Ad Widget .

ಸಂಕ್ರಾಂತಿ ಆಚರಣೆ| ಕುಡಿದ ಮತ್ತಲ್ಲಿ ಮೇಕೆ ಬದಲು ಮನುಷ್ಯನ ತಲೆಯನ್ನೇ ಕಡಿದ!

Ad Widget . Ad Widget .

ನವದೆಹಲಿ: ಮಕರ ಸಂಕ್ರಾಂತಿ ಹಬ್ಬದಂದು ಪ್ರಾಣಿ ಬಲಿ ನೀಡುವ ಸಂದರ್ಭದಲ್ಲಿ ಪ್ರಾಣಿಯ ಬದಲು ಮನುಷ್ಯನ ತಲೆಯನ್ನು ಕಡಿದ ಭೀಭತ್ಸ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

Ad Widget . Ad Widget .

ಆರೋಪಿ ಛಲಪತಿ ಪ್ರಾಣಿಬಲಿ ವೇಳೆ ಮೇಕೆ(ಆಡು)ಯ ತಲೆ ಕಡಿಯಬೇಕಾಗಿತ್ತು. ಆದರೆ ಛಲಪತಿ ವಿಪರೀತ ಮದ್ಯಪಾನ ಮಾಡಿದ್ದು, ಮೇಕೆಯ ತಲೆಯ ಬದಲು ಅದನ್ನು ಹಿಡಿದುಕೊಂಡಿದ್ದ ಸುರೇಶ್ ಎಂಬಾತನ ತಲೆ ಕತ್ತರಿಸಿರುವುದಾಗಿ ವರದಿ ಹೇಳಿದೆ.

ಮಕರ ಸಂಕ್ರಾಂತಿಯಂದು ಸ್ಥಳೀಯ ಯೆಲ್ಲಮ್ಮಾ ದೇವಾಲಯ ಪ್ರಾಣಿ ಬಲಿಯನ್ನು ಆಯೋಜಿಸಿತ್ತು. ಸುರೇಶ್ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ರಕ್ತದ ಕೋಡಿ ಹರಿದು ಹೋಗಿದ್ದು, ಘಟನೆಯಿಂದ ನೆರೆದಿದ್ದ ಭಕ್ತರು ಆಘಾತಕ್ಕೊಳಗಾಗಿದ್ದಾರೆ.

ಅರೋಪಿ ಛಲಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಮದನಪಲ್ಲಿ ಗ್ರಾಮೀಣ ಪ್ರದೇಶವಾದ ವಲಸಪಲ್ಲಿ ಎಂಬಲ್ಲಿ ನಡೆದಿದೆ.

Leave a Comment

Your email address will not be published. Required fields are marked *