Ad Widget .

ಟೆನಿಸ್ ಅಂಗಳಕ್ಕೆ ಸಾನಿಯಾ ಮಿರ್ಜಾ ಗುಡ್ ಬೈ| ಎರಡು ದಶಕಗಳ ವೃತ್ತಿಗೆ ವಿದಾಯ ಘೋಷಿಸಿದ ಮೂಗುತಿ ಸುಂದರಿ

Ad Widget . Ad Widget .

ಸ್ಪೋರ್ಟ್ಸ್ ಡೆಸ್ಕ್: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಗೆ ಆಗಮಿಸಿದ ಸಾನಿಯಾ ಮಿರ್ಜಾ, ಇದು ತನ್ನ ಕೊನೆಯ ಋತು ಎಂದು ಹೇಳಿದ್ದು, ಈ ಮೂಲಕ 2022ರಲ್ಲಿ ಕೊನೆಯ ಬಾರಿಗೆ ಟೆನಿಸ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Ad Widget . Ad Widget .

ಬುಧವಾರವೇ ಆಸ್ಟ್ರೇಲಿಯಾ ಓಪನ್ʼನಲ್ಲಿ ಸೋತ ನಂತರ ಅವರು ಈ ಹೇಳಿಕೆಯನ್ನ ನೀಡಿದರು. ಇದು ತನ್ನ ಕೊನೆಯ ಸೀಸನ್ ಎಂದು ಸಾನಿಯಾ ಮಿರ್ಜಾ ಹೇಳಿದರು.

ಪಂದ್ಯದ ನಂತರ, ‘ನಾನು ಉತ್ತಮವಾಗಿ ಆಡಬಲ್ಲೆ ಎಂದು ನಾನು ಭಾವಿಸುತ್ತೇನೆ. ಆದರೆ ಈಗ ದೇಹವು ಅದನ್ನ ಆ ರೀತಿ ಬೆಂಬಲಿಸಲು ಸಾಧ್ಯವಿಲ್ಲ’ ಎಂದು ಸಾನಿಯಾ ಹೇಳಿದರು. 2003ರಿಂದ ಅಂತಾರಾಷ್ಟ್ರೀಯ ಟೆನಿಸ್ ಆಡುತ್ತಿರುವ ಸಾನಿಯಾ ಮಿರ್ಜಾ ಸುಮಾರು ಎರಡು ದಶಕಗಳ ನಂತರ ಅಂಕಣದಿಂದ ನಿರ್ಗಮಿಸಲಿದ್ದಾರೆ.

Leave a Comment

Your email address will not be published. Required fields are marked *