Ad Widget .

ಉಪ್ಪಿನಂಗಡಿ: ಬೈಕ್ ಕದ್ದು ಪರಾರಿಯಾಗುತ್ತಿದ್ದಾಗ ಲಾರಿ ಢಿಕ್ಕಿ – ಸವಾರರರಿಬ್ಬರು ಗಂಭೀರ

Ad Widget . Ad Widget .

ಉಪ್ಪಿನಂಗಡಿ: ಗಾಂಧಿಪಾರ್ಕ್ ಬಳಿಯ ಜೈನ ಬಸದಿ ಸಮೀಪದ ಮನೆಯೊಂದರಲ್ಲಿ ನಿಲ್ಲಿಸಿದ್ದ ಬೈಕ್ ನ್ನು ಕಳ್ಳರು ನಕಲಿ ಕೀ ಬಳಸಿ ಕಳವುಗೈದು ತೆರಳುತ್ತಿದ್ದಾಗ ಅಪಘಾತವಾದ ಘಟನೆ ನಡೆದಿದೆ.

Ad Widget . Ad Widget .

ಬೈಕನ್ನು ಹಿರೇಬಂಡಾಡಿ ಗ್ರಾಮದ ಕೊಳ್ಳೇಜಾಲ್ ‌ನಿವಾಸಿ ಮುಹಮ್ಮದ್ ಎಂಬವರದು. ಇವರು ಬೈಕ್ ಕಾಲವಾದವಾದ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ಕೂಡಾ ದಾಖಲಿಸಿದ್ದರು.

ಆದರೆ ಅಪರಿಚಿತ ಕಳ್ಳರು ಬೈಕ್ ಕದ್ದೊಯ್ದು ಪರಾರಿಯಾಗುತ್ತಿದ್ದ ವೇಳೆ ಬೈಕ್ ಶಿರಾಡಿ ಸಮೀಪದ ಅಡ್ಡಹೊಳೆ ಎಂಬಲ್ಲಿ ಲಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸವಾರನನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಅಪಘಾತಕ್ಕೀಡಾದ ಬೈಕ್ ನ ರಿಜಿಸ್ಟರ್ ನಂಬರ್ ಆಧಾರದಲ್ಲಿ ಮಾಲಕನನ್ನು ಪತ್ತೆಹಚ್ಚಿ ವಿಚಾರಿಸಿದಾಗ, ಮಾಲಕ ಮಹಮ್ಮದ್ ಅವರು ನಿಲ್ಲಿಸಿದ್ದ ಬೈಕ್ ನ್ನು ಕದ್ದೊಯ್ದ ಘಟನೆ ಬೆಳಕಿಗೆ ಬಂದಿದೆ.

Leave a Comment

Your email address will not be published. Required fields are marked *