Ad Widget

ಧರ್ಮಸ್ಥಳ ಮೇಳದ , ಕದ್ರಿ ಮೇಳ ಸೇವೆ ಸಲ್ಲಿಸಿದ್ದ ಇವರು ಪ್ರಸ್ತುತ ಹಿರಿಯಡ್ಕ ಮೇಳದಲ್ಲಿ ಕಲಾವಿದರಾಗಿದ್ದರು. ಕುಂದಾಪುರದ ಕೊಂಕಿ ಎಂಬಲ್ಲಿ ರಾತ್ರಿ ಯಕ್ಷಗಾನವನ್ನು ಮುಗಿಸಿ ಮನೆಗೆ ಹಿಂತಿರುಗುವಾಗ ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ.

26 ವರ್ಷಗಳ ತಿರುಗಾಟ ನಡೆಸಿದ ಅನುಭವಿ ಕಲಾವಿದರಾಗಿದ್ದ ವಾಮನ ಕುಮಾರ್ ಅವರು ಹಾಸ್ಯ, ಸ್ತ್ರೀ, ಪುರುಷ, ಪುಂಡು ಹೀಗೆ ಹಲವು ಪಾತ್ರಗಳನ್ನು ಮಾಡಿ ಅಭಿಮಾನಿಗಳ ಮನಗೆದ್ದಿದ್ದರು . ವಾಮನ್ ಕುಮಾರ್ ಅವರ ಸಾವಿಗೆ ಯಕ್ಷಗಾನ ಕಲಾವಿದರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Leave a Comment

Your email address will not be published. Required fields are marked *