Ad Widget .

ಗಣರಾಜ್ಯೋತ್ಸವದಂದು ಮೋದಿ ಹತ್ಯೆಗೆ ಉಗ್ರರ ಸಂಚು

Ad Widget . Ad Widget .

ನವದೆಹಲಿ: ಆಜಾದಿ ಕಾ ಅಮೃತ್ ಮಹೋತ್ಸವದ ವೇಳೆ ನಡೆಯುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಏಷ್ಯಾ ಖಂಡದ ಐದು ರಾಷ್ಟ್ರಗಳ ಗಣ್ಯರನ್ನು ಹತ್ಯೆ ಮಾಡಲು ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನದ ಉಗ್ರ ಸಂಘಟನೆಗಳು ಸಂಚು ರೂಪಿಸಿರುವ ಆತಂಕಕಾರಿ ಮಾಹಿತಿ ಹೊರಬಂದಿದೆ.

Ad Widget . Ad Widget .

ಕೇಂದ್ರ ಗುಪ್ತದಳ ರವಾನಿಸಿರುವ 9 ಪುಟಗಳ ಮಾಹಿತಿ ಮಾಧ್ಯಮಗಳಿಗೆ ಲಭ್ಯವಾಗಿದ್ದು, ಅದರಲ್ಲಿ ವಿಧ್ವಂಸಕ ಕೃತ್ಯದ ಸಂಚಿನ ಸಮಗ್ರ ವಿವರಣೆ ಇದೆ. 75ನೇ ವರ್ಷದ ಗಣರಾಜ್ಯೋತ್ಸವದ ವೇಳೆ ಪ್ರಧಾನಿ ನರೇಂದ್ರ ಮೋದಿ, ಖಜಕಿಸ್ತಾನ್, ಕಿಜಕಿಸ್ತಾನ್, ತುರ್ಕಿಸ್ತಾನ್, ತಜಕಿಸ್ತಾನ್ ಹಾಗೂ ಉಬೇಕಿಸ್ತಾನ್ ದೇಶಗಳ ಗಣ್ಯ ಅತಿಥಿಗಳನ್ನು ಹತ್ಯೆ ಮಾಡುವ ಹುನ್ನಾರ ನಡೆದಿದೆ.

ಸ್ವಾತಂತ್ರೋತ್ಸವದ ಆಜಾದಿ ಕಾ ಅಮೃತ ಮಹೋತ್ಸವದ ವೇಳೆ ನಡೆಯುವ ಗಣರಾಜ್ಯೋತ್ಸವಕ್ಕೆ ಏಷ್ಯಾ ಖಂಡದ ಈ ಐದು ದೇಶಗಳ ಪ್ರಮುಖರನ್ನು ಅತಿಥಿಗಳನ್ನಾಗಿ ಆಹ್ವಾನಿಸುವ ಸಾಧ್ಯತೆಯಿದೆ.

Leave a Comment

Your email address will not be published. Required fields are marked *