ಮಂಗಳೂರು: ಕಾಂಗ್ರೆಸ್ ಕಚೇರಿಯೊಳಗೆ ಕಾರ್ಯಕರ್ತರ ಜಟಾಪಟಿ|

Ad Widget ... ..

ಮಂಗಳೂರು: ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಯೂತ್ ಕಾಂಗ್ರೆಸ್ ಹಾಗೂ ರಮಾನಾಥ್ ರೈ ಬಣದ ನಡುವೆ ಹೊಯ್ ಕೈ ನಡೆದಿರುವ ಘಟನೆ ವರದಿಯಾಗಿದೆ.

Ad Widget

ಕೇಂದ್ರ ಸರಕಾರ ನಾರಾಯಣ ಗುರು ಅವರ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವ ಘಟನೆಯನ್ನು ಖಂಡಿಸಿ, ಯುವ ಕಾಂಗ್ರೆಸ್ ಹಮ್ಮಿಕೊಂಡಿರುವ “ನಾರಾಯಣ ಗುರು ಕಡೆಗೆ ನಮ್ಮ ನಡಿಗೆ” ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ರಮಾನಾಥ ರೈಗಳು ವೇದಿಕೆಯಲ್ಲಿ ನಿಂತು ಮಾತನಾಡುತ್ತಿದ್ದ ವೇಳೆ ಮೂಲ್ಕಿ ವಲಯದ ನಾಯಕರೊಬ್ಬರು ರೈಗಳನ್ನು ನಿಂದಿಸಿ ಮಾತನಾಡಿದ್ದೇ ಈ ವಿವಾದಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಈ ವೇಳೆ ಹಿರಿಯ ನಾಯಕರಾದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಬಿ ರಮಾನಾಥ ರೈ, ಜೆ ಆರ್ ಲೋಬೋ, ಮಂಜುನಾಥ ಭಂಡಾರಿ, ಯು ಟಿ ಖಾದರ್‌ ಅವರ ಉಪಸ್ಥಿತಿಯಲ್ಲೇ ಈ ಬಗ್ಗೆ ಯುವ ನಾಯಕರೊಂದಿಗೆ ಮಾತಿನ ಚಕಮಕಿ ನಡೆದು ಬಳಿಕ ಸಂಧಾನ ಮಾಡಲಾಗಿದೆ.

Leave a Comment

Your email address will not be published. Required fields are marked *