ಧರ್ಮಪುರಿ: 1 ಕೆ.ಜಿ. ಚಿಕನ್ ಚಿಲ್ಲಿ ಹಾಗೂ ಬಿರಿಯಾನಿ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದವರ ಮೇಲೆ ಕೇಸು ದಾಖಲಿಸಿರುವ ಘಟನೆ ಧರ್ಮಪುರಿಯ ಮುಕ್ಕಲನಾಯಕನಪಟ್ಟಿ ಗ್ರಾಮದಲ್ಲಿ ನಡೆದಿದೆ.
ಪೊಂಗಲ್ ಹಬ್ಬದ ಪ್ರಯುಕ್ತ ಗ್ರಾಮಸ್ಥರು ಪ್ರತಿ ವರ್ಷ ಈ ಸ್ಪರ್ಧೆಯನ್ನು ಇಲ್ಲಿ ಆಯೋಜಿಸುತ್ತಿದ್ದರು. ಸ್ಪರ್ಧೆಯಲ್ಲಿ 15 ಕೆ.ಜಿ. ಚಿಕನ್ ಫ್ರೈ ಮಾಡಿ, ಸ್ಪರ್ಧೆಯಲ್ಲಿ ಭಾಗವಹಿಸಿದ್ದ 15 ಯುವಕರಿಗೆ ಬಡಿಸಲಾಯಿತು. ಇನ್ನೂ ಬಿರಿಯಾನಿ ತಿನ್ನುವ ಸ್ಪರ್ಧೆಯಲ್ಲಿ ಒಟ್ಟು 21 ಮಂದಿ ಯುವಕರು ಭಾಗಿಯಾಗಿದ್ದರು.
ಕೋವಿಡ್ ಹಿನ್ನೆಲೆಯಲ್ಲಿ ಭಾನುವಾರ ಲಾಕ್ ಡೌನ್ ಜಾರಿ ಮಾಡಲಾಗಿತ್ತು. ಆದರೆ, ಲಾಕ್ ಡೌನ್ ನಡುವೆಯೇ ಚಿಕನ್ ಚಿಲ್ಲಿ ಹಾಗೂ ಚಿಕನ್ ಬಿರಿಯಾನಿ ತಿನ್ನುವ ಸ್ಪರ್ಧೆ ಆಯೋಜಿಸಿದ್ದಕ್ಕಾಗಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಒಟ್ಟು 40 ಯುವಕರ ಮೇಲೆ ಕೇಸ್ ಹಾಕಲಾಗಿದೆ. ಕೊವಿಡ್ ನೆಪದಲ್ಲಿ ಜನರ ಸಂತಸವನ್ನು ಕಸಿದುಕೊಳ್ಳುವ ನಿಯಮಗಳ ವಿರುದ್ಧ ಇದೀಗ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.