Ad Widget .

ಬೆಂಗಳೂರು: ಕೂದಲಳತೆಯ ಅಂತರದಲ್ಲಿ ತಪ್ಪಿದ ವಿಮಾನ ಅಪಘಾತ| ಅದೃಷ್ಟವಶಾತ್ ನೂರಾರು ಪ್ರಯಾಣಿಕರು ಪಾರು

Ad Widget . Ad Widget .

ಬೆಂಗಳೂರು: ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೂದಲಳತೆಯ ಅಂತರದಲ್ಲಿ ಭಾರಿ‌ ಅನಾಹುತ ತಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Ad Widget . Ad Widget .

ಟೇಕ್ ಆಫ್​ ಆಗುವ ವೇಳೆ ಒಂದೇ ದಿಕ್ಕಿನಲ್ಲಿ ಎರಡು ವಿಮಾನಗಳು ಮುಖಾಮುಖಿ ಬಂದಿದ್ದು, ಸ್ವಲ್ಪದರಲ್ಲೆ ಈ ಅನಾಹುತ ತಪ್ಪಿದೆ. ಜನವರಿ 7 ರಂದು‌ ಈ ಘಟನೆ ನಡೆದಿದ್ದು, ಒಂದೇ ಸಮಯದಲ್ಲಿ ಟೇಕ್ ಆಫ್​ ಗೆ ಬಂದ ಎರಡೂ ವಿಮಾನಗಳು ಇಂಡಿಗೋ ವಿಮಾನ ಸಂಸ್ಥೆಯದ್ದಾಗಿವೆ. ಕೊಲ್ಕತ್ತಾ ಮತ್ತು ಭುವನೇಶ್ವರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನಗಳು ಇವಾಗಿದ್ದವು. 6E455 ಮತ್ತು 6E246 ಸಂಖ್ಯೆಯ ಎರಡು ವಿಮಾನಗಳಲ್ಲಿ ನೂರಾರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.

ಈ ವೇಳೆ ಒಂದೇ ರನ್ ವೇ ಮೇಲೆ ಬಂದ ಪರಿಣಾಮ ಅವು ಪರಸ್ಪರ ಡಿಕ್ಕಿಯಾಗುವ ಸಂಭವವಿತ್ತು. ಇದನ್ನು ತಕ್ಷಣ ಗಮನಿಸಿದ ರಾಡರ್ ಕಂಟ್ರೋಲ್ ರೂಮ್​ನವರು ಒಂದು ವಿಮಾನವನ್ನು ಬಲ ಭಾಗಕ್ಕೆ, ಮತ್ತೊಂದು ವಿಮಾನವನ್ನು ಎಡ ಭಾಗಕ್ಕೆ ಕಳಿಸಿ ಅನಾಹುತ ತಪ್ಪಿಸಿದ್ದಾರೆ. ಈ ವೇಳೆ ಬೇರೆ ವಿಮಾನಗಳು ಲ್ಯಾಂಡಿಂಗ್ ಗೆ ಬಾರದ ಕಾರಣ ‌ಅನಾಹುತ ತಪ್ಪಿದೆ. ಇದೀಗ ತಪ್ಪಿದ ಅನಾಹುತ ಕುರಿತು ಹಿರಿಯ ಅಧಿಕಾರಿಗಳು ಸ್ವಷ್ಟನೆ ಕೇಳಿದ್ದಾರೆ. 2 ರನ್ ವೇ ಇದ್ದರೂ ನಿರ್ಲಕ್ಷ್ಯಕ್ಕೆ ಕಾರಣ ಏನು ಅನ್ನೋ ಬಗ್ಗೆ ತನಿಖೆ ನಡೆಯಬೇಕಿದೆ.

Leave a Comment

Your email address will not be published. Required fields are marked *