ಸುಳ್ಯ: ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡ ವ್ಯಕ್ತಿಯೋರ್ವರು ಕ್ಯಾಂಟಿನ್ ಒಂದರ ಪಾತ್ರೆಗಳು ಮತ್ತು ಗ್ಯಾಸ್ ಸಿಲಿಂಡರ್ ನ್ನು ಎಸೆದು, ತನ್ನ ಮಗನ ಹೋಟೆಲ್ ಗೆ ನುಗ್ಗಿ ಮಗನಿಗೆ ಕತ್ತಿಯಿಂದ ಕಡಿದ ಘಟನೆ ಮಂಗಳವಾರದಂದು ತಾಲೂಕಿನ ಎಲಿಮಲೆ ಎಂಬಲ್ಲಿ ನಡೆದಿದೆ.
ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯನ್ನು ಎಲಿಮಲೆಯ ರಾಜೇಶ್(55) ಎಂದು ಗುರುತಿಸಲಾಗಿದೆ. ಇವರು ಮಂಗಳವಾರದಂದು ರಾತ್ರಿ ಎಲಿಮಲೆಯಲ್ಲಿ ಕಾರ್ಯಾಚರಿಸುತ್ತಿದ್ದ ಬಾಲಕೃಷ್ಣ ಎಂಬವರ ಕ್ಯಾಂಟಿನ್ ಗೆ ನುಗ್ಗಿ ಪಾತ್ರೆಗಳನ್ನೆಲ್ಲ ಪಕ್ಕದ ಬಾವಿಗೆಸೆದು, ಗ್ಯಾಸ್ ಸಿಲಿಂಡರ್ ನ್ನು ಸುಮಾರು ದೂರ ಹೊತ್ತೊಯ್ದು ಬಿಸಾಡಿದ್ದಾರೆ. ಬಳಿಕ ತನ್ನ ಮಗನ ರೂಮಿನ ಒಳನುಗ್ಗಿ ಆತನ ಕೈಗೆ ಕತ್ತಿಯಿಂದ ಕಡಿದಿರುವುದಾಗಿ ತಿಳಿದುಬಂದಿದೆ. ಬಳಿಕ ಸ್ಥಳೀಯರು ಸೇರಿ ರಾಜೇಶ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.