Ad Widget .

ಪಂಜಾಬ್ ವಿಧಾನಸಭಾ ಚುನಾವಣೆ ಮುಂದೂಡಿಕೆ| ಫೆ.14 ರಂದು ನಡೆಯಬೇಕಿದ್ದ‌ ಮತದಾನ|

Ad Widget . Ad Widget .

ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣಾ ದಿನಾಂಕ ಮುಂದೂಡಲಾಗಿದ್ದು, ಫೆ.20ರಂದು ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

Ad Widget . Ad Widget .

ಫೆ.14ರಂದು ನಡೆಯಬೇಕಿದ್ದ ವಿಧಾನಸಭಾ ಚುನಾವಣೆ ದಿನಾಂಕವನ್ನು ಮುಂದೂಡುವಂತೆ ಪಂಜಾಬ್ ಆಡಳಿತ ಹಾಗೂ ವಿಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು. ಮನವಿಗೆ ಸ್ಪಂದಿಸಿದ ಆಯೋಗ ಇದೀಗ ಫೆ.14 ರ ಬದಲು ಫೆ.20ಕ್ಕೆ ಮುಂದೂಡಿದೆ.

ಚುನಾವಣೆ ಮುಂದೂಡುವಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮುಖ್ಯಚುನಾವಣಾ ಆಯುಕ್ತರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆ ದಿನಾಂಕ ಮುಂದೂಡಲಾಗಿದ್ದು, ಪಂಜಾಬ್ ನ ಎಲ್ಲಾ 117 ಸ್ಥಾನಗಳಿಗೆ ಫೆ.20ರಂದು ಮತದಾನ ನಡೆಯಲಿದೆ.

Leave a Comment

Your email address will not be published. Required fields are marked *