Ad Widget .

ವಿದ್ಯಾರ್ಥಿನಿಯ ಫೋಟೋ ಜೊತೆಗೆ ಅನ್ಯಧರ್ಮೀಯನ ಫೋಟೋ ಎಡಿಟ್| ದೂರು ದಾಖಲು

Ad Widget . Ad Widget .

ಮಂಗಳೂರು: ನಗರದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯು ತ್ತಿರುವ ವಿದ್ಯಾರ್ಥಿನಿಯ ಫೋಟೋವೊಂದನ್ನು ಅನ್ಯ ಧರ್ಮೀಯ ಯುವಕನ ಜತೆ ಸಂಬಂಧ ಇದೆ ಎಂದು ಆರೋಪಿಸಿ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಲಾಗಿದ್ದು, ಈ ಬಗ್ಗೆ ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

ನಗರದ ಮೆಡಿಕಲ್‌ ಕಾಲೇಜಿನಲ್ಲಿ 3ನೇ ವರ್ಷದ ಎಂಬಿಬಿಎಸ್‌ ಓದುತ್ತಿರುವ ವಿದ್ಯಾರ್ಥಿನಿಯ ಫೋಟೋವನ್ನು ಆರೋಪಿ ಇನ್‌ ಸ್ಟಾಗ್ರಾಮ್‌ನಿಂದ ಡೌನ್‌ಲೊಡ್‌ ಮಾಡಿಕೊಂಡು ಬಳಿಕ ಇನ್ನೋರ್ವ ಯುವಕನ ಫೋಟೋದ ಜತೆ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾನೆ.

ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ತನ್ನ ಗೆಳೆಯ ಹಾಗೂ ಗೆಳತಿಯರ ಜೊತೆ ತೆಗೆದ ಫೋಟೊಗಳನ್ನು ಸೇರಿಸಿ ತನ್ನ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಸ್ಟೋರಿ ಹಾಕಲಾಗಿದ್ದು, , ಖಾತೆಯಲ್ಲಿರುವ ಫೋಟೊಗಳ ಪೈಕಿ ಒಂದು ಫೋಟೊವನ್ನು ಯಾರೋ ಅಪರಿಚಿತರು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

Leave a Comment

Your email address will not be published. Required fields are marked *